ನಿಮ್ಮ ಹೆಣ್ಣುಮಗುವಿಗೆ ಇದಕ್ಕಿಂತ ಉತ್ತಮ ಉಡುಗೊರೆ ಬೇರಿಲ್ಲ;ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಆಕೆ ಭವಿಷ್ಯ ಭದ್ರ

ಮಹಿಳಾ ದಿನಂದು ನಿಮ್ಮ ಹೆಣ್ಣುಮಗುವಿಗೆ ಉತ್ತಮ ಉಡುಗೊರೆ ನೀಡಲು ಬಯಸಿದ್ದರೆ, ತಪ್ಪದೇ ಈ ಸರ್ಕಾರಿ ಯೋಜನೆಯಲ್ಲಿ ಹೂಡಿಕೆ ಮಾಡಿ. 
 

Modi Govt scheme for girls 8 2 interest income tax benefit womens day 2024 gift anu

Business Desk: ಹೆಣ್ಣುಮಗು ಹುಟ್ಟಿದ ತಕ್ಷಣ ಆಕೆಗ ಭವಿಷ್ಯದಲ್ಲಿ ಮದುವೆ, ವರದಕ್ಷಿಣೆಗಾಗಿ ಸಾಕಷ್ಟು ಹಣ ಖರ್ಚು ಮಾಡಬೇಕಾಗುತ್ತದೆ ಎಂಬ ಕಾರಣದಿಂದ ಹೆತ್ತವರು ಚಿಂತಿತರಾಗುತ್ತಿದ್ದ ಕಾಲವೊಂದಿತ್ತು. ಆದರೆ, ಈ ಆಧುನಿಕ ಯುಗದಲ್ಲಿ ಹೆಣ್ಣು-ಗಂಡು ಎಂಬ ಭೇದವಿಲ್ಲದೆ ಇಬ್ಬರಿಗೂ ಸಮಾನವಾದ ಶಿಕ್ಷಣ ನೀಡುವ ಹಾಗೂ ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಹೆತ್ತವರು ಶ್ರಮಿಸುತ್ತಿದ್ದಾರೆ. ಆದರೆ, ಕೆಲವು ಗ್ರಾಮೀಣ ಭಾಗಗಳಲ್ಲಿ ಇನ್ನೂ ಹೆಣ್ಣು ಮಗುವನ್ನು ಕುಟುಂಬಕ್ಕೆ ಭಾರ ಎಂದು ಪರಿಗಣಿಸುವ ಮನಸ್ಥಿತಿಗಳು ಕೂಡ ಇವೆ. ಇಂಥ ಪರಿಸ್ಥಿತಿಯಲ್ಲಿ ಹೆಣ್ಣುಮಕ್ಕಳ ಶಿಕ್ಷಣ ಹಾಗೂ ಭವಿಷ್ಯಕ್ಕೆ ಯಾವುದೇ ತೊಂದರೆಯಾಗಬಾರದು ಎಂಬ ಕಾರಣದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2015ರಲ್ಲಿ ಹೆಣ್ಣುಮಕ್ಕಳಿಗಾಗಿ ಒಂದು ಯೋಜನೆಯನ್ನು ಪ್ರಾರಂಭಿಸಿತು. ಹೆಣ್ಣುಮಗುವಿನ ಭವಿಷ್ಯದ ಶಿಕ್ಷಣ ಹಾಗೂ ವಿವಾಹದ ವೆಚ್ಚಗಳನ್ನು ಭರಿಸಲು ಒಂದು ನಿಧಿಯನ್ನು ಸೃಷ್ಟಿಸಲು ಹೆತ್ತವರಿಗೆ ಈ ಯೋಜನೆ ಪ್ರೋತ್ಸಾಹ ನೀಡುತ್ತದೆ. ಈ ಯೋಜನೆಯೇ ಸುಕನ್ಯಾ ಸಮೃದ್ಧಿ. ಹೆಣ್ಣುಮಗುವಿಗೆ ಉತ್ತಮ ಭವಿಷ್ಯ ನೀಡುವ ಉದ್ದೇಶದಿಂದ ಹೂಡಿಕೆ ಮಾಡಲು ಬಯಸುವ ಪೋಷಕರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.

ಯಾರು ಈ ಖಾತೆ ತೆರೆಯಬಹುದು?
10 ವರ್ಷದೊಳಗಿನ ಹೆಣ್ಣು ಮಗುವಿನ ಹೆತ್ತವರು ಅಥವಾ ಪಾಲಕರು ಈ ಯೋಜನೆಯಡಿ ಬ್ಯಾಂಕ್‌ ಅಥವಾ ಅಂಚೆ ಕಚೇರಿಯಲ್ಲಿ ಆಕೆ ಹೆಸರಲ್ಲಿ ಉಳಿತಾಯ ಖಾತೆ ತೆರೆಯಬಹುದು. ಎರಡು ಹೆಣ್ಣು ಮಕ್ಕಳಿದ್ರೆ ಅವರಿಬ್ಬರ ಹೆಸರಿನಲ್ಲೂ ಸುಕನ್ಯಾ ಸಮೃದ್ಧಿ ಖಾತೆ ತೆರೆಯಬಹುದು. ಒಂದು ವೇಳೆ ಮೊದಲನೇ ಮಗು ಹೆಣ್ಣಾಗಿದ್ದು, ಎರಡನೇ  ಹೆರಿಗೆಯಲ್ಲಿ ಅವಳಿ ಹೆಣ್ಣು ಮಕ್ಕಳಾದ್ರೆ ಅವರಿಬ್ಬರ ಹೆಸರಿನಲ್ಲೂ ಪ್ರತ್ಯೇಕ ಖಾತೆ ತೆರೆಯಬಹುದು. 

ನವೋದ್ಯಮದಲ್ಲೂ ಭಾರತೀಯ ನಾರಿ ಸಕ್ಸಸ್; ದೇಶದ 8000 ಸ್ಟಾರ್ಟ್ ಅಪ್ ಗಳ ಮಾಲೀಕರು ಮಹಿಳೆಯರೇ!

ಹೂಡಿಕೆ ಅವಧಿ ಎಷ್ಟು?
ಹೆಣ್ಣು ಮಗುವಿಗೆ 15 ವರ್ಷ ತುಂಬುವವರೆಗೆ ಹೂಡಿಕೆ ಮಾಡಬಹುದು. 18ನೇ ವಯಸ್ಸಲ್ಲಿ ಅಧ್ಯಯನಕ್ಕಾಗಿ 50% ಹಿಂಪಡೆಯಲು ಅವಕಾಶವಿದೆ. ಇನ್ನು  21ನೇ ವಯಸ್ಸಿಗೆ ಸಂಪೂರ್ಣ ಹಣ ವಾಪಾಸ್ ಪಡೆಯಲು ಅವಕಾಶವಿದೆ. ಒಂದು ವೇಳೆ 18 ವರ್ಷಕ್ಕಿಂತ ಮೊದಲು ನೀವು ಮಗಳಿಗೆ ಮದುವೆ ಮಾಡಿದರೆ ಈ ಖಾತೆಯಿಂದ ಯಾವುದೇ ಹಣ ಸಿಗೋದಿಲ್ಲ. ಮಗು ಸಾವಿಗೀಡಾದ್ರೆ ತಕ್ಷಣ ಖಾತೆಯನ್ನು ಮುಚ್ಚಿ, ಅದರಲ್ಲಿರೋ ಮೊತ್ತವನ್ನು ಪಾಲಕರಿಗೆ ನೀಡಲಾಗುತ್ತದೆ. 

ಎಲ್ಲಿ ಈ ಖಾತೆ ತೆರೆಯಬಹುದು?
ನಿಮ್ಮ ಸಮೀಪದ ಅಂಚೆ ಕಚೇರಿ ಅಥವಾ ಯಾವುದೇ ಬ್ಯಾಂಕಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ತೆರೆಯಬಹುದು. ಇವೆರಡರಲ್ಲಿ ಪ್ರತಿ ತಿಂಗಳು ಹಣ ಭರ್ತಿ ಮಾಡಲು ನಿಮಗೆ ಯಾವುದು ಹೆಚ್ಚು ಅನುಕೂಲವೆನಿಸುತ್ತದೋ ಅಲ್ಲಿ ಖಾತೆ ತೆರೆಯಿರಿ. ಹೆಣ್ಣು ಮಗುವಿನ ಹೆತ್ತವರು ಅಥವಾ ಪಾಲಕರು ಸುಕನ್ಯಾ ಸಮೃದ್ಧಿ ಅಕೌಂಟ್‌ ಫಾರ್ಮ್‌ (ಎಸ್‌ಎಸ್‌ಎ-೧) ತುಂಬಿಸಬೇಕು. ಈ ಫಾರ್ಮ್‌ ಅಂಚೆ ಕಚೇರಿ ಅಥವಾ ಬ್ಯಾಂಕ್‌ನಲ್ಲಿ ಸಿಗುತ್ತೆ. ಈಗಂತೂ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ, ಭಾರತೀಯ ಅಂಚೆ ಇಲಾಖೆ ವೆಬ್‌ಸೈಟ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಎಸ್‌ಬಿಐ ಸೇರಿದಂತೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳು, ಖಾಸಗಿ ವಲಯದ ಬ್ಯಾಂಕ್‌ಗಳ ವೆಬ್‌ಸೈಟ್‌ನಿಂದಲೂ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಇದರಲ್ಲಿ ಪಾಲಕರ ಹೆಸರು, ಮಗುವಿನ ಹೆಸರು, ಜನನ ಪ್ರಮಾಣ ಪತ್ರದ ವಿವರಗಳು, ವಿಳಾಸ ಪಾಲಕರ ಕೆವೈಸಿ ಮಾಹಿತಿಗಳನ್ನು ಭರ್ತಿ ಮಾಡಬೇಕು.

ಠೇವಣಿ ಎಷ್ಟು?
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಕನಿಷ್ಠ 250 ರೂಪಾಯಿ ಠೇವಣಿ ಇಡಬೇಕು. ಹಾಗೆಯೇ ವಾರ್ಷಿಕವಾಗಿ ಗರಿಷ್ಠ 1.5 ಲಕ್ಷ ರೂಪಾಯಿವರೆಗೆ ಠೇವಣಿ (Deposit) ಇಡಬಹುದು. 

Bank of Baroda offer for women: ಮಹಿಳೆಯರಿಗೆ ವಿಶೇಷ ಆಫರ್… ಈ ಖಾತೆಯಲ್ಲಿರಲಿದೆ 25 ಲಕ್ಷ ರೂ.

ಬಡ್ಡಿ ಎಷ್ಟು?
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಮಾಡಿರುವ ಹೂಡಿಕೆಗೆ ಪ್ರಸ್ತುತ ಶೇ.8.2ರಷ್ಟು ಬಡ್ಡಿದರ ನೀಡಲಾಗುತ್ತಿದೆ. 

Bank of Baroda offer for women: ಮಹಿಳೆಯರಿಗೆ ವಿಶೇಷ ಆಫರ್… ಈ ಖಾತೆಯಲ್ಲಿರಲಿದೆ 25 ಲಕ್ಷ ರೂ.

ತೆರಿಗೆ ಪ್ರಯೋಜನ?
ಆದಾಯ ತೆರಿಗೆಯ ಸೆಕ್ಷನ್ 80C ಅಡಿಯಲ್ಲಿ 1.50 ಲಕ್ಷ ರೂ. ರವರೆಗೆ ತೆರಿಗೆ ವಿನಾಯ್ತಿ ಪಡೆಯಲು ಅವಕಾಶವಿದೆ. 


 

Latest Videos
Follow Us:
Download App:
  • android
  • ios