ನವದೆಹಲಿ(ಜು.23): ರಿಲಯನ್ಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರೀಗ ವಿಶ್ವದ 5ನೇ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅಮೆರಿಕದ ಫೋಬ್ಸ್‌ರ್‍ ನಿಯತಕಾಲಿಕೆ ಪ್ರಕಟಿಸುವ ನೈಜ ಸಮಯದ ಕೋಟ್ಯಧೀಶರ ಪಟ್ಟಿಯಲ್ಲಿ 5.56 ಲಕ್ಷ ಕೋಟಿ ರು. (74.6 ಬಿಲಿಯನ್‌) ಆಸ್ತಿಯೊಂದಿಗೆ 5.41 ಲಕ್ಷ ಕೋಟಿ ರು. (72.7 ಬಿಲಿಯನ್‌) ಆಸ್ತಿ ಹೊಂದಿರುವ ಬರ್ಕ್ ಶೈರ್‌ ಸಿಇಒ ವಾರೆನ್‌ ಬಫೆಟ್‌ ಅವರನ್ನು ಹಿಂದಿಕ್ಕಿ ಮುಕೇಶ್‌ ಅಂಬಾನಿ 5ನೇ ಸ್ಥಾನಕ್ಕೆ ಏರಿದ್ದಾರೆ.

2021ಕ್ಕೆ ರಿಲಯನ್ಸ್‌ನಿಂದ 'ಆತ್ಮನಿರ್ಭರ' 5ಜಿ!

ಈ ಪಟ್ಟಿಯಲ್ಲಿ ಅಮೆಜಾನ್‌ ಮುಖ್ಯಸ್ಥ ಜೆಫ್‌ ಬೆಜೋಸ್‌ 13.84 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ಮೊದಲ ಸ್ಥಾನದಲ್ಲಿದ್ದು, ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಟ್ಸ್‌ 8.43 ಲಕ್ಷ ಕೋಟಿ ರು.ನೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಬರ್ನಾರ್ಡ್‌ ಅರ್ನಾಲ್ಟ್‌ ಕುಟುಂಬ (8.36 ಲಕ್ಷ ಕೋಟಿ ರು.) 3ನೇ ಸ್ಥಾನ ಮತ್ತು ಫೇಸ್‌ಬುಕ್‌ ಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ (6.63 ಲಕ್ಷ ಕೋಟಿ ರು.) 4ನೇ ಸ್ಥಾನದಲ್ಲಿದ್ದಾರೆ.