ಗಾಂಧಿನಗರ(ಜ.18): ಭಾರತೀಯರೆಲ್ಲರೂ ಭಾರತೀಯ ಮೂಲದ ಇಂಟರ್ನೆಟ್ ಡಾಟಾ ಬಳಸಬೇಕೆಂದು ರಿಲಯನ್ಸ್ ಇಂಡಸ್ಟ್ರಿಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಕರೆ ನೀಡಿದ್ದಾರೆ.

ಇಲ್ಲಿ ನಡೆಯುತ್ತಿರುವ ವೈಬ್ರೆಂಟ್ ಗುಜರಾತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಅಂಬಾನಿ, ಭಾರತೀಯ ಮೂಲದ ಕಂಪನಿಗಳಿಗೆ ಉತ್ತೇಜನ ನೀಡಲು ವಿದೇಶಿ ಇಂಟರ್ನೆಟ್ ಡಾಟಾ ಕಂಪನಿಗಳ ಮೇಲೆ ಕೇಂದ್ರ ಸರ್ಕಾರ ನಿಯಂತ್ರಣ ಹೇರಬೇಕು ಎಂದು ಆಗ್ರಹಿಸಿದ್ದಾರೆ.

ಮಹಾತ್ಮಾ ಗಾಂಧಿಜೀ ಅವರ ಸ್ವದೇಶಿ ಚಳವಳಿ ನೆನೆದ ಮುಖೇಶ್ ಅಂಬಾನಿ, ಭಾರತೀಯ ಇಂಟರ್ನೆಟ್ ಜಗತ್ತಿನಲ್ಲೂ ಸ್ವದೇಶಿ ಚಳವಳಿ ಆರಂಭಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಂಟರ್ನೆಟ್ ಡಾಟಾ ಎಂಬುದು ಜನರ ಹೊಸ ಆಸ್ತಿಯಾಗಿದ್ದು, ಭಾರತೀಯರ ಈ ಆಸ್ತಿಯನ್ನು ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಡಾಟಾ ಕಂಪನಿಗಳು ಭಾರತೀಯರದ್ದೇ ಆದರೆ ಉತ್ತಮ ಎಂದು ಮುಖೇಶ್ ಅಂಬಾನಿ ಸಭೆಯಲ್ಲಿ ಹೇಳಿದರು.