Asianet Suvarna News Asianet Suvarna News

ಒಂದು ವರ್ಷದಿಂದ ದಿನಕ್ಕೆ 300 ಕೋಟಿ ಜೇಬಿಗಿಳಿಸುತ್ತಿರುವ ಅಂಬಾನಿ!

ಮುಖೇಶ್ ಅಂಬಾನಿ ದಿನದ ಗಳಿಕೆ ಎಷ್ಟು ಗೊತ್ತಾ?! ನಿಮಿಷಕ್ಕೆ ಮುಖೇಶ್ ಪಡೆಯುವ ವೇತನ ಎಷ್ಟು?! ಅಂಬಾನಿ ಮುಂಬೈ ಮನೆ ಎಷ್ಟು ಬೆಲೆ ಬಾಳುತ್ತೆ?! ಮೂರು ಪ್ರೈವೆಟ್ ಜೆಟ್‌ಗಳಲ್ಲಿ ಅಂಬಾನಿ ಎಲ್ಲೆಲ್ಲಿ ಹೋಗ್ತಾರೆ?

Mukesh Ambani earned Rs 300 crore per day over last one year
Author
Bengaluru, First Published Sep 26, 2018, 5:06 PM IST

ಮುಂಬೈ(ಆ.23): ರಿಲಯನ್ಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಮುಖೇಶ್ ಅಂಬಾನಿ ಯಾರಿಗೆ ಗೊತ್ತಿಲ್ಲ ಹೇಳಿ?. ವಿಶ್ವದ ಅಗ್ರ ಶ್ರೀಮಂತರ ಪೈಕಿ ಒಬ್ಬರಾಗಿರುವ ಮುಖೇಶ್ ಅಂಬಾನಿ ಮತ್ತವರ ಕುಟುಂಬ ದೇಶದ ಅತ್ಯಂತ ಪ್ರತಿಷ್ಠಿತ ಕುಟುಂಬಗಳಲ್ಲಿ ಒಂದು.

ಇತ್ತೀಚೆಗೆ ಮುಖೇಶ್ ಅಂಬಾನಿ ಕೇರಳ ಪ್ರವಾಹಕ್ಕೆ 21 ಕೋಟಿ ರೂ. ಧನಸಹಾಯ ಮಾಡಿದ್ದಾರೆ. ಅಲ್ಲದೇ 51 ಕೋಟಿ ರೂ. ಪರಿಹಾರ ಸಾಮಗ್ರಿ ಕಳುಹಿಸುವ ವಾಗ್ದಾನ ಮಾಡಿದ್ದಾರೆ. ಇದೆಲ್ಲಾ ಮುಖೇಶ್ ಅಂಬಾನಿ ಬಗ್ಗೆ ಸಾರ್ವಜನಿಕರಿಗೆ ಗೊತ್ತಿರುವ ಮಾಹಿತಿ. ಆದರೆ ಅಂಬಾನಿ ಮತ್ತು ಅವರ ಕುಟುಂಬದ ಕುರಿತು ಬಹುತೇಕರಿಗೆ ಗೊತ್ತಿರದ ಅನೇಕ ಸಂಗತಿಗಳಿವೆ.

ಅದೆನಪ್ಪಾ ಅಂತಾ ಸಂಗತಿಗಳು ಅಂತೀರಾ?. ಮುಖೇಶ್ ಅಂಬಾನಿ ಅವರ ಒಂದು ನಿಮಿಷದ ವೇತನ ಎಷ್ಟು ಅಂತಾ ನಿಮಗೆ ಗೊತ್ತಾ?. ದಿನದ ವೇತನದ ಬಗ್ಗೆ ಮಾಹಿತಿ ಇದೆಯಾ?

ಬಾರ್ಕೆಲ್ಸ್ ಹುರುನ್ ಇಂಡಿಯಾ ದೇಶದ ಶ್ರೀಮಂತರ ಪಟ್ಟಿ ಬಿಡುಗಡೆಗೊಳಿಸಿದ್ದು, ರಿಲಯನ್ಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಮುಖೇಶ್ ಅಂಬಾನಿ ಮತ್ತೆ ಮೊದಲ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ಧಾರೆ. ಈ ವರದಿ ಪ್ರಕಾರ ಕಳೆದ ಒಂದು ವರ್ಷದಿಂದ ಮುಖೇಶ್ ಅಂಬಾನಿ ದಿನವೊಂದಕ್ಕೆ ಬರೋಬ್ಬರಿ 300 ಕೋಟಿ ರೂ. ಹೆಚ್ಚುವರಿ ಆದಾಯ ಗಳಿಸುತ್ತಿದ್ದಾರೆ.

ಮುಖೇಶ್ ಅಂಬಾನಿ ಅವರ ಒಂದು ನಿಮಿಷದ ಸಂಬಳ 2.35 ಲಕ್ಷ ರೂ. ಅದರಂತೆ ಮುಖೇಶ್ ಕಳೆದ ಒಂದು ವರ್ಷದಿಂದ ಒಂದು ದಿನಕ್ಕೆ ಬರೋಬ್ಬರಿ 300 ಕೋಟಿ ರೂ. ಮುಂಬೈನಲ್ಲಿರುವ ಅಂಬಾನಿ ಮನೆ ಎಂಟಿಲೀಯಾ ಬರೋಬ್ಬರಿ 1000 ಕೋಟಿ ರೂ. ಬೆಲೆ ಬಾಳುತ್ತದೆ.  ಅಂಬಾನಿ ಅವರ ಒಡೆತನದಲ್ಲಿ ಒಟ್ಟು ಮೂರು ಪ್ರೈವೆಟ್ ಜೆಟ್‌ಗಳಿವೆ. ಅಂಬಾನಿ ಮತ್ತವರ ಕುಟುಂಬ ಇದೇ ವಿಮಾನದಲ್ಲಿ ಜಗತ್ತಿನ ಯಾವ ಭಾಗಕ್ಕಾದರೂ ಪ್ರಯಾಣಿಸಬಹುದು. 

Follow Us:
Download App:
  • android
  • ios