ಮುಕೇಶ್‌ ಅಂಬಾನಿ ಆಸ್ತಿ ಒಂದೇ ವರ್ಷದಲ್ಲಿ 73% ವೃದ್ಧಿ

ಮುಕೇಶ್‌ ಅಂಬಾನಿ ಸತತ 13ನೇ ವರ್ಷವೂ ದೇಶದ ನಂ.1 ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ.

Mukesh Ambani becomes India's no 1  richest person snr

ನವದೆಹಲಿ (ಅ.09): ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಸತತ 13ನೇ ವರ್ಷವೂ ದೇಶದ ನಂ.1 ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. ಫೋರ್ಬ್ಸ್ ನಿಯತಕಾಲಿಕೆ 2020ನೇ ಸಾಲಿನ ದೇಶದ 100 ಕುಬೇರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮುಕೇಶ್‌ ಅಂಬಾನಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ಮುಕೇಶ್‌ ಅಂಬಾನಿ ಅವರ ಸಂಪತ್ತಿಗೆ ಈ ವರ್ಷ 2.73 ಲಕ್ಷ ಕೋಟಿ ರು. ಸೇರ್ಪಡೆ ಆಗಿದ್ದು, ಒಟ್ಟು ಆಸ್ತಿ 6.49 ಲಕ್ಷ ಕೋಟಿ ರು.ಗೆ ಏರಿಕೆ ಆಗಿದೆ. ಅಂದರೆ ಮುಕೇಶ್‌ ಅಂಬಾನಿ ಅವರ ಆಸ್ತಿ ಮೌಲ್ಯ ಶೇ.73ರಷ್ಟುಏರಿಕೆ ಆಗಿದೆ. ಅದಾನಿ ಗ್ರೂಪ್‌ನ ಮುಖ್ಯಸ್ಥ ಗೌತಮ್‌ ಅದಾನಿ ಅವರು 1.83 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಎಚ್‌ಸಿಎಲ್‌ ಮುಖ್ಯಸ್ಥ ಶಿವ ನಾಡರ್‌ (1.49 ಲಕ್ಷ ಕೋಟಿ ರು.) 3ನೇ ಸ್ಥಾನ ಪಡೆದಿದ್ದಾರೆ.

ಮದುವೆಯಾದ್ರೂ ಅಂಬಾನಿ ಮಗಳೊಂದಿಗೆ ಆನಂದ್ ಪಿರಾಮಲ್ ಕಾಣಿಸ್ಕೊಳ್ಳೋದು ಬಹಳ ಅಪರೂಪ! ..

ಇದೇ ವೇಳೆ ದೇಶದಲ್ಲಿ ಕೊರೋನಾ ಸಂಕಷ್ಟದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದ ಹೊರತಾಗಿಯೂ ದೇಶದ ಅಗ್ರ 100 ಶ್ರೀಮಂತರ ಪೈಕಿ ಅರ್ಧದಷ್ಟುಧನಿಕರ ಆಸ್ತಿ ವೃದ್ಧಿಸಿದೆ. ಇವರ ಒಟ್ಟಾರೆ ಆಸ್ತಿ ಮೌಲ್ಯ ಶೇ.14ರಷ್ಟುವೃದ್ಧಿಯಾಗಿದ್ದು, 379 ಲಕ್ಷ ಕೋಟಿ ರು.ಗೆ ಏರಿಕೆ ಆಗಿದೆ.

Latest Videos
Follow Us:
Download App:
  • android
  • ios