2024ನೇ ಸಾಲಿನ ಭಾರತದ ಜಿಡಿಪಿ ಪ್ರಗತಿ ಅಂದಾಜು ದರ ಪರಿಷ್ಕರಿಸಿದ ಮೂಡೀಸ್; ಶೇ.6.8ಕ್ಕೆ ಹೆಚ್ಚಿಸಿದ ರೇಟಿಂಗ್ ಸಂಸ್ಥೆ

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಅಕ್ಟೋಬರ್ -ಡಿಸೆಂಬರ್ ತ್ರೈಮಾಸಿಕದಲ್ಲಿ ದೇಶದ ಆರ್ಥಿಕತೆ ಶೇ. 8.4ರಷ್ಟು ಪ್ರಗತಿ ದಾಖಲಿಸಿದೆ ಎಂದು ತಿಳಿಸಿತ್ತು. ಅದರ ಬೆನ್ನಲ್ಲೇ ಭಾರತದ ಜಿಡಿಪಿ ಅಂದಾಜು ದರವನ್ನು ಮೂಡೀಸ್ ಈ ಹಿಂದಿನ ಶೇ.6.1ರಿಂದ ಶೇ.6.8ಕ್ಕೆ ಹೆಚ್ಚಳ ಮಾಡಿದೆ.
 

Moodys raises Indias GDP growth projection to 6 8pc in 2024 anu

ನವದೆಹಲಿ (ಮಾ.4): 2024ನೇ ಸಾಲಿಗೆ ಭಾರತದ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಅಂದಾಜು ದರವನ್ನು ರೇಟಿಂಗ್ ಏಜೆನ್ಸಿ ಮೂಡೀಸ್ ಹೆಚ್ಚಳ ಮಾಡಿದೆ.  2024ನೇ ಸಾಲಿಗೆ ಮೂಡೀಸ್ ಜಿಡಿಪಿ ಅಂದಾಜು ದರವನ್ನು ಈ ಮೊದಲು ಶೇ.6.1ಕ್ಕೆ ಅಂದಾಜಿಸಿತ್ತು. ಆದರೆ, ಈಗ ಅದನ್ನು ಪರಿಷ್ಕರಿಸಿದ್ದು, ಶೇ.6.8ಕ್ಕೆ ಹೆಚ್ಚಳ ಮಾಡಿದೆ. ಇದು ನಿರೀಕ್ಷಿತ ಶೇ.6.6 ದರವನ್ನು ಮೀರಿಸಿದೆ. ಭಾರತದ ಆರ್ಥಿಕತೆಯು ದೃಢವಾದ ವಿಸ್ತರಣೆಯನ್ನು ತೋರಿಸುತ್ತಿದೆ.  ಇದಕ್ಕೆ ಸಾಕ್ಷಿಯೆಂಬಂತೆ ಅಕ್ಟೋಬರ್ -ಡಿಸೆಂಬರ್ ತ್ರೈಮಾಸಿಕದಲ್ಲಿ ಶೇ. 8.4ರಷ್ಟು ಬೆಳವಣಿಗೆ ದಾಖಲಿಸಿದೆ. ಈ ಮೂಲಕ ವಿಶ್ಲೇಷಕರ ನಿರೀಕ್ಷೆಯನ್ನು ಮೀರಿದ ಬೆಳವಣಿಗೆ ತೋರಿದೆ. ಆದರೆ, ಒಟ್ಟು ಮೌಲ್ಯ ಸೇರ್ಪಡೆ (ಜಿವಿಎ) ಪರಿಶೀಲಿಸಿದಾಗ ಸೂಕ್ಷ್ಮ ಬದಲಾವಣೆ ಗೋಚರಿಸಿದೆ. ಜಿವಿಎ ಆರ್ಥಿಕತೆಯಲ್ಲಿ ಸರಕು ಹಾಗೂ ಸೇವೆಗಳ ಉತ್ಪಾದನೆಯ ಒಟ್ಟು ಮೌಲ್ಯವನ್ನು ಅಳತೆ ಮಾಡುತ್ತದೆ. ಇದು ಪರೋಕ್ಷ ತೆರಿಗೆಗಳು ಹಾಗೂ ಸಬ್ಸಿಡಿಯನ್ನು ಹೊರತುಪಡಿಸಿದೆ. 

ಜಿವಿಎ ಶೇ.6.5ರಷ್ಟು ಬೆಳವಣಿಗೆ ದಾಖಲಿಸಿದೆ. ಇದು ಜಿಡಿಪಿ ಅಂಕಿಅಂಶ ನೈಜ್ಯ ಪ್ರಗತಿ ಟ್ರೆಂಡ್ಸ್ ಅನ್ನು ಹೆಚ್ಚಿಸಿ ಹೇಳುತ್ತಿದೆ ಎಂಬ ಬಗ್ಗೆ ಅರ್ಥಶಾಸ್ತ್ರಜ್ಞರನ್ನು ಎಚ್ಚರಿಸಿದೆ. ಈ ಆರ್ಥಿಕ ಸಾಲು 2024ರ  ಮಾರ್ಚ್ 31ಕ್ಕೆ ಅಂತ್ಯವಾಲಲಿದ. ಭಾರತದ  ಒಟ್ಟು  ಜಿಡಿಪಿ ಪ್ರಗತಿಯನ್ನು ಶೇ.7.6ಕ್ಕೆ ಅಂದಾಜಿಸಲಾಗಿದೆ. ಈ ಬೆಳವಣಿಗೆ ಹಿಂದಿನ ಚಾನಾ ಶಕ್ತಿ ಹೂಡಿಕೆಯಾಗಿದೆ. ಇದು ಮೂರನೇ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ಶೇ.10.6ರಷ್ಟು ಬೆಳವಣಿಗೆ ದಾಖಲಿಸಿದೆ. 

ಅಕ್ಟೋಬರ್‌-ಡಿಸೆಂಬರ್‌ನಲ್ಲಿ ದೇಶದ ಜಿಡಿಪಿ ಶೇ.8.4ರಲ್ಲಿ ಪ್ರಗತಿ, ಕೇಂದ್ರದ ಮಾಹಿತಿ

ಸರ್ಕಾರದ ವೆಚ್ಚ ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರ ಈ ಸಕಾರಾತ್ಮಕ ಟ್ರೆಂಡ್ ಹಿಂದಿನ ಪ್ರಮುಖ ಕೊಡುಗೆದಾರರು ಎಂದು ಗುರುತಿಸಲಾಗಿದೆ. ಇದಕ್ಕೆ ವಿರುದ್ಧವಾಗಿ, ಬಳಕೆ ಹಿಂದೆ ಉಳಿದಿದ್ದು, ಶೇ.3.5ರಷ್ಟು ಬೆಳವಣಿಗೆ ದಾಖಲಿಸಿದೆ. ಇದು ವಿಸ್ತಾರವಾದ ಆರ್ಥಿಕ ನಿರ್ವಹಣೆಗಿಂತ ಕಡಿಮೆ ಇದೆ. ಅದೇನೇ ಆದರೂ ಮೂಡೀಸ್ ಕೂಡ ಭಾರತದ ಜಿಡಿಪಿ ಅಂದಾಜು ದರವನ್ನು ಈ ಹಿಂದಿನ ದರಕ್ಕಿಂತ ಶೇ.0.7ರಷ್ಟು ಹೆಚ್ಚಳ ಮಾಡಿರೋದು ಸಹಜವಾಗಿ ಭಾರತದ ಆರ್ಥಿಕತೆ ಇನ್ನಷ್ಟು ಸದೃಢಗೊಳ್ಳುವ ಕುರಿತ ವಿಶ್ವಾಸವನ್ನು ಹೆಚ್ಚಿಸಿದೆ. 

ಡಿಸೆಂಬರ್ ತ್ರೈಮಾಸಿಕದ ಜಿಡಿಪಿ ಪ್ರಗತಿ ಶೇ.8.4 
ಡಿಸೆಂಬರ್ ತ್ರೈಮಾಸಿಕದಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನವು (ಜಿಡಿಪಿ) 8.4 ಪ್ರತಿಶತದಷ್ಟು ಬೆಳೆದಿದೆ ಎಂದು ಫೆಬ್ರವರಿ 29 ರಂದು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿದೆ. ಇದು 2022ರ 2ನೇ ತ್ರೈಮಾಸಿಕದ ಬಳಿಕ ದೇಶದ ಜಿಡಿಪಿಯ ತ್ರೈಮಾಸಿಕ ವರದಿಯ ಅತ್ಯುತ್ತಮ ಫಲಿತಾಂಶವಾಗಿದೆ. 

ಒಂದು ವರ್ಷದ ಹಿಂದೇ ಇದೇ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ಪ್ರಗತಿ ಶೇ. 4.3ರಷ್ಟಿತ್ತು. ಆದರೆ, ಈ ತ್ರೈಮಾಸಿಕದಲ್ಲಿ ಇದರಲ್ಲಿ ಭಾರೀ ಅಭಿವೃದ್ಧಿಯಾಗಿದೆ ಎಂದು ಅಂಕಿ ಅಂಶ ತಿಳಿಸಿದೆ. ಆರ್ಥಿಕ ತಜ್ಞರು ಮೂರನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯನ್ನು ಶೇಕಡಾ 7 ಕ್ಕಿಂತ ಕಡಿಮೆ ಎಂದು ಅಂದಾಜಿಸಿದ್ದರೆ, ಸರ್ಕಾರ ಬಿಡುಗಡೆ ಮಾಡಿದ ಅಂಕಿಅಂಶಗಳು ಭಾರತೀಯ ಆರ್ಥಿಕತೆಯು ವೇಗವಾಗಿ ವಿಸ್ತರಿಸುತ್ತಿದೆ ಎಂದು ತೋರಿಸಿದೆ. 

ದೇಶದ ಜಿಡಿಪಿ ಪ್ರಗತಿ ದರ ವಿಶ್ವದಲ್ಲೇ ನಂ.1: ಚೀನಾ ಹಿಂದಿಕ್ಕಿದ ಭಾರತ

ಮೂರನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯು Q2FY24 ನಲ್ಲಿನ 7.6 ಶೇಕಡಾಕ್ಕಿಂತ ಉತ್ತಮವಾಗಿದೆ.  ನಿರ್ಮಾಣ ವಲಯದ ಎರಡಂಕಿಯ ಬೆಳವಣಿಗೆ ದರ (ಶೇ 10.7), ಉತ್ಪಾದನಾ ವಲಯದ ಉತ್ತಮ ಬೆಳವಣಿಗೆ ದರ (ಶೇ 8.5) 2024ರ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯನ್ನು ಹೆಚ್ಚಿಸಿದೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿದೆ. ಪ್ರಸ್ತುತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಶೇ 8.4 ರಷ್ಟು ಬೆಳವಣಿಗೆಗೆ ಈ ವಲಯಗಳ ಪ್ರಗತಿಯೇ ಪ್ರಮುಖ ಕಾರಣವಾಗಿವೆ.

Latest Videos
Follow Us:
Download App:
  • android
  • ios