ದೇಶದಲ್ಲಿ ಮೂರು ಸೆಮಿಕಂಡಕ್ಟರ್ ಪ್ಲ್ಯಾಂಟ್‌ಗೆ ಒಪ್ಪಿಗೆ ನೀಡಿದ ಕೇಂದ್ರ ಸಂಪುಟ!
ಮೂರು ಪ್ಲ್ಯಾಂಟ್‌ಗಳ ಸಂಯೋಜಿತ ಉತ್ಪಾದನೆಯು ತಿಂಗಳಿಗೆ 50,000 ವೇಫರ್‌ಗಳು ಎಂದು ಅಂದಾಜಿಸಲಾಗಿದೆ, ಇದು ವಾರ್ಷಿಕವಾಗಿ ಸುಮಾರು 3 ಬಿಲಿಯನ್ ಚಿಪ್‌ಗಳಿಗೆ ತಯಾರಿಸಲು ಸಾಧ್ಯವಾಗಲಿದೆ.
ನವದೆಹಲಿ (ಫೆ.29): ಭಾರತದಲ್ಲಿ ಮೂರು ಸೆಮಿಕಂಡಕ್ಟರ್ ಘಟಕಗಳನ್ನು ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಹಸಿರು ನಿಶಾನೆ ನೀಡಿದೆ. ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಗುರುವಾರ ಈ ಘೋಷಣೆ ಮಾಡಿದ್ದಾರೆ. ಮುಂದಿನ 100 ದಿನಗಳಲ್ಲಿ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. "ಇಂದು ಪ್ರಧಾನಿ ದೇಶದಲ್ಲಿ ಸೆಮಿಕಂಡಕ್ಟರ್ ಘಟಕಗಳನ್ನು ಸ್ಥಾಪಿಸಲು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಮೊದಲ ವಾಣಿಜ್ಯ ಸೆಮಿಕಂಡಕ್ಟರ್ ಫ್ಯಾಬ್ ಅನ್ನು ಟಾಟಾ ಮತ್ತು ಪವರ್‌ಚಿಪ್-ತೈವಾನ್ ಸ್ಥಾಪಿಸಲಿದೆ, ಅವರ ಪ್ಲಾಂಟ್ ಧೋಲೆರಾನಲ್ಲಿರಲಿದೆ' ಎಂದು ತಿಳಿಸಿದ್ದಾರೆ. ಟಾಟಾ ಎಲೆಕ್ಟ್ರಾನಿಕ್ಸ್ ಪ್ರೈವೇಟ್, ಪವರ್‌ಚಿಪ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕಾರ್ಪ್ ಜೊತೆಗೆ ಗುಜರಾತ್‌ನ ಧೋಲೆರಾದಲ್ಲಿ ಸೆಮಿಕಂಡಕ್ಟರ್ ಫ್ಯಾಕ್ಟರಿಯನ್ನು ಸ್ಥಾಪಿಸಲಿದೆ. 27,000 ಕೋಟಿ ಮೌಲ್ಯದ ಮತ್ತೊಂದು ಘಟಕ, ಅಸ್ಸಾಂನ ಮೊರಿಗಾಂವ್‌ನಲ್ಲಿ ಟಾಟಾ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟ್ ಪ್ರೈವೇಟ್ ಲಿಮಿಟೆಡ್ ಸ್ಥಾಪಿಸಲಿದೆ.
ಸಿಜಿ ಪವರ್, ಜಪಾನ್‌ನ ರಿನೇಸಾಸ್ ಎಲೆಕ್ಟ್ರಾನಿಕ್ಸ್ ಕಾರ್ಪೋರೇಷನ್ ಮತ್ತು ಥಾಯ್ಲೆಂಡ್‌ನ ಸ್ಟಾರ್ ಮೈಕ್ರೋಎಲೆಕ್ಟ್ರಾನಿಕ್ಸ್ ಸಹಭಾಗಿತ್ವದಲ್ಲಿ ಗುಜರಾತ್‌ನಲ್ಲಿ ಸೆಮಿಕಂಡಕ್ಟರ್ ಘಟಕವನ್ನು ಸ್ಥಾಪನೆ ಮಾಡಲಿದೆ.
ಶೀಘ್ರದಲ್ಲೇ ಡಿಜಿಟಲ್ ಲ್ಯಾಬ್, ಸೆಮಿಕಂಡಕ್ಟರ್ ಕೇಂದ್ರ, ಮೋದಿ ಸರ್ಕಾರದ ವಿಷನ್ ಬಿಚ್ಚಿಟ್ಟ ರಾಜೀವ್ ಚಂದ್ರಶೇಖರ್!
ಈ ಮೂರು ಪ್ಲ್ಯಾಂಟ್‌ಗಳ ಒಟ್ಟು ಹೂಡಿಕೆ 1.26 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಸಂಯೋಜಿತವಾಗಿ, ಇವುಗಳು 50,000 ವೇಫರ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಇದು ವಾರ್ಷಿಕವಾಗಿ ಸುಮಾರು 3 ಬಿಲಿಯನ್ ಚಿಪ್‌ಗಳ ತಯಾರಿಕೆಯೆ ಕಾರಣವಾಗುತ್ತದೆ ಧೋಲೆರಾದಲ್ಲಿ ಪ್ಲ್ಯಾಂಟ್‌ಗೆ 91,000 ಕೋಟಿ ರೂಪಾಯಿ, ಅಸ್ಸಾಂನಲ್ಲಿ 27,000 ಕೋಟಿ ರೂ. ಮತ್ತು ಸನಂದ್‌ನಲ್ಲಿ 7,600 ಕೋಟಿ ರೂಪಾಯಿ ಆಗಿರಲಿದೆ. ಈ ಹೊಸ ಕಾರ್ಖಾನೆಗಳು ಕಳೆದ ವರ್ಷ ಸನಂದ್‌ನಲ್ಲಿ ಮೈಕ್ರಾನ್ ಘೋಷಿಸಿದ ಕಾರ್ಖಾನೆಗೆ ಸೇರ್ಪಡೆಯಾಗಲಿದ್ದು, ಇದರ ಮೌಲ್ಯ 22,516 ಕೋಟಿ ರೂಪಾಯಿ ಆಗಿದೆ.
ರಾಜಕೀಯದಲ್ಲಿ ಮುಳುಗಿದ ಸರ್ಕಾರ, ಕರ್ನಾಟಕದ ಸೆಮಿಕಂಡಕ್ಟರ್ ಒಪ್ಪಂದ ಕಸಿದುಕೊಂಡ ತೆಲಂಗಾಣ!