Asianet Suvarna News Asianet Suvarna News

ಜಿಯೋ ಗ್ರಾಹಕರಿಗೆ ಮುಕೇಶ್ ಅಂಬಾನಿ ಗಿಫ್ಟ್: 336 ದಿನ ವ್ಯಾಲಿಟಿಡಿ ಸೇರಿ 4 ರಿಚಾರ್ಜ್ ಪ್ಲಾನ್ ಜಾರಿ!

ಜಿಯೋ ಬಳಕೆದಾರರಿಗೆ ಮುಕೇಶ್ ಅಂಬಾನಿ ಭರ್ಜರಿ ಗಿಫ್ಟ್ ನೀಡಿದ್ದಾರೆ. 336 ದಿನದ ವ್ಯಾಲಿಟಿಡಿ ಪ್ಲಾನ್ ಸೇರಿದಂತೆ ಕೆಗೆಟುಕುವ ದರದ ನಾಲ್ಕು ರಿಚಾರ್ಜ್ ಪ್ಲಾನ್ ಘೋಷಿಸಿದ್ದಾರೆ.

Mukesh ambani announces affordable 4 recharge plan for jio customers ckm
Author
First Published Aug 8, 2024, 12:19 PM IST | Last Updated Aug 8, 2024, 12:19 PM IST

ಮುಂಬೈ(ಆ, 8) ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಬಳಿಕ ಇದೀಗ ಮುಕೇಶ್ ಅಂಬಾನಿ ಜಿಯೋ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ. ಜಿಯೋ ಬಳೆದಾರರಿಗೆ ಕೈಗೆಟುಕುವ ದರದ ರಿಚಾರ್ಜ್ ಪ್ಲಾನ್ ಜಾರಿ ಮಾಡಿದ್ದಾರೆ. ಪ್ರಮುಖವಾಗಿ ನಾಲ್ಕು ಪ್ಲಾನ್ ಜಾರಿಯಾಗಿದೆ. ಇದರ ಜೊತೆಗೆ 336 ದಿನದ ವ್ಯಾಲಿಟಿಡಿಯೊಂದಿಗೆ ಸೂಪರ್ ಪ್ಲಾನ್ ಕೂಡ ಘೋಷಣೆ ಮಾಡಿದ್ದಾರೆ. ಭಾರತದ ಮತ್ತೊರ್ವ ಉದ್ಯಮಿ ಗೌತಮ್ ಅದಾನಿ ಕೂಡ ಟೆಲಿಕಾಂ ಕ್ಷೇತ್ರಕ್ಕೆ ಕಾಲಿಟ್ಟಿದ್ದರೆ, ಇತ್ತ ಟಾಟಾ ಕೂಡ ಟೆಲಿಕಾಂ ಕ್ಷೇತ್ರದಲ್ಲಿ ಗೇರ್ ಬದಲಾಯಿಸಿದೆ. ಇದರ ಬೆನ್ನಲ್ಲೇ ಜಿಯೋ ಇದೀಗ ಗ್ರಾಹಕರಿಗೆ ಈ ಆಫರ್ ಘೋಷಿಸಿದೆ.

ಅಂಬಾನಿ ಘೋಷಿಸಿದ ನಾಲ್ಕು ಜಿಯೋ ರಿಚಾರ್ಜ್ ಪ್ಲಾನ್ ಇಲ್ಲಿದೆ
199 ರೂಪಾಯಿ ಪ್ಲಾನ್,  1.5ಜಿಬಿ ಪ್ರತಿ ದಿನ ಡೇಟಾ( ಒಟ್ಟು 27ಜಿಬಿ) ಜೊತೆಗೆ 18 ದಿನ ವ್ಯಾಲಿಟಿಡಿ ನೀಡಲಾಗಿದೆ. ಅನಿಯಮತಿ ಕರೆ ಹಾಗೂ ಪ್ರತಿ ದಿನ 100 ಎಸ್ಎಂಎಸ್ ಹಾಗೂ ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್ ಸೌಲಭ್ಯ

ಮುಕೇಶ್‌ ಅಂಬಾನಿಯ ʼಅಂಟಿಲಿಯಾʼ ಅರಮನೆಯ ಮೊದಲು ಆ ಜಾಗದಲ್ಲಿ ಏನಿತ್ತು? ವಾಸ್ತು ದೋಷ ಇದೆಯಾ?

209 ರೂಪಾಯಿ ಪ್ಲಾನ್, ಪ್ರತಿ ದಿನ 1 ಜಿಬಿ ಡೇಟಾ( ಒಟ್ಟು 22 ಜಿಬಿ )  ಜೊತೆಗೆ 22 ದಿನ ವ್ಯಾಲಿಟಿಡಿ ನೀಡಲಾಗಿದೆ. ಅನ್‌ಲಿಮಿಟೆಡ್ ಕಾಲ್ಸ್, ಪ್ರತಿ ದನ 100 ಎಸ್ಎಂಎಸ್ ಹಾಗೂ ಜಿಯೋ ಎಂಟರ್ಟೈನ್ಮೆಂಟ್ ಸೇವೆ

249 ರೂಪಾಯಿ ಪ್ಲಾನ್, ಪ್ರತಿ ದಿನ 1 ಜಿಬಿ ಡೇಟಾ(ಒಟ್ಟು 28 ಜಿಬಿ), ಅನಿಯಮಿತ ಕರೆ, ಪ್ರತಿ ದಿನ 100 ಎಸ್ಎಂಎಸ್ ಹಾಗೂ ಅನ್‌ಲಿಮಿಟೆಡ್ ಕಾಲ್ಸ್ ಜೊತೆಗೆ  ಜಿಯೋ ಎಂಟರ್ಟೈನ್ಮೆಂಟ್ ಸರ್ವೀಸ್ 

299 ರೂಪಾಯಿ ಪ್ಲಾನ್, ಪ್ರತಿ ದಿನ 1.5 ಜಿಬಿ ಡೇಟಾ( ಒಟ್ಟು 42 ಜಿಬಿ) 28 ದಿನ ವ್ಯಾಲಿಡಿಟಿ, ಅನಿಯಮಿತ ಕರೆ, 100 ಎಸ್ಎಂಎಸ್ ಪ್ರತಿ ದಿನ, ಜಿಯೋ ಎಂಟರ್ಟೈನ್ಮೆಂಟ್ ಸರ್ವೀಸ್
 
ಈ ನಾಲ್ಕು ಪ್ಲಾನ್ ಜೊತೆ ಮತ್ತೊಂದು ಆಫರ್ ನೀಡಲಾಗಿದೆ. 336 ದಿನ ವ್ಯಾಲಿಡಿಟಿ ಅಂದರೆ 11 ತಿಂಗಳ ಪ್ಲಾನ್ ಘೋಷಿಸಲಾಗಿದೆ. ಈ ಪ್ಲಾನ್‌ನಲ್ಲಿ ಅನ್‌ಲಿಮಿಟೆಡ್ ಕಾಲ್ಸ್, 3600 ಎಸ್ಎಂಎಸ್ ಹಾಗೂ 24 ಜಿಬಿ ಡೇಟಾ ನೀಡುತ್ತಿದೆ. ಈ ಪ್ಲಾನ್ ರಿಜಾರ್ಜ್ ಮೊತ್ತ 1899 ರೂಪಾಯಿ ಎಂದು ಜಿಯೋ ಘೋಷಿಸಿದೆ. ಈ ಪ್ಲಾನ್ ರಿಚಾರ್ಜ್ ಮಾಡುವ ಗ್ರಾಹಕರಿಗೆ ಕಾಂಪ್ಲಿಮೆಂಟರಿಯಾಗಿ ಜಿಯೋ ಟಿವಿ, ಜಿಯೋ ಸಿನಿಮಾ ಆಕ್ಸೆಸ್ ಸಿಗಲಿದೆ. ಈ ಪ್ಲಾನ್ ರಿಚಾರ್ಜ್ ಮಾಡಿದರೆ ಪ್ರತಿ ತಿಂಗಳು ಸರಾಸರಿ 172 ರೂಪಾಯಿ ಮಾಡಿದಂತಾಗುತ್ತದೆ.

ಬ್ಲೂಮ್‌ಬರ್ಗ್ ವರದಿ: ಏಷ್ಯಾದ ಶ್ರೀಮಂತ ಎಂಬ ಅಂಬಾನಿ ಸ್ಥಾನ ಡೇಂಜರ್‌ ನಲ್ಲಿದೆ, ಆರ್ಥಿಕ ಕುಸಿತದತ್ತ ಮುಕೇಶ್!
 

Latest Videos
Follow Us:
Download App:
  • android
  • ios