Asianet Suvarna News Asianet Suvarna News

ಐದಾರು ವರ್ಷಗಳಲ್ಲಿ ಮನೆ ಖರೀದಿ ಮಾಡ್ಬೇಕು ಅಂದ್ರೆ ಹುಡುಗಿಯರು ಈ ರೂಲ್ಸ್ ಫಾಲೋ ಮಾಡಿ!

ಓದು ಮುಗಿಸಿ ಕೆಲಸಕ್ಕೆ ಸೇರ್ತಿದ್ದಂತೆ ಕೈಗೆ ಸಿಗುವ ಹಣ ನಮ್ಮನ್ನಾಡಿಸೋಕೆ ಶುರು ಮಾಡುತ್ತೆ. ಕಂಡಿದ್ದೆಲ್ಲ ಬೇಕು ಎನ್ನಿಸುತ್ತೆ. ಆರಂಭದಲ್ಲಿ ಒಂದಷ್ಟು ವರ್ಷ ಹಣ ಪೋಲು ಮಾಡಿದ್ಮೇಲೆ ಜ್ಞಾನೋದಯಗೊಂಡ ಹುಡುಗಿಯರೇ ಇದನ್ನು ತಿಳಿದ್ಕೊಳ್ಳಿ. 

Money Making Tips Women And Personal Finance Advice roo
Author
First Published Feb 10, 2024, 3:05 PM IST

ಸ್ವಂತ ಮನೆ ಖರೀದಿ ಎಲ್ಲರ ಕನಸು. ಶ್ರೀಮಂತರಾಗ್ಬೇಕು ಅಂದ್ರೆ ಬಾಡಿಗೆ ಮನೆಯಲ್ಲಿ ವಾಸ ಮಾಡ್ಬೇಕು ಎಂದು ಅನೇಕ ತಜ್ಞರು ಸಲಹೆ ನೀಡಿದ್ರೂ ಮಧ್ಯಮ ವರ್ಗದವರ ಕನಸು ಬದಲಾಗಲು ಸಾಧ್ಯವಿಲ್ಲ. ಜೀವನದಲ್ಲಿ ಒಂದು ಸ್ವಂತ ಮನೆ ಖರೀದಿ ಮಾಡಬೇಕೆಂಬ ಗುರಿಯೊಂದಿಗೆ ಅವರು ಕೆಲಸ ಮಾಡ್ತಾರೆ. ಮನೆ ಖರೀದಿ ಮಾಡಬೇಕು ಎಂಬ ಆಸೆ ಇರುತ್ತದೆ. ಆದ್ರೆ ಅದಕ್ಕೆ ತಕ್ಕಂತೆ ಉಳಿತಾಯ ಇರೋದಿಲ್ಲ. ಮನೆ ನಿರ್ಮಾಣ, ಗೃಹ ಸಾಲ, ಹೂಡಿಕೆಗೆ ಸಂಬಂಧಿಸಿದ ಮಾಹಿತಿ ಅವರಿಗೆ ಇರೋದಿಲ್ಲ. ಈಗಿನ ದಿನಗಳಲ್ಲಿ ಹುಡುಗಿಯರು ಕೂಡ ಒಳ್ಳೊಳ್ಳೆ ಹುದ್ದೆಯಲ್ಲಿದ್ದಾರೆ. ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಒಂದು ಮನೆ ಖರೀದಿ ಮಾಡ್ಬೇಕು ಎಂಬ ಬಯಕೆ ಅವರಿಗೂ ಇರುತ್ತದೆ. ಆದ್ರೆ ಅದಕ್ಕೆ ಸರಿಯಾದ ತಯಾರಿ ಇರೋದಿಲ್ಲ. ಮಹಿಳೆಯರು ತಮ್ಮ ಸ್ವಂತ ಮನೆ ಹೊಂದುವ ಕನಸನ್ನು ನನಸು ಮಾಡಿಕೊಳ್ಳಬಹುದು.  

ಮನೆ (House) ಖರೀದಿ ಮಾಡ್ಬೇಕು ಎಂಬ ಕಾರಣಕ್ಕೆ ಒಂದಿಷ್ಟು ಸಾಲ (Loan) ಪಡೆದು, ನಂತ್ರ ಅದನ್ನು ತೀರಿಸಲು ಮಹಿಳೆಯರು ಕಷ್ಟಪಡ್ತಾರೆ. ಒತ್ತಡ, ಆತಂಕಕ್ಕೆ ಒಳಗಾಗ್ತಾರೆ.  ಅದ್ರ ಬದಲು, ಕೆಲಸ ಶುರು ಮಾಡಿದ ಆರಂಭದಲ್ಲಿಯೇ ಹೂಡಿಕೆ (investment) ಶುರು ಮಾಡಿದ್ರೆ ಐದಲ್ಲ, ಏಳು ವರ್ಷಗಳ ನಂತ್ರವಾದ್ರೂ ಆರಾಮವಾಗಿ ಮನೆ ಖರೀದಿ ಮಾಡಬಹುದು. ಮನೆ ಖರೀದಿ ವೇಳೆ ಎಲ್ಲ ಹಣವನ್ನು ಕ್ಯಾಶ್ ರೂಪದಲ್ಲಿ ನೀಡಲು ಸಾಧ್ಯವಿಲ್ಲ. ಗೃಹ ಸಾಲವನ್ನು ಪಡೆಯಬೇಕಾಗುತ್ತದೆ. ಮನೆಯ ವೆಚ್ಚದಲ್ಲಿ ಶೇಕಡಾ 80ರಷ್ಟನ್ನು ಬ್ಯಾಂಕ್ ಸಾಲದ ರೂಪದಲ್ಲಿ ನೀಡುತ್ತದೆ. ಉಳಿದ ಶೇಕಡಾ 20ರಷ್ಟನ್ನು ನೀವು ನೀಡಬೇಕಾಗುತ್ತದೆ. ಇದಲ್ಲದೆ ಡೌನ್ ಪೇಮೆಂಟ್, ನೋಂದಣಿಗೆ ಹಣ ನೀಡಬೇಕಾಗುತ್ತದೆ. ಇದಕ್ಕೆಲ್ಲ ನಿಮ್ಮ ಬಳಿ ಉಳಿತಾಯ ಇರೋದು ಮುಖ್ಯ. ನಿಮ್ಮ ಸಂಬಳ ಹಾಗೂ ಉಳಿತಾಯವನ್ನು ಪರಿಗಣಿಸಿಯೇ ಬ್ಯಾಂಕ್ ನಿಮಗೆ ಸಾಲ ನೀಡುತ್ತದೆ. ನೀವು ಎಷ್ಟು ಇಎಂಐ ಪಾವತಿ ಮಾಡಬಹುದು ಎಂಬ ಆಧಾರದ ಮೇಲೆ ಸಾಲವನ್ನು ಮಂಜೂರಿ ಮಾಡುತ್ತದೆ. 

ಮನೆ ಖರೀದಿ ಮಾಡಬೇಕೆಂಬುದು ನಿಮ್ಮ ಗುರಿ ಆಗಿದ್ದರೆ ನೀವು ಕೆಲಸ ಹಿಡಿದ ಮೊದಲ ತಿಂಗಳಿನಿಂದಲೇ ಸೇವಿಂಗ್ ಆರಂಭಿಸಬೇಕು. ಸಂಬಳದ ದೊಡ್ಡ ಮೊತ್ತವನ್ನು ಉಳಿಸುವುದು ಬಹಳ ಮುಖ್ಯ. ಹೆಚ್ಚಿನ ಹಣವನ್ನು ಹೂಡಿಕೆ ಮಾಡಿದರೆ ಇದರಿಂದ ನೀವು ಉತ್ತಮ ಆದಾಯವನ್ನು ಪಡೆಯಬಹುದು.

ಬ್ಯಾಂಕ್‌ ಜಾಬ್‌ ಬಿಟ್ಟು ಬಿಸಿ ಬಿಸಿ ಇಡ್ಲಿ ಮಾರಾಟ ಮಾಡಿ ಲಕ್ಷಾಂತರ ರೂ. ಗಳಿಸ್ತಿರೋ ಬೆಂಗಳೂರಿನ ವ್ಯಕ್ತಿ!

ಹುಡುಗಿಯರು ಕೆಲಸ ಸಿಗ್ತಿದ್ದಂತೆ ಬಟ್ಟೆ, ಅಗತ್ಯ ವಸ್ತುಗಳ ಖರೀದಿಗೆ ಹಣ ಖರ್ಚು ಮಾಡ್ತಾರೆ. ಮನೆಯ ಖರ್ಚಿಗೆ ಕೆಲವರು ಹಣ ನೀಡಿದ್ರೆ ಬಹುತೇಕ ಹುಡುಗಿಯರು ಭವಿಷ್ಯದ ಬಗ್ಗೆ ಆಲೋಚನೆ ಮಾಡುವುದಕ್ಕಿಂತ ಆಗಿನ ಪರಿಸ್ಥಿತಿ ಬಗ್ಗೆ ಮಾತ್ರ ಆಲೋಚನೆ ಮಾಡ್ತಾರೆ. ಆದ್ರೆ ಸಂಪಾದನೆ ಮಾಡಿದ ಹಣವನ್ನು ತಕ್ಷಣ ಈಕ್ವಿಟಿ ಫಂಡ್‌ ಗೆ ಹಾಕಬೇಕು. ಎಷ್ಟು ಬೇಗ ಎಸ್ ಐಪಿ ಮೂಲಕ ಹಣ ಹೂಡಲು ಶುರು ಮಾಡ್ತೀರೋ ಅಷ್ಟು ಒಳ್ಳೆಯದು. 

ಟ್ರಾಕ್ಟರ್ ರಾಣಿ ಎಂದೇ ಜನಪ್ರಿಯತೆ ಗಳಿಸಿರುವ ಭಾರತೀಯ ಮಹಿಳಾ ಉದ್ಯಮಿ ಈಕೆ; ಇವರ ಸಂಪತ್ತು ಎಷ್ಟು ಕೋಟಿ ಗೊತ್ತಾ?

ಮಾರುಕಟ್ಟೆ ಪರಿಸ್ಥಿತಿ ಅರಿತು ಹಣವನ್ನು ಹೂಡಬೇಕು. ಅನೇಕ ಬಾರಿ ಮಾರುಕಟ್ಟೆ ಅಸ್ಥಿರವಾಗಿದ್ದಾಗ ನಷ್ಟವಾಗುತ್ತದೆ. ಆರಂಭದಲ್ಲಿ ಅದ್ರ ಬಗ್ಗೆ ಸರಿಯಾದ ಮಾಹಿತಿ ಇರದ ಕಾರಣ ಸಮಸ್ಯೆ ಎದುರಾಗಬಹುದು. ವೃತ್ತಿ ಆರಂಭದಲ್ಲಿ ನೀವು ನಷ್ಟದ ಅಪಾಯ ಎದುರಿಸುವ ಸಾಮರ್ಥ್ಯ ಹೊಂದಿರುತ್ತೀರಿ. ಇಂಡೆಕ್ಸ್ ಫಂಡ್ ಮಾರುಕಟ್ಟೆ ಸೂಚ್ಯಂಕವನ್ನು ಮಾತ್ರ ಪ್ರತಿನಿಧಿಸುತ್ತವೆ. ಸೆನ್ಸೆಕ್ಸ್ ನಿಧಿಗಳು ಮತ್ತು ನಿಫ್ಟಿ ಸೂಚ್ಯಂಕ ನಿಧಿಗಳು ಅತ್ಯುತ್ತಮ ಆಯ್ಕೆಗಳಾಗಿವೆ. ದೊಡ್ಡ ಕ್ಯಾಪ್ ಸೂಚ್ಯಂಕ ನಿಧಿಗಳಲ್ಲಿ ಹೂಡಿಕೆ ಮಾಡುವುದು ಕೂಡ ಒಳ್ಳೆಯದು. ಡೌನ್ ಪೇಮೆಂಟ್ ಗೆ ಹಣ ಹೊಂದಿಸಿದ ನಂತ್ರವೂ ನೀವು ಇಎಂಐ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. ವಿವಾಹಿತರಾಗಿದ್ದರೆ ನೀವು ಜಂಟಿ ಹೆಸರಿನಲ್ಲಿ ಗೃಹ ಸಾಲವನ್ನು ತೆಗೆದುಕೊಳ್ಳಿ. 

Follow Us:
Download App:
  • android
  • ios