ವಾಷಿಂಗ್ಟನ್‌[ಅ.18]: ಸಾಫ್ಟ್‌ವೇರ್‌ ದೈತ್ಯ ಮೈಕ್ರೋಸಾಫ್ಟ್‌ ಸಿಇಒ ಸತ್ಯ ನಾಡೆಳ್ಲಾ 2018-19ನೇ ಸಾಲಿನಲ್ಲಿ ಭರ್ಜರಿ 300 ಕೋಟಿ ರು. ಆದಾಯ ಪಡೆದುಕೊಂಡಿದ್ದಾರೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.66ರಷ್ಟುಹೆಚ್ಚು ಎಂದು ಸಿಎನ್‌ಎನ್‌ ಬ್ಯುಸಿನೆಸ್‌ ವರದಿ ಮಾಡಿದೆ.

52 ವರ್ಷದ ಭಾರತೀಯ ಮೂಲದ ನಾದೆಳ್ಲಾ ಅವರ ಮೂಲ ವೇತನ 16.37 ಕೋಟಿ ರು.. ಉಳಿದ ಆದಾಯವನ್ನು ಅವರು ಷೇರು ಆದಾಯದ ಮೂಲಕ ಪಡೆದುಕೊಂಡಿದ್ದಾರೆ.

ಕಂಪನಿಯ ಲಾಭಾಂಶದಲ್ಲಿ ಭಾರೀ ಏರಿಕೆಯಾಗಿರುವ ಕಾರಣ, ಸತ್ಯಾ ಅವರಿಗೆ ನೀಡಲಾಗುವ ಫಲಿತಾಂಶ ಆಧರಿತ ಷೇರುಗಳ ಮೌಲ್ಯವೂ ಭರ್ಜರಿ ಏರಿಕೆಗೊಂಡ ಕಾರಣ, ಅವರ ಆದಾಯ ಹೆಚ್ಚಳಗೊಂಡಿದೆ.