ಬ್ಲೂಮ್‌ಬರ್ಗ್ ವರದಿ: ಏಷ್ಯಾದ ಶ್ರೀಮಂತ ಎಂಬ ಅಂಬಾನಿ ಸ್ಥಾನ ಡೇಂಜರ್‌ ನಲ್ಲಿದೆ, ಆರ್ಥಿಕ ಕುಸಿತದತ್ತ ಮುಕೇಶ್!

ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಮುಕೇಶ್ ಅಂಬಾನಿ ಅವರ ಪಟ್ಟಕ್ಕೆ ಕುತ್ತು ಬರುವ ಲಕ್ಷಣ ಕಾಣುತ್ತಿದೆ ಮತ್ತು ಈ ಬಗ್ಗೆ ಮಾತುಗಳು ಕೇಳಿಬರುತ್ತಿದೆ.

Gautam Adani overtakes Reliance chairman Mukesh Ambani's position as wealthiest man in Asia gow

ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಮುಕೇಶ್ ಅಂಬಾನಿ ಅವರ ಪಟ್ಟಕ್ಕೆ ಕುತ್ತು ಬರುವ ಲಕ್ಷಣ ಕಾಣುತ್ತಿದೆ ಮತ್ತು ಈ ಬಗ್ಗೆ ಮಾತುಗಳು ಕೇಳಿಬರುತ್ತಿದೆ. ಕಳೆದ ಹಲವು  ವರ್ಷಗಳಿಂದ ಅಂಬಾನಿ ಅಗ್ರಸ್ಥಾನವನ್ನು ಹೊಂದಿದ್ದರು. ಆದರೆ ಈಗ ಹೊಸ ಸ್ಪರ್ಧಿ ಅಂಬಾನಿ ಸ್ಥಾನವನ್ನು ಸದ್ದಿಲ್ಲದೆ ಮುಚ್ಚಿ ಹಾಕುತ್ತಿದ್ದಾರೆ. ಅದೂ ಕೂಡ ಭಾರತೀಯನೇ ಎಂಬುದು ಮತ್ತೂ ಆಶ್ಚರ್ಯ ಮೂಡಿಸಿದೆ.

ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್‌ನ ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷರಾದ ಮುಖೇಶ್ ಅಂಬಾನಿ ಪ್ರಸ್ತುತ  114 ಶತಕೋಟಿ ಡಾಲರ್  ನಿವ್ವಳ ಮೌಲ್ಯದೊಂದಿಗೆ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ, ಮತ್ತು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ  11 ನೇ ಸ್ಥಾನದಲ್ಲಿದ್ದಾರೆ. ಆದರೆ ಅವರ ಈ ಸ್ಥಾನವನ್ನು ಅಲಂಕರಿಸಲು ಮತ್ತೊಬ್ಬ ಭಾರತೀಯ ಉದ್ಯಮಿ ಗೌತಮ್ ಅದಾನಿ ಓಟದಲ್ಲಿದ್ದಾರೆ ಎಂದು ವರದಿ ತಿಳಿಸಿದೆ.

ಮನು ಭಾಕರ್ ಪದಕ ಗೆದ್ದ ಬೆನ್ನಲ್ಲೇ ಅರಸಿ ಬಂದ 40ಕ್ಕೂ ಹೆಚ್ಚು ಬ್ರಾಂಡ್, ರಾಯಭಾರಿಯಾಗಲು ಕೋಟಿಗಟ್ಟಲೆ ಒಪ್ಪಂದ!

ಅದಾನಿ ಗ್ರೂಪ್‌ನ ಅಧ್ಯಕ್ಷರಾದ ಗೌತಮ್ ಅದಾನಿ  111 ಶತಕೋಟಿ ಡಾಲರ್ ನಿವ್ವಳ ಮೌಲ್ಯದೊಂದಿಗೆ ಮುನ್ನಡೆಯುತ್ತಿದ್ದಾರೆ. ಅವರು ಏಷ್ಯಾದ ಎರಡನೇ ಶ್ರೀಮಂತ ವ್ಯಕ್ತಿ ಮತ್ತು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 12 ನೇ ಸ್ಥಾನದಲ್ಲಿದ್ದಾರೆ. ಅಂಬಾನಿ ಮತ್ತು ಅದಾನಿ ನಡುವಿನ ನಿವ್ವಳ ಮೌಲ್ಯದ ಅಂತರ ಕೇವಲ 3 ಬಿಲಿಯನ್ ಡಾಲರ್‌  ಅಷ್ಟೇ ಇದೆ. ಈ ವರ್ಷ ಅಂಬಾನಿ ಸಂಪತ್ತು 17.7 ಬಿಲಿಯನ್ ಡಾಲರ್‌ಗಳಷ್ಟು ಹೆಚ್ಚಿದ್ದರೆ, ಅದಾನಿ 26.9 ಬಿಲಿಯನ್ ಡಾಲರ್‌ಗಳಷ್ಟು ಏರಿಕೆಯಾಗಿದೆ. ಕಳೆದವಾರ ಒಂದೇ ದಿನದಲ್ಲಿ,  ಅಂಬಾನಿಯ  687 ಮಿಲಿಯನ್ ಡಾಲರ್ ಲಾಭಕ್ಕೆ ಹೋಲಿಸಿದರೆ. 
ಅದಾನಿಯವರ ಸಂಪತ್ತು  2.90 ಬಿಲಿಯನ್ ಡಾಲರ್‌ಗಳಷ್ಟು ಹೆಚ್ಚಾಗಿದೆ.

ವಿಶ್ವದ ಆರ್ಥಿಕ  ಮಟ್ಟ ಕೂಡ ಇದರಲ್ಲಿ ಒಂದು ಪಾತ್ರವನ್ನು ವಹಿಸಿದೆ. US ಸ್ಟಾಕ್ ಮಾರುಕಟ್ಟೆಯಲ್ಲಿನ ಕುಸಿತವು ವಿಶ್ವದ ಅನೇಕ ಉನ್ನತ ಬಿಲಿಯನೇರ್‌ಗಳ ಮೇಲೆ ಪರಿಣಾಮ ಬೀರಿದೆ. ಜಾಗತಿಕವಾಗಿ ಅತ್ಯಂತ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಅವರ ನಿವ್ವಳ ಮೌಲ್ಯವು  241 ಬಿಲಿಯನ್ ಡಾಲರ್‌ ನಿಂದ  10.9 ಬಿಲಿಯನ್ ಡಾಲರ್‌  ಕುಸಿದಿದೆ. ಜೆಫ್ ಬೆಜೋಸ್ ಮತ್ತು ಬರ್ನಾರ್ಡ್ ಅರ್ನಾಲ್ಟ್ ಸಹ ಗಮನಾರ್ಹ ನಷ್ಟವನ್ನು ಅನುಭವಿಸಿದರು, ಆದರೆ ಫೇಸ್‌ಬುಕ್‌ನ ಮಾರ್ಕ್ ಜುಕರ್‌ಬರ್ಗ್   7.99 ಬಿಲಿಯನ್  ನಿಂದ ಉತ್ತಮ ಏರಿಕೆಯನ್ನು ಕಂಡರು. 177 ಬಿಲಿಯನ್ ಡಾಲರ್‌ ನಿವ್ವಳ ಮೌಲ್ಯದೊಂದಿಗೆ ನಾಲ್ಕನೇ ಸ್ಥಾನಕ್ಕೇರಿದರು.

ವಯನಾಡು ದುರಂತ ಬಳಿಕ ಹೈ ಅಲರ್ಟ್, ಮಳೆ ಅಬ್ಬರ ಕಡಿಮೆಯಾಗಲೆಂದು ದಕ್ಷಿಣ ಕಾಶಿ ಕಳಸೇಶ್ವರನಿಗೆ ಅಗಿಲು ಸೇವೆ

ಈ ನಡುವೆ ಮೈಕ್ರೋಸಾಫ್ಟ್ ನ ಬಿಲ್ ಗೇಟ್ಸ್,  157 ಬಿಲಿಯನ್‌ ನಿವ್ವಳ ಮೌಲ್ಯದೊಂದಿಗೆ,  390 ಮಿಲಿಯನ್‌ ಗಳಷ್ಟು ಸಾಧಾರಣ ಏರಿಕೆಯೊಂದಿಗೆ  ಐದನೇ ಸ್ಥಾನವನ್ನು ಪಡೆದರು. 6ರಿಂದ10 ಸ್ಥಾನ ಅಲಂಕರಿಸಿದ್ದ  ಎಲ್ಲಾ ಅಗ್ರ ಬಿಲಿಯನೇರ್‌ಗಳು ಕುಸಿತ ಕಾಣಬೇಕಾಯ್ತು. ಲ್ಯಾರಿ ಪೇಜ್‌ನ ನಿವ್ವಳ ಮೌಲ್ಯವು  277 ಮಿಲಿಯನ್‌ನಿಂದ  153 ಮಿಲಿಯನ್ ಗೆ ಇಳಿದಿದೆ, ಲ್ಯಾರಿ ಎಲಿಸನ್ ಇವರು 1.87 ಬಿಲಿಯನ್ ಕಳೆದುಕೊಂಡರು.

ಇನ್ನು ಸ್ಟೀವ್ ಬಾಲ್ಮರ್‌ನ ಸಂಪತ್ತು  321 ಮಿಲಿಯನ್‌ ನಿಂದ ಕುಸಿದಿದೆ.  ಸೆರ್ಗೆ ಬ್ರಿನ್ ಅವರ ನಿವ್ವಳ ಮೌಲ್ಯ 238 ಮಿಲಿಯನ್ ಕಳೆದುಕೊಂಡರು ಮತ್ತು ವಾರೆನ್ ಬಫೆಟ್‌ನ 2.28 ಬಿಲಿಯನ್ ಮೌಲ್ಯದ   ಕಳೆದುಕೊಂಡರು.  ಹೆಚ್ಚುವರಿಯಾಗಿ, ಮೈಕೆಲ್ ಡೆಲ್ ಮತ್ತು ಎನ್ವಿಡಿಯಾ ಸಂಸ್ಥಾಪಕ ಜೆನ್ಸನ್ ಹುವಾಂಗ್ ಅವರ ಸಂಪತ್ತು ಕ್ರಮವಾಗಿ  4.49 ಮಿಲಿಯನ್ ಮತ್ತು  6.83 ಮಿಲಿಯನ್ ಗಳಷ್ಟು ಇಳಿಕೆ ಕಂಡಿದೆ. 

ಕೋಟ್ಯಧಿಪತಿಗಳ ಶ್ರೀಮಂತಿಕೆಯ ಓಟ ತೀವ್ರವಾಗಿದೆ ಮತ್ತು ಗೌತಮ್ ಅದಾನಿ ಅವರ ತ್ವರಿತ ಏರಿಕೆಯು ಏಷ್ಯಾದಲ್ಲಿ ಮುಕೇಶ್ ಅಂಬಾನಿಯವರ ದೀರ್ಘಕಾಲದಿಂದ ಪ್ರಾಬಲ್ಯದಲ್ಲಿರುವ ನಂಬರ್ 1 ಪಟ್ಟಕ್ಕೆ ನಿಜವಾದ ಸವಾಲನ್ನು ಒಡ್ಡುತ್ತಿದ್ದಾರೆ. ಅದಾನಿ ಅಂಬಾನಿಯನ್ನು ಹಿಂದಿಕ್ಕಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಬಿರುದನ್ನು ಪಡೆದುಕೊಳ್ಳಬಹುದೇ ಎಂಬುದನ್ನು ಭವಿಷ್ಯದಲ್ಲಿ ನಾವು ನೋಡಬಹುದಾಗಿದೆ.

Latest Videos
Follow Us:
Download App:
  • android
  • ios