Asianet Suvarna News Asianet Suvarna News

ಫೆಬ್ರವರಿಯಿಂದ ಇ-ವ್ಯಾಲೆಟ್‌ಗಳು ಬಂದ್: ಮೋದಿ ಕನಸು ಭಗ್ನ?

ಇ-ಕಾಮರ್ಸ್‌ಗಳ ಮೇಲೆ ಸರ್ಕಾರದ ಕಟ್ಟುನಿಟ್ಟಿನ ಕ್ರಮ| ಇ-ವ್ಯಾಲೆಟ್‌ಗಳ ಮೇಲೆ ನಿಯಂತ್ರಣ ಹೇರಲು ಸರ್ಕಾರ ಸಿದ್ಧ| ಇ-ವ್ಯಾಲೆಟ್‌ಗಳಿಗೆ ಕತ್ತು ತಂದ ಸುಪ್ರೀಂ ಕೋರ್ಟ್ ಆಧಾರ್ ತೀರ್ಪು|  ಫೆಬ್ರವರಿಯಲ್ಲಿ ಹಲವು ಇ-ವ್ಯಾಲೆಟ್‌ಗಳು ನಿಷ್ಕ್ರೀಯಗೊಳ್ಳುವ ಸಾಧ್ಯತೆ| ಅಮೆಜಾನ್, ಪೇಟಿಎಂಗಳಿಗೂ ಹೊಡೆತ ಬೀಳುವ ಅಂದಾಜು

Most e-wallets Might Become Invalid by February-end
Author
Bengaluru, First Published Jan 29, 2019, 4:28 PM IST

ನವದೆಹಲಿ(ಜ.29): ಇ-ಕಾಮರ್ಸ್‌ಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಬಳಿಕ ಇದೀಗ ಇ-ವ್ಯಾಲೆಟ್‌ಗಳ ಮೇಲೆ ನಿಯಂತ್ರಣ ಹೇರಲು ಕೇಂದ್ರ ಸರ್ಕಾರ ಮುಂದಾಗಿದೆ.

ಹೌದು, ಖಾಸಗಿ ಕಂಪನಿಗಳು ಯಾವುದೇ ಕಾರಣಕ್ಕೂ ವ್ಯಕ್ತಿಯ ಆಧಾರ್ ಕಾರ್ಡ್ ಮಾಹಿತಿ ಪಡೆಯುವಂತಿಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ, ಇ-ವ್ಯಾಲೆಟ್‌ಗಳ ಮೇಲೆ ಕಣ್ಣಿಡುವುದು ಸರ್ಕಾರಕ್ಕೆ ಅನಿವಾರ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಇದೇ ಫೆಬ್ರವರಿ ಕೊನೆಯ ತಿಂಗಳವರೆಗೆ ಹಲವು ಇ-ವ್ಯಾಲೆಟ್‌ಗಳು ನಿಷ್ಕ್ರೀಯಗೊಳ್ಳುವ ಸಾಧ್ಯತೆಗಳಿವೆ. ಡಿಜಿಟಲ್ ವ್ಯಾಲೆಟ್‌ಗಳ ಶೇ. 80ರಷ್ಟು ಗ್ರಾಹಕರು ಇದುವರೆಗೂ ತಮ್ಮ ಕೆವೈಸಿ ಸಲ್ಲಿಸಿಲ್ಲ. ತಮ್ಮ ಸಂಪೂರ್ಣ ಕೆವೈಸಿ ಸಲ್ಲಿಸಲು ಗ್ರಾಹಕರು ತಮ್ಮ ಅಡ್ರೆಸ್ ಪ್ರೂಫ್, ಐಡಿ ಪ್ರೂಪ್ ಇತ್ಯಾದಿ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

Most e-wallets Might Become Invalid by February-end

ಭಾರತದ ರಾಷ್ಟ್ರೀಯ ಪಾವತಿಗಳ ನಿಗಮ ಮತ್ತು ಆರ್‌ಬಿಐ ಮಾಹಿತಿ ಪ್ರಕಾರ ಕಳೆದ ಡಿಸೆಂಬರ್‌ನಲ್ಲಿ ಯುಪಿಐ ಮೂಲಕ ಸುಮಾರು 620 ಮಿಲಿಯನ್ ಹಣದ ವಹಿವಾಟು ನಡೆದಿದ್ದು, ಅಪನಗದೀಕರಣದ ಬಳಿಕ ಹೆಚ್ಚಾಗಿದ್ದ ಇ-ವ್ಯಾಲೆಟ್ ವಹಿವಾಟು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಎಂದು ಹೇಳಿದೆ.

ಇನ್ನು ಸರ್ಕಾರದ ಈ ನಿರ್ಧಾರದಿಂದಾಗಿ ಬಹುತೇಕ ಇ-ವ್ಯಾಲೆಟ್ ಕಂಪನಿಗಳು ಮುಚ್ಚಲಿದ್ದು, ಭಾರೀ ಸಂಖ್ಯೆಯ ಗ್ರಾಹಕರನ್ನು ಹೊಂದಿರುವ ಅಮೆಜಾನ್, ಪೇಟಿಎಂಗಳಿಗೂ ಹೊಡೆತ ಬೀಳಲಿದೆ ಎನ್ನಲಾಗುತ್ತಿದೆ.

Follow Us:
Download App:
  • android
  • ios