ಮಾವು ಕೃಷಿಯಲ್ಲಿ ಭಾರತಕ್ಕೆ 4,000 ವರ್ಷದ ಇತಿಹಾಸವಿದೆ. ಆದರೆ ನಿನ್ನೆ ಮೊನ್ನೆ ಬಂದಿರುವ ಮೆಕ್ಸಿಕೋ ದೇಶ ಮಾವು ರಫ್ತಿನಲ್ಲಿ ಭಾರತವನ್ನು ಹಿಂದಿಕ್ಕಿದೆ. ಇದೀಗ ಮೆಕ್ಸಿಕೋಗೆ ಮುಕೇಶ್ ಅಂಬಾನಿ ಸವಾಲು ಹಾಕಿದ್ದಾರೆ. 

ನವದೆಹಲಿ(ಜೂ.13) ಮಾವು ಕೃಷಿಯಲ್ಲಿ ಭಾರತಕ್ಕೆ ಬರೋಬ್ಬರಿ 4,000 ವರ್ಷದ ಇತಿಹಾಸವಿದೆ. ಭಾರತದಲ್ಲಿ 1,000ಕ್ಕೂ ಹೆಚ್ಚು ವಿವಿದ ತಳಿಯ ಮಾವುಗಳಿವೆ. ಇಷ್ಟೇ ಅಲ್ಲ ಭಾರತ ವಿಶ್ವದಲ್ಲೇ ಅತೀ ಹೆಚ್ಚು ಮಾವು ಬೆಳೆಯುವ ರಾಷ್ಟ್ರವಾಗಿದೆ. ಆದರೆ ಮಾವು ರಫ್ತು ವಿಚಾರ ಬಂದರೆ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಇನ್ನು ಕೇವಲ 35 ವರ್ಷದ ಹಿಂದೆ ಮಾವು ಕೃಷಿ ಆರಂಭಿಸಿದ ಮೆಕ್ಸಿಕೋ ಮಾವು ರಫ್ತಿನಲ್ಲಿ ಮೊದಲ ಸ್ಥಾನದಲ್ಲಿದೆ. ಭಾರತ ಅತೀ ಹೆಚ್ಚು ಮಾವು ಬೆಳೆದರೂ, ರಫ್ತುವಿನಲ್ಲಿ ನಾಲ್ಕನೇ ಸ್ಥಾನದಲ್ಲಿರಲು ಕೆಲ ಕಾರಣಗಳಿವೆ. ಆದರೆ ಇದೀಗ ಮೆಕ್ಸಿಕೋಗೆ ಉದ್ಯಮಿ ಮುಕೇಶ್ ಅಂಬಾನಿ ಚಾಲೆಂಜ್ ಮಾಡಿದ್ದಾರೆ.

ಭಾರತದಲ್ಲಿ 1,000ಕ್ಕೂ ಹೆಚ್ಚು ಮಾವಿನ ತಳಿಗಳಿವೆ. ವಾರ್ಷಿಕವಾಗಿ ಬರೋಬ್ಬರಿ 26 ಮಿಲಿಯನ್ ಟನ್ ಮಾವು ಉತ್ಪಾದನೆಯಾಗುತ್ತದೆ. ಇದು ವಿಶ್ವದಲ್ಲೇ ಅತೀ ಹೆಚ್ಚು ಉತ್ಪಾದನೆಯಾಗಿದೆ. ಆದರೆ ಭಾರತ ಮಾರಾಟ, ರಫ್ತು ವಿಚಾರ ಬಂದಾಗ ಎಡವುತ್ತಿದೆ. ಆದರೆ ಭಾರತ ಉತ್ಪಾದಿಸುವ ಮಾವಿನ ಕೇವಲ ಶೇಕಡಾ 10 ರಷ್ಟು ಮಾತ್ರ ಮೆಕ್ಸಿಕೋ ಮಾವು ಬೆಳೆಯುತ್ತಿದೆ. ಆದರೆ ರಫ್ತಿನಲ್ಲಿ ಮೊದಲ ಸ್ಥಾನದಲ್ಲಿದೆ. ಆದರೆ ಮುಕೇಶ್ ಅಂಬಾನಿ ಇದೀಗ ಮೆಕ್ಸಿಕೋ ಚಾಲೆಂಜ್ ಹಾಕಿದ್ದಾರೆ. ಅಂಬಾನಿ ನಡೆಯಿಂದ ಇದೀಗ ಭಾರತ ಮಾವು ರಫ್ತಿನಲ್ಲಿ ಮೊದಲ ಸ್ಥಾನಕ್ಕೇರುವ ಸಾಧ್ಯತೆ ಇದೆ.

ಮುಕೇಶ್ ಅಂಬಾನಿ ಅತೀ ದೊಡ್ಡ ರಫ್ತುದಾರ

ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ವಿಶ್ವದಲ್ಲೇ ಅತೀ ದೊಡ್ಡ ಮಾವು ರಫ್ತುದಾರ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜಾಮನಗರದಲ್ಲಿರುವ ಮುಕೇಶ್ ಅಂಬಾನಿ ಮಾವಿನ ತೋಟ ಬರೋಬ್ಬರಿ 600 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. 1,30,000 ಮಾವಿನ ಮರಗಳಿರುವ ಇಲ್ಲಿ 200ಕ್ಕೂ ಹೆಚ್ಚು ವಿವಿಧ ತಳಿಯ ಮಾವುಗಳಿವೆ. 10,000 ಟನ್ ಮಾವಿನ ಹಣ್ಣನ್ನು ಮುಕೇಶ್ ಅಂಬಾನಿ ರಫ್ತು ಮಾಡುತ್ತಿದ್ದಾರೆ. ಒಂದು ದೇಶವಾಗಿ ಮೆಕ್ಸಿಕೋ ಅತೀ ಹೆಚ್ಚು ಮಾವು ರಫ್ತು ಮಾಡಿದರೆ, ಒಬ್ಬ ರೈತನಾಗಿ ಮುಕೇಶ್ ಅಂಬಾನಿ ಅತೀ ಹೆಚ್ಚು ಮಾವಿನ ಹಣ್ಣನ್ನು ರಫ್ತು ಮಾಡುತ್ತಿದ್ದಾರೆ.

ಮುಕೇಶ್ ಅಂಬಾನಿ ಮಾವಿನ ತೋಟದಲ್ಲಿ ಪ್ರತಿ ವರ್ಷ ಮಾವು ಹೆಚ್ಚಾಗುತ್ತಿದೆ. ಇದರಿಂದ ರಫ್ತಿನ ಪ್ರಮಾಣ ಹೆಚ್ಚಾಗುತ್ತಿದೆ. ಇತ್ತ ಭಾರತ ಅತೀ ಹೆಚ್ಚು ಮಾವು ಬೆಳೆಯುತ್ತಿದ್ದರೂ ರಫ್ತು ಮಾತ್ರ ಕಡಿಮೆಯಾಗುತ್ತಿದೆ.ಇದಕ್ಕೆ ಕೆಲ ಕಾರಣಗಳನ್ನು ಪಟ್ಟಿ ಮಾಡಿ ರಫ್ತು ಹೆಚ್ಚಿಸಲು ಪ್ರಯತ್ನ ನಡೆಯುತ್ತಿದೆ. ಪ್ರಮುಖವಾಗಿ ಮೆಕ್ಸೋದಲ್ಲಿ ರೈತರು ಅಮರಿಕ ಸ್ಟಾಂಡರ್ಡ್‌ಗೆ ತಕ್ಕಂತೆ ಮಾವು ಬೆಳೆಯಲು ತರಬೇತಿ ನೀಡಲಾಗಿದೆ. ಇನ್ನು ಸುಲಭವಾಗಿ ರಫ್ತು ಮಾಡಲು ಅವಕಾಶ ಕಲ್ಪಿಸಲಾಗಿದೆ. ಭಾರತದಲ್ಲಿ ಮಾವು ಬೆಳೆಯು ರೈತನಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಅರಿವು ಇಲ್ಲ. ಇನ್ನು ಯಥೇಚ್ಚವಾಗಿ ಮಾವು ಬೆಳೆದರೂ ಅದನ್ನು ರಫ್ತು ಮಾಡುವ ವಿಧಾನವೂ ಗೊತ್ತಿಲ್ಲ. ಜೊತೆಗೆ ಮಾವುಗಳನ್ನು ಶೇಕರಿಸಿಡುವುದು ಸೇರಿದಂತೆ ಹಲವು ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆಯಲ್ಲೂ ಭಾರತ ಹಿಂದಿದೆ.