ವಿಶ್ವದ ನಂ.9 ಶ್ರೀಮಂತ ; ಪ್ರತಿ ಗಂಟೆಗೆ ಅಂಬಾನಿ ಗಳಿಕೆ 7 ಕೋಟಿ!

‘ಹುರುನ್‌ ಜಾಗತಿಕ ಶ್ರೀಮಂತರ ಪಟ್ಟಿ-2020’ರಲ್ಲಿ ಅಂಬಾನಿ ಅವರು 4.8 ಲಕ್ಷ ಕೋಟಿ ರು. ಆಸ್ತಿಯ ಧನಿಕರು ಎಂದು ತಿಳಿಸಲಾಗಿದೆ. ಅವರ ಆಸ್ತಿ ಮೌಲ್ಯ ಕಳೆದ ಸಲಕ್ಕಿಂತ ಸುಮಾರು 93 ಸಾವಿರ ಕೋಟಿ ರು. ಹೆಚ್ಚಿದೆ.

Hurun Global Rich list 2020 Mukesh Ambani named world ninth Richest

ನವದೆಹಲಿ (ಮಾ. 01): ಭಾರತದ ನಂ.1 ಶ್ರೀಮಂತ ವ್ಯಕ್ತಿಯಾದ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರು ವಿಶ್ವದ ನಂ.9 ಶ್ರೀಮಂತ ಎನ್ನಿಸಿಕೊಂಡಿದ್ದಾರೆ. ಅವರು ಮೈಕ್ರೋಸಾಫ್ಟ್‌ನ ಸ್ಟೀವ್‌ ಬಾಲ್ಮರ್‌ ಹಾಗೂ ಗೂಗಲ್‌ನ ಲ್ಯಾರಿ ಪೇಜ್‌ ಅವರೊಂದಿಗೆ 9 ನೇ ಸ್ಥಾನ ಹಂಚಿಕೊಂಡಿದ್ದಾರೆ. ಈ ಮೂಲಕ ಸತತ 2ನೇ ಬಾರಿ ಟಾಪ್‌-10ರಲ್ಲಿ ಸ್ಥಾನ ಪಡೆದಿದ್ದಾರೆ.

‘ಹುರುನ್‌ ಜಾಗತಿಕ ಶ್ರೀಮಂತರ ಪಟ್ಟಿ-2020’ರಲ್ಲಿ ಅಂಬಾನಿ ಅವರು 4.8 ಲಕ್ಷ ಕೋಟಿ ರು. ಆಸ್ತಿಯ ಧನಿಕರು ಎಂದು ತಿಳಿಸಲಾಗಿದೆ. ಅವರ ಆಸ್ತಿ ಮೌಲ್ಯ ಕಳೆದ ಸಲಕ್ಕಿಂತ ಸುಮಾರು 93 ಸಾವಿರ ಕೋಟಿ ರು. ಹೆಚ್ಚಿದೆ.

ಏ.1 ರಿಂದ ಪೆಟ್ರೋಲ್‌ ದರ 1 ರೂ ಹೆಚ್ಚಳ?

ಕಳೆದ ಸಲ ಮುಕೇಶ್‌ 8 ನೇ ಸ್ಥಾನದಲ್ಲಿದ್ದರು. ಕಳೆದ ಸಲ ಅವರ ಆಸ್ತಿ 3.9 ಲಕ್ಷ ಕೋಟಿ ರು. ಎಂದು ತಿಳಿಸಲಾಗಿತ್ತು. ಈ ಸಲ 1 ಸ್ಥಾನ ಕುಸಿದರು ಕೂಡ ಅವರು ತಮ್ಮ ಅಸ್ತಿ ಮೌಲ್ಯವನ್ನು ಶೇ.24ರಷ್ಟುವೃದ್ಧಿಸಿಕೊಂಡಿರುವುದು ಇಲ್ಲಿ ಗಮನಾರ್ಹ. ಅಂಬಾನಿ ಅವರ ಆಸ್ತಿ ಮೌಲ್ಯವನ್ನು ಲೆಕ್ಕಾಚಾರ ಹಾಕಿದಾಗ, ಅವರ ಪ್ರತಿ ತಾಸಿನ ಸರಾಸರಿ ಆದಾಯ 7 ಕೋಟಿ ರು. ಆಗಿರುತ್ತದೆ!

100 ಕೋಟಿ ಡಾಲರ್‌ (7,200 ಕೋಟಿ ರು.)ಗಿಂತ ಹೆಚ್ಚು ಸಂಪತ್ತು ಇರುವ ಧನಿಕರನ್ನು ಗುರುತಿಸಿ ಪಟ್ಟಿ ಸಿದ್ಧಪಡಿಸಲಾಗಿದೆ. ಪಟ್ಟಿಯಲ್ಲಿ ಒಟ್ಟು 2817 ಧನಿಕರು ಸ್ಥಾನ ಅಲಂಕರಿಸಿದ್ದಾರೆ. 2019ಕ್ಕಿಂತ 480 ಹೆಚ್ಚು ಸಿರಿವಂತರು ಪಟ್ಟಿ ಸೇರಿಕೊಂಡಿದ್ದಾರೆ.

1. ಜೆಫ್‌ ಬೆಜೋಸ್‌

ಅಮೆಜಾನ್‌ ಸಿಇಒ

.10 ಲಕ್ಷ ಕೋಟಿ

2. ಬಿಲ್‌ ಗೇಟ್ಸ್‌

ಮೈಕ್ರೋಸಾಫ್ಟ್‌ ಒಡೆಯ

.7.63 ಲಕ್ಷ ಕೋಟಿ--

ಬೆಂಗಳೂರು ಭಾರತದ ನಂ.3 ಧನಿಕರ ನಗರ

‘ಹುರುನ್‌ ಜಾಗತಿಕ ಶ್ರೀಮಂತರ ಪಟ್ಟಿ-2020’ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಧನಿಕರಿರುವ ನಗರ ಎಂಬ ಖ್ಯಾತಿಗೆ ಮುಂಬೈ ಪಾತ್ರವಾಗಿದೆ. ಬೆಂಗಳೂರು 3ನೇ ಸ್ಥಾನ ಪಡೆದಿದೆ. ಪಟ್ಟಿಯಲ್ಲಿನ 50 ಧನಿಕರು ಮುಂಬೈನಲ್ಲಿದ್ದಾರೆ. ದೆಹಲಿಯಲ್ಲಿ 30 ಹಾಗೂ ಬೆಂಗಳೂರಿನಲ್ಲಿ 17 ಧನಿಕರು ಇದ್ದಾರೆ.

ಜಿಡಿಪಿ ಬೆಳವಣಿಗೆ 3 ನೇ ತ್ರೈಮಾಸಿಕದಲ್ಲಿ ಶೇ.4.7 ಕ್ಕೆ ಇಳಿಕೆ

ಈ ಮೂಲಕ ಭಾರತದ ನಂ.1 ಹಾಗೂ ವಿಶ್ವದ ನಂ.9 ಎನ್ನಿಸಿಕೊಂಡಿದೆ ವಾಣಿಜ್ಯ ರಾಜಧಾನಿ.

ಇನ್ನು ನಂ.2 ಸ್ಥಾನದಲ್ಲಿ ದಿಲ್ಲಿ (30 ಧನಿಕರು), 3ರಲ್ಲಿ ಬೆಂಗಳೂರು (17 ಧನಿಕರು) ಹಾಗೂ 4ರಲ್ಲಿ ಅಹಮದಾಬಾದ್‌ (12 ಧನಿಕರು) ಇವೆ.

ಇದು 7,200 ಕೋಟಿ ರು.ಗಿಂತ ಹೆಚ್ಚು ಸಂಪತ್ತು ಇರುವ ಧನಿಕರ ಪಟ್ಟಿಯಾಗಿದೆ.

ಬೆಜೋಸ್‌ ನಂ.1:

ಹುರುನ್‌ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಅಮೆಜಾನ್‌ ಸಿಇಒ ಜೆಫ್‌ ಬೆಜೋಸ್‌ 140 ಶತಕೋಟಿ (10 ಲಕ್ಷ ಕೋಟಿ ರು.) ಡಾಲರ್‌ನೊಂದಿಗೆ ಮೊದಲ ಸ್ಥಾನ ಗಳಿಸಿದ್ದಾರೆ. ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಟ್ಸ್‌ 106 ಶತಕೋಟಿ (7.63 ಲಕ್ಷ ಕೋಟಿ ರು.) ಡಾಲರ್‌ನೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.

ಪಟ್ಟಿಯಲ್ಲಿನ ಇತರ ಭಾರತೀಯರು:

ಹುರುನ್‌ ಪಟ್ಟಿಯಲ್ಲಿರುವ ಇತರ ಭಾರತೀಯ ಸಿರಿವಂತರಲ್ಲಿ ಎಸ್‌.ಪಿ. ಹಿಂದುಜಾ 27 ಶತಕೋಟಿ ಡಾಲರ್‌ (1.94 ಲಕ್ಷ ಕೋಟಿ ರು.)ನೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. 3ರಲ್ಲಿ ಗೌತಮ್‌ ಅದಾನಿ (17 ಶತಕೋಟಿ ಡಾಲರ್‌- 1.22 ಲಕ್ಷ ಕೋಟಿ ರು.), 4ರಲ್ಲಿ ಲಕ್ಷ್ಮಿ ಮಿತ್ತಲ್‌ (15 ಶತಕೋಟಿ ಡಾಲರ್‌- 1 ಲಕ್ಷ ಕೋಟಿ ರು.), 6ರಲ್ಲಿ ಉದಯ ಕೋಟಕ್‌ (15 ಶತಕೋಟಿ ಡಾಲರ್‌- 1 ಲಕ್ಷ ಕೋಟಿ ರು.) ಇದ್ದಾರೆ.

ಮಾರ್ಚ್ 1 ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Latest Videos
Follow Us:
Download App:
  • android
  • ios