ಮುಂಬೈ[ಮಾ. 10]  ಕರೋನಾ ವೈರಸ್ ಯಾರ ಯಾರದ್ದೋ ಸ್ಥಾನ ಬದಲಾಯಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ದರ ಇಳಿಕೆ ಮತ್ತು ಷೇರು ಮಾರುಕಟ್ಟೆಯ ಕುಸಿತದ ಕಾರಣದಿಂದ ಮುಖೇಶ್ ಅಂಬಾನಿ ಏಷ್ಯಾದ ಶ್ರೀಮಂತ ವ್ಯಕ್ತಿ ಪಟ್ಟವನ್ನು ಕಳೆದುಕೊಂಡಿದ್ದಾರೆ. ಮುಖೇಶ್ ಜಾಗವನ್ನು ಅಲಿಬಾಬಾ ಖ್ಯಾತಿಯ ಜಾಕ್ ಮಾ  ಅಲಂಕರಿಸಿದ್ದಾರೆ.

ಈ ಮೂಲಕ ಏಷ್ಯಾದ ಅತಿ ಶ್ರೀಮಂತ ಎಂಬ ಹೆಗ್ಗಳಿಕೆ ಇಂದಿನ ದಿನಕ್ಕೆ ಜಾಕ್ ಮಾ ಪಾಲಾಗಿದೆ.  ತೈಲ ದರ ಸಮರ, ಕೊರೋನಾ ಭೀತಿಯ ಕಾರಣದಿಂದ ಷೇರು ಮಾರುಕಟ್ಟೆ ಪಾತಾಳಕ್ಕೆ ಮುಖ ಮಾಡಿ ಶೇರು ಮಾರುಕಟ್ಟೆಯಲ್ಲಿ ದಿಢೀರ್ ಬದಲಾವಣೆಗಳು ನಡೆದಿದ್ದವು. ಸೋಮವಾರ ರಿಲಯನ್ಸ್ ಸೇರಿದಂತೆ ಹಲವಾರು ಕಂಪನಿಗಳ ಶೇರುಗಳು ಕುಸಿತ ಕಂಡಿದ್ದವು. ಸೋಮವಾರ ಒಂದೇ ದಿನ ಮುಖೇಶ್ ಅಂಬಾನಿ 42,855 ಕೋಟಿ ರೂ. ಕಳೆದುಕೊಂಡಿದ್ದರು.

ಪ್ರತಿ ಗಂಟೆಗೆ ಅಂಬಾನಿ ಗಳಿಕೆ 9 ಕೋಟಿ ರೂ. !

ಸದ್ಯ ಏಷ್ಯಾದ ಶ್ರೀಮಂತ ವ್ಯಕ್ತಿ ಸ್ಥಾನಕ್ಕೆ ತಲುಪಿರುವ ಜಾಕ್ ಮಾ ಆಸ್ತಿ 44.5 ಬಿಲಿಯನ್ ಡಾಲರ್ ಇದ್ದರೆ  ಅಂಬಾನಿ ಬಳಿ 42  ಬಿಲಿಯನ್ ಡಾಲರ್ ಮೊತ್ತದ ಆಸ್ತಿ ಇದೆ. 2018ರಲ್ಲಿ ಮುಖೇಶ್ ಅಂಬಾನಿ ಏಷ್ಯಾದ ನಂ.1 ಶ್ರೀಮಂತ ಸ್ಥಾನಕ್ಕೇರಿದ್ದರು. ತಮ್ಮ ಜಿಯೋ ಸಾಮ್ರಾಜ್ಯದ ಮೂಲಕ ಕೋಟ್ಯಂತರ ಗ್ರಾಹಕರನ್ನು ಪಡೆದುಕೊಂಡಿದ್ದರು.