ಅಪ್ರಾಪ್ತ ವಯಸ್ಕರು ಪ್ಯಾನ್ ಕಾರ್ಡ್ ಪಡೆಯಬಹುದಾ? ಅರ್ಜಿ ಸಲ್ಲಿಕೆ ಹೇಗೆ?
ತೆರಿಗೆ ಪಾವತಿಸೋರು ಪ್ಯಾನ್ ಕಾರ್ಡ್ ಹೊಂದಿರೋದು ಕಡ್ಡಾಯ. ಹೀಗಾಗಿ 18 ವರ್ಷಗಳ ನಂತರವಷ್ಟೇ ಪ್ಯಾನ್ ಕಾರ್ಡ್ ಮಾಡಬಹುದು ಎಂಬ ಭಾವನೆ ನಿಮ್ಮಲ್ಲಿದ್ದರೆ, ಅದು ಖಂಡಿತಾ ತಪ್ಪು. ಏಕೆಂದ್ರೆ ಪ್ಯಾನ್ ಕಾರ್ಡ್ ಕೋರಿ ಅರ್ಜಿ ಸಲ್ಲಿಕೆಗೆ ಆದಾಯ ತೆರಿಗೆ ಇಲಾಖೆ ಯಾವುದೇ ವಯೋಮಿತಿ ನಿಗದಿಪಡಿಸಿಲ್ಲ. ಹಾಗಾದ್ರೆ ಅಪ್ರಾಪ್ತ ವಯಸ್ಕರು ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸೋದು ಹೇಗೆ?
Business Desk: ಪ್ಯಾನ್ ಕಾರ್ಡ್ ಭಾರತದ ಪ್ರಮುಖ ದಾಖಲೆಗಳಲ್ಲಿ ಒಂದು. ಪ್ಯಾನ್ ಅನ್ನೋದು 10 ಅಂಕೆಗಳ ಇಂಗ್ಲಿಷ್ ಅಕ್ಷರಗಳು ಹಾಗೂ ಸಂಖ್ಯೆಗಳ ಸಮೂಹ. ಆದಾಯ ತೆರಿಗೆ ಇಲಾಖೆ ಪ್ಯಾನ್ ಕಾರ್ಡ್ ಗಳನ್ನು ವಿತರಿಸುತ್ತದೆ. ಪ್ಯಾನ್ ಕಾರ್ಡ್ ಅನ್ನು ತೆರಿಗೆ ಸಂಬಂಧಿ ಉದ್ದೇಶಗಳಿಗೆ ಬಳಸಲಾಗುತ್ತದೆ. ಹೀಗಾಗಿ ಎಲ್ಲ ತೆರಿಗೆದಾರರು ಪ್ಯಾನ್ ಕಾರ್ಡ್ ಹೊಂದಿರೋದು ಅಗತ್ಯ. ತೆರಿಗೆದಾರರ ಎಲ್ಲ ಹಣಕಾಸಿನ ವಹಿವಾಟುಗಳನ್ನು ಪ್ಯಾನ್ ಕಾರ್ಡ್ ಜೊತೆ ಲಿಂಕ್ ಮಾಡಲಾಗುತ್ತದೆ. ಇದರಿಂದ ಪ್ರತಿ ಪ್ಯಾನ್ ಕಾರ್ಡ್ ದಾರನ ತೆರಿಗೆ ಸಂಬಂಧಿ ಪ್ರತಿ ಮಾಹಿತಿಯನ್ನು ಸಂಗ್ರಹಿಸೋದು ಆದಾಯ ತೆರಿಗೆ ಇಲಾಖೆಗೆ ಸುಲಭವಾಗುತ್ತದೆ. ತೆರಿಗೆದಾರರು ಪ್ಯಾನ್ ಕಾರ್ಡ್ ಹೊಂದಿರೋದು ಕಡ್ಡಾಯವಾದ ಹಿನ್ನೆಲೆಯಲ್ಲಿ ಬಹುತೇಕರು 18 ವರ್ಷಗಳ ನಂತರವಷ್ಟೇ ಪ್ಯಾನ್ ಕಾರ್ಡ್ ಮಾಡಬಹುದು ಎಂಬ ಭಾವನೆ ಹೊಂದಿದ್ದಾರೆ. ಆದರೆ, ಪ್ಯಾನ್ ಕಾರ್ಡ್ ಕೋರಿ ಅರ್ಜಿ ಸಲ್ಲಿಸಲು ಆದಾಯ ತೆರಿಗೆ ಇಲಾಖೆ ಯಾವುದೇ ವಯೋಮಿತಿ ನಿಗದಿಪಡಿಸಿಲ್ಲ. ಹೀಗಾಗಿ ಅಪ್ರಾಪ್ತರು ಕೂಡ ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅರ್ಹರು. ತಿಂಗಳಿಗೆ 15,000ರೂ.ಗಿಂತ ಹೆಚ್ಚಿನ ಗಳಿಕೆ ಹೊಂದಿರುವ ಅಪ್ರಾಪ್ತ ವಯಸ್ಕನು ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸಬಹುದು. ಆದಾಯ ತೆರಿಗೆ ಪಾವತಿಗೆ ಪ್ಯಾನ್ ಕಾರ್ಡ್ ಅಗತ್ಯ. ಈ ಕಾರಣದಿಂದ ಆದಾಯ ತೆರಿಗೆ ಇಲಾಖೆ ಪ್ಯಾನ್ ಕಾರ್ಡ್ ಪಡೆಯಲು ವಯಸ್ಸಿನ ಮಿತಿ ನಿಗದಿಪಡಿಸಿಲ್ಲ.
ಅಪ್ರಾಪ್ತ ವಯಸ್ಕರಿಗೆ ಪ್ಯಾನ್ ಕಾರ್ಡ್ ಯಾವಾಗ ಅಗತ್ಯ?
*ಪೋಷಕರು ಮಗುವಿನ ಹೆಸರಿನಲ್ಲಿ ಹೂಡಿಕೆ ಮಾಡುವ ಸಂದರ್ಭದಲ್ಲಿ
*ಪಾಲಕರು ಮಗುವನ್ನು ತಮ್ಮ ಹೂಡಿಕೆ, ಷೇರುಗಳು ಅಥವಾ ಅಂಥ ಹಣಕಾಸಿನ ಉತ್ಪನ್ನಗಳ ನಾಮಿನಿಯಾಗಿ ನೇಮಿಸುವ ಉದ್ದೇಶ ಹೊಂದಿರುವಾಗ
*ಮಗುವಿನ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯಲು ಉದ್ದೇಶಿಸಿದಾಗ ಅಥವಾ ಹೆಣ್ಣು ಮಗುವಿನ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಖಾತೆ ತೆರೆಯುವ ಉದ್ದೇಶ ಹೊಂದಿದ್ರೆ
*ಮಕ್ಕಳು ಸ್ವತಃ ಗಳಿಸಲು ಪ್ರಾರಂಭಿಸಿದಾಗ
*ಕೌಶಲ್ಯ, ಜ್ಞಾನ ಹಾಗೂ ಪ್ರತಿಭೆ ಮೂಲಕ ಆದಾಯ ಗಳಿಸಲು ಪ್ರಾರಂಭಿಸಿದಾಗ
ಯಶಸ್ವಿ ಉದ್ಯಮಿಗಳೆಲ್ಲ ಗುಜರಾತಿಗಳೇ ಆಗಿರೋದೇಕೆ? ಇದಕ್ಕೇನು ಕಾರಣ?]
ಅರ್ಜಿ ಸಲ್ಲಿಸೋದು ಹೇಗೆ?
ಅಪ್ರಾಪ್ತ ವಯಸ್ಕರ ಪ್ಯಾನ್ ಕಾರ್ಡ್ ಗೆ ನೇರವಾಗಿ ಅವರೇ ಅರ್ಜಿ ಸಲ್ಲಿಸುವಂತಿಲ್ಲ. ಬದಲಿಗೆ ಅವರ ಪರವಾಗಿ ಪೋಷಕರು, ಪಾಲಕರು ಅರ್ಜಿ ಸಲ್ಲಿಕೆ ಮಾಡಬಹುದು. ಆನ್ ಲೈನ್ ಅಥವಾ ಆಪ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
ಆನ್ ಲೈನ್ ನಲ್ಲಿ ಹೇಗೆ?
*NSDL ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
*ಫಾರ್ಮ್ 49A ಭರ್ತಿ ಮಾಡಲು ಸೂಚನೆಗಳನ್ನು ಓದಿ. ಸರಿಯಾದ ವರ್ಗ ಆಯ್ಕೆ ಮಾಡುವ ಮೂಲಕ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ.
*ಫೋಟೋ ಹಾಗೂ ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಿ.
*ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಡಿಮ್ಯಾಂಡ್ ಡ್ರಾಫ್ಟ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಿ. ಆ ಬಳಿಕ ‘Submit’ಮೇಲೆ ಕ್ಲಿಕ್ ಮಾಡಿ.
ಈ ಮೇಲಿನ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಸ್ವೀಕೃತಿ ಸಂಖ್ಯೆ ನೀಡಲಾಗುತ್ತದೆ. ಇದನ್ನು ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಲು ಬಳಸಬಹುದು. ಪರಿಶೀಲನೆ ಯಶಸ್ವಿಯಾದ ಬಳಿಕ ನಿಮ್ಮ ವಿಳಾಸಕ್ಕೆ 10-15 ದಿನಗಳಲ್ಲಿ ಪ್ಯಾನ್ ಕಾರ್ಡ್ ಕಳುಹಿಸಲಾಗುತ್ತದೆ.
ಎಸ್ ಬಿಐ, ಪಿಎನ್ ಬಿ ಖಾಸಗೀಕರಣಕ್ಕೆ ಸರ್ಕಾರದ ಸಿದ್ಧತೆ?
ಆಪ್ ಲೈನ್ ಸಲ್ಲಿಕೆ ಹೇಗೆ?
*NSDL ಅಧಿಕೃತ ವೆಬ್ ಸೈಟ್ ನಿಂದ ಅರ್ಜಿ 49A ಡೌನ್ ಲೋಡ್ ಮಾಡಿ.
*ಆ ಬಳಿಕ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ.
*ಅಗತ್ಯ ದಾಖಲೆಗಳ ಪ್ರತಿಯನ್ನು ಲಗತ್ತಿಸಿ.
*ಮಗುವಿನ ಎರಡು ಫೋಟೋ ಕೂಡ ಲಗತ್ತಿಸಿ.
*ಅಗತ್ಯ ದಾಖಲೆಗಳು ಹಾಗೂ ಶುಲ್ಕದೊಂದಿಗೆ ಅರ್ಜಿ ಯನ್ನು ಸಮೀಪದ UTIITSL/NSDL ಕಚೇರಿಗೆ ಸಲ್ಲಿಕೆ ಮಾಡಿ.