Asianet Suvarna News Asianet Suvarna News

ಸಿರಿವಂತರಿಗೂ ಭರ್ಜರಿ ಕೊರೋನಾ ಶಾಕ್‌: ಅಂಬಾನಿ, ದಮಾನಿ ಆಸ್ತಿ ಇಳಿಕೆ!

ಸಿರಿವಂತರಿಗೂ ಭರ್ಜರಿ ಕೊರೋನಾ ಶಾಕ್‌| ಫೋಬ್ಸ್‌ರ್‍ ಧನಿಕರ ಪಟ್ಟಿ| ಅಂಬಾನಿ ನಂ.1, ದಮಾನಿ ನಂ.2 ಶ್ರೀಮಂತ| ದಮಾನಿ ಆಸ್ತಿ ಇಳಿದರೂ 7ರಿಂದ 2ನೇ ಸ್ಥಾನಕ್ಕೆ

Mukesh Ambani retains top slot retail king Radhakishan Damani second richest
Author
Bangalore, First Published May 7, 2020, 9:43 AM IST

ನವದೆಹಲಿ(ಮೇ.07): ಕೊರೋನಾ ಸೋಂಕು ಭಾರತದ ಸಿರಿವಂತರಿಗೂ ಭರ್ಜರಿ ಶಾಕ್‌ ನೀಡಿರುವುದು, ಬುಧವಾರ ಫೋಬ್ಸ್‌ರ್‍ ಮ್ಯಾಗಜಿನ್‌ ಬಿಡುಗಡೆ ಮಾಡಿರುವ ಭಾರತದ ಶ್ರೀಮಂತರ ಪಟ್ಟಿಯಿಂದ ಸಾಬೀತಾಗಿದೆ. ಭಾರತದ ಸಿರಿವಂತರ ಆಸ್ತಿಯಲ್ಲಿ ಒಟ್ಟಾರೆ ಶೇ.23ರಷ್ಟುಇಳಿಕೆ ಕಂಡಿದೆ. ಕೊರೋನಾ ವೈರಸ್‌ ನೀಡಿದ ಆರ್ಥಿಕ ಹೊಡೆತಕ್ಕೆ ಅನೇಕ ಶತಕೋಟ್ಯಧಿಪತಿಗಳ ಆಸ್ತಿ ಕೂಡ ಕರಗಿದೆ. 2019ರಲ್ಲಿ 106 ಇದ್ದ ಶತಕೋಟ್ಯಧಿಪತಿಗಳ ಸಂಖ್ಯೆ ಈಗ 102ಕ್ಕೆ ಇಳಿದಿದೆ.

ಡಿ-ಮಾರ್ಟ್‌ ಒಡೆಯ ದಮಾನಿ ಸಂಪತ್ತು ಈಗಲೂ ಏರಿಕೆ!

ಇದೇ ವೇಳೆ ರಿಲಯನ್ಸ್‌ ಸಮೂಹದ ಮುಖ್ಯಸ್ಥ ಮುಕೇಶ್‌ ಅಂಬಾನಿ 2.76 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ದೇಶದ ನಂ.1 ಶ್ರೀಮಂತನಾಗಿ ಹೊರಹೊಮ್ಮಿದ್ದಾರೆ. ಆದರೆ ಅಚ್ಚರಿ ಎಂಬಂತೆ ಕೊರೋನಾ ಹೊಡೆತಕ್ಕೆ ಸಿಕ್ಕಿ ಉಳಿದೆಲ್ಲಾ ಉದ್ಯಮಿಗಳ ಆಸ್ತಿ ಕರಗಿ ಹೋಗಿದ್ದರೆ, ಡಿ ಮಾರ್ಟ್‌ ಸಮೂಹದ ಮುಖ್ಯಸ್ಥ ರಾಧಾಕೃಷ್ಣನ್‌ ದಮಾನಿ 1.03 ಲಕ್ಷ ಕೋಟಿ ರು. ಆಸ್ತಿಯೊಂದಿಗೆ 2ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಕಳೆದ ವರ್ಷ ಅವರು 7ನೇ ಸ್ಥಾನದಲ್ಲಿದ್ದರು. ಇನ್ನೊಂದು ವಿಶೇಷವೆಂದರೆ ಕಳೆದ ವರ್ಷಕ್ಕಿಂತ ದಮಾನಿ ಅವರ ಆಸ್ತಿ ಮೌಲ್ಯ ಕಡಿಮೆಯಾಗಿದ್ದರೂ, ಇತರರ ಆಸ್ತಿ ಕಡಿಮೆಯಾದ ಕಾರಣ ಅವರು 2ನೇ ಸ್ಥಾನಕ್ಕೆ ಏರಿದ್ದಾರೆ. ಇನ್ನು ಎಚ್‌ಸಿಎಲ್‌ನ ಶಿವ ನಾಡಾರ್‌ 89250 ಕೋಟಿ ರು. ಆಸ್ತಿಯೊಂದಿಗೆ 3ನೇ ಸ್ಥಾನ ಪಡೆದಿದ್ದಾರೆ.

ಜಿಯೋದಲ್ಲಿ ಫೇಸ್‌ಬುಕ್‌ 43000 ಕೋಟಿ ರು. ಹೂಡಿಕೆ: ಏನಿದರ ಒಳಮರ್ಮ?

ಇನ್ನು ಆನ್‌ಲೈನ್‌ ಮೂಲಕ ಪಾಠ ಹೇಳಿಕೊಡುವ ಬೈಜೂಸ್‌ ಸಂಸ್ಥೆಯ ಬೈಜು ರವೀಂದ್ರನ್‌ ಇದೇ ಮೊದಲ ಬಾರಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಅವರ ಸಂಪತ್ತಿನ ಮೌಲ್ಯ 13500 ಕೋಟಿ ರು. ಡಾಲರ್‌ ಆಗಿದೆ. ಇವರು ಭಾರತದ ಅತಿ ಕಿರಿಯ ಶತಕೋಟ್ಯಧಿಪತಿ ಎನ್ನಿಸಿಕೊಂಡಿದ್ದಾರೆ.

ವರ್ಷ- 2019- 2020

ಮುಕೇಶ್‌- 3.85 ಲಕ್ಷ ಕೋಟಿ ರು.- 2.76 ಲಕ್ಷ ಕೋಟಿ ರು.

ದಮಾನಿ- 1.03 ಲಕ್ಷ ಕೋಟಿ ರು-. 1.07 ಲಕ್ಷ ಕೋಟಿ ರು.

ಶಿವ ನಾಡಾರ್‌- 1.08 ಲಕ್ಷ ಕೋಟಿ ರು-. 89250 ಕೋಟಿ ರು.

Follow Us:
Download App:
  • android
  • ios