ಮುಕೇಶ್ ಅಂಬಾನಿ ಯಶಸ್ವಿ ಉದ್ಯಮಿಯಾಗಿ, ಶ್ರೀಮಂತ ಉದ್ಯಮಿಯಾಗಿ ಬೆಳೆಯಲು ಕಾರಣರಾದ ಐಸಿಟಿಗೆ ಗುರ ದಕ್ಷಿಣೆಯಾಗಿ ಬರೋಬ್ಬರಿ 151 ಕೋಟಿ ರೂಪಾಯಿ ನೀಡಿದ್ದಾರೆ.
ಮುಂಬೈ(ಜೂ.07) ಭಾರತದ ಶ್ರೀಮಂತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರಿ ಚೇರ್ಮೆನ್ ಮುಕೇಶ್ ಅಂಬಾನಿ ಪ್ರತಿ ದಿನ ಸಾವಿರಾರು ಕೋಟಿ ರೂಪಾಯಿ ಆದಾಯ ಗಳಿಸುತ್ತಾರೆ. ಇದರ ಜೊತೆಗೆ ಸಾಮಾಜಿಕ ಕಾರ್ಯಗಳಿಗೂ ಕೋಟಿ ಕೋಟಿ ರೂಪಾಯಿ ಹಣ ದೇಣಿಗೆ ನೀಡುತ್ತಾರೆ. ಇನ್ನು ದೇವಸ್ಥಾನಗಳಿಗೂ ದೇಣಿಗೆ ನೀಡಿದ್ದಾರೆ. ಇದೀಗ ಮುಕೇಶ್ ಅಂಬಾನಿ ತನ್ನ ವಿದ್ಯಾಭ್ಯಾಸದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಐಸಿಟಿಗೆ ಬರೋಬ್ಬರಿ 151 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಅಂಬಾನಿ ಈ ಗುರುದಕ್ಷಿಣೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ.
ತಾನು ಕಲಿತ ವಿದ್ಯಾಸಂಸ್ಥೆಗೆ 151 ಕೋಟಿ ರೂ ಗುರು ದಕ್ಷಿಣೆ
1970ರ ದಶಕದಲ್ಲಿ ಮುಕೇಶ್ ಅಂಬಾನಿ ಮುಂಬೈನ ಇನ್ಸಿಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ (ICT) ವಿದ್ಯಾಸಂಸ್ಥೆಯಲ್ಲಿ ಪದವಿ ಪೂರೈಸಿದ್ದಾರೆ. ಇದೀಗ ಇದೇ ಸಂಸ್ಥೆಗೆ ಭೇಟಿ ನೀಡಿದ ಮುಕೇಶ್ ಅಂಬಾನಿ ಕೆಲ ಹೊತ್ತು ಹಳೇ ವಿದ್ಯಾರ್ಥಿ ಜೀವನ ನೆನಪಿಸಿಕೊಂಡಿದ್ದಾರೆ. ಇದೇ ವೇಳೆ ತನ್ನನ್ನು ಈ ಮಟ್ಟಕ್ಕೆ ಬೆಳೆಯಲು, ಪದವಿ ಕರುಣಿಸಿದ ICT ವಿದ್ಯಾಸಂಸ್ಥೆಗೆ ಬರೋಬ್ಬರಿ 151 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.
ಎಂಎಂ ಶರ್ಮಾ ಜೊತೆ ಮತನಾಡುವಾಗ ಪ್ರತಿ ಭಾರಿ ನೀವು ಹೇಳಿ ನಾನು ಕೇಳಿಸಿಕೊಳ್ಳುತ್ತೇನೆ ಎಂದು ಹೇಳುತ್ತೇನೆ. ಹಲವು ಬಾರಿ ಮಾತುಕತೆಯಲ್ಲಿ ಪ್ರೊಫೆಸರ್ ಶರ್ಮಾ, ಕೈಗಾರಿಕೆ ಬೆಳವಣಿಗೆ, ಭವಿಷ್ಯದ ಸವಾಲು, ವಿದ್ಯಾರ್ಥಿಗಳನ್ನು ಯಾವ ರೀತಿ ಪ್ರಸ್ತುತ ಜಗತ್ತಿಗೆ ಸಜ್ಜುಗೊಳಿಸಬೇಕು, ಪಾಠ ಮಾಡಬೇಕು ಎಂಬುದರ ಕುರಿತು ಮಾತನಾಡುತ್ತಾರೆ. ಆದರೆ ಇತ್ತೀಚೆಗೆ ಪ್ರೊಫೆಸರ್ ಶರ್ಮಾ, ಐಸಿಟಿ ಕಾಲೇಜಿ ಏನಾದರೂ ನೀವು ಮಾಡಬೇಕು ಎಂದಿದ್ದರು. ಇದೇ ಸಂದರ್ಭವನ್ನು ನಾನು ಗುರುದಕ್ಷಿಣೆಯಾಗಿ ಬಳಸಿಕೊಂಡೆ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ.
ತಂದೆ ಧೀರೂಬಾಯಿ ಕನಸು ವಿವರಿಸಿದ ಅಂಬಾನಿ
ಐಸಿಟಿ ಕಾಲೇಜಿನ ಪ್ರೊಫೆಸರ್ ಎಂಎಂ ಶರ್ಮಾ ಅವರ ಆತ್ಮಚರಿತ್ರ ಡಿವೈನ್ ಸೈಂಟಿಸ್ಟ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡ ಮುಕೇಶ್ ಅಂಬಾನಿ, ವಿದ್ಯಾರ್ಥಿ ಜೀವನ ನೆನೆಪಿಸಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಮುಕೇಶ್ ಅಂಬಾನಿ, ಇದೇ ಎಂಎಂ ಶರ್ಮಾ ಅವರ ಮೊದಲ ಉಪನ್ಯಾಸ ತನ್ನನ್ನು ಹೇಗ ಪ್ರಭಾವಿತಗೊಳಿಸಿತ್ತು ಎಂದು ವಿವರಿಸಿದ್ದಾರೆ. ಮೊದಲ ಉಪನ್ಯಾಸದಲ್ಲೇ ಎಂಎಂ ಶರ್ಮಾ ಅವರ ಮಾತುಗಳು ಪ್ರೇರಣೆ ನೀಡಿತ್ತು. ತಂದೆ ಧೀರೂಬಾಯಿ ಅಂಬಾನಿ ರೀತಿಯಲ್ಲೇ ಎಂಎಂ ಶರ್ಮಾ ಅವರು ಭಯದ ವಾತಾವರಣ ಹಾಗೂ ಪರಿಸ್ಥಿತಿಯಲ್ಲಿದ್ದ ಭಾರತೀಯ ಕೈಗಾರಿಕೋದ್ಯಮವನ್ನು ಜಾಗತಿಕ ನಾಯಕನಾಗಿ ಬೆಳೆಸಲು ಕನಸು ಕಂಡಿದ್ದರು. ಇದಕ್ಕಾಗಿ ಶ್ರಮಿಸಿದ್ದರು ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ.
ಧೀರೂಬಾಯಿ ಅಂಬಾನಿ ಹಾಗೂ ಎಂಎಂ ಶರ್ಮಾ ಇಬ್ಬರೂ ವಿಜ್ಞಾನ ಹಾಗೂ ಕೈಗಾರಿಕೆ ಜೊತೆ ಜೊತೆಯಾಗಿ ಹೆಜ್ಜೆ ಹಾಕುವ ಕನಸು ಕಂಡಿದ್ದರು. ಇದೀಗ ಈ ಕನಸು ನನಸಾಗುತ್ತಿದೆ. ಇದೀಗ ಕೈಗಾರಿಕೋದ್ಯಮ ತಂತ್ರಜ್ಞಾನ ಬಳಸಿಕೊಂಡು ಸಾಗುತ್ತಿದೆ. ಇದರಿಂದ ಮಹತ್ತರ ಬದಲಾವಣೆ ತರಲಾಗುತ್ತಿದೆ. ಪರಿಣಾಮಕಾರಿಯಾಗಿ ಕೈಗಾರಿಕೋದ್ಯಮ ಬೆಳೆಯುತ್ತಿದೆ. ಜಾಗತಿಕ ಮಟ್ಟದಲ್ಲಿ ಭಾರತ ಹೊಸ ನಾಯಕನಾಗಿ ಬೆಳೆಯುತ್ತಿದೆ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ.
ಐಸಿಟಿ ಕಾಲೇಜಿನಲ್ಲಿ 3 ಗಂಟೆ ಕಳೆದ ಮುಕೇಶ್ ಅಂಬಾನಿ
ಕಾಲೇಜು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಕೇಶ್ ಅಂಬಾನಿ ಸಕ್ರಿಯಾವಾಗಿ ಸಂಪೂರ್ಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಳಿಕ ಕಾಲೇಜಿನ ಉಪನ್ಯಾಸಾಕ ವಿಭಾಗ ಸೇರಿದಂತೆ ಹಲವು ವಿಭಾಗಳಿಗೆ ಭೇಟಿ ನೀಡಿದ್ದಾರೆ. ಸರಿ ಸುಮಾರು ಮೂರು ಗಂಟೆಗಳ ಕಾಲ ಮುಕೇಶ್ ಅಂಬಾನಿ ಐಸಿಟಿ ಕಾಲೇಜಿನಲ್ಲಿ ಕಳೆದಿದ್ದಾರೆ.
