ಈಕೆ ಸಂಪತ್ತಿನಲ್ಲಿ ಮಾತ್ರವಲ್ಲ,ಮಾನವೀಯತೆಯಲ್ಲೂ ಶ್ರೀಮಂತೆ ; ಬಿಲಿಯನೇರ್ ಆದ್ರೂ ಈಕೆ ಬಗ್ಗೆ ತಿಳಿದಿರೋರು ಕಡಿಮೆ
ಶತಕೋಟಿ ಡಾಲರ್ ಒಡತಿಯಾದರೂ ಸರಳ ಜೀವನ ನಡೆಸಲು ಬಯಸೋ ಇವರು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದಾರೆ. ಇವರ ಮಾನವೀಯ ಕಾರ್ಯಗಳನ್ನು ಗುರುತಿಸಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಕೂಡ ಗೌರವಿಸಿದೆ.
Business Desk: ಭಾರತದ ಉದ್ಯಮ ಕ್ಷೇತ್ರದಲ್ಲಿ ಇಂದು ಅನೇಕ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಶತಕೋಟಿ ಡಾಲರ್ ಮೌಲ್ಯದ ಉದ್ಯಮವನ್ನು ಮುನ್ನಡೆಸುತ್ತಿರುವ ಹಲವು ಮಹಿಳೆಯರು ಕಾಣಸಿಗುತ್ತಾರೆ ಕೂಡ. ಅಂಥವರಲ್ಲಿ ಅನು ಅಗಾ ಕೂಡ ಒಬ್ಬರು. ಅವರು ಈ ಹಿಂದೆ ಇಂಧನ ಹಾಗೂ ಪರಿಸರ ಇಂಜಿನಿಯರಿಂಗ್ ಕಂಪನಿ ಥರ್ಮ್ಯಾಕ್ಸ್ ಅನ್ನು ಹಲವು ವರ್ಷಗಳ ಕಾಲ ಮುನ್ನಡೆಸಿದ್ದರು. ಆಗಾ ಜನಪ್ರಿಯ ಸಾಮಾಜಿಕ ಕಾರ್ಯಕರ್ತೆಯಾಗಿ ಕೂಡ ಗುರುತಿಸಿಕೊಂಡಿದ್ದಾರೆ. 2004ರಲ್ಲಿ ಕಂಪನಿಯ ಮುಖ್ಯಸ್ಥೆ ಹುದ್ದೆಯಿಂದ ಕೆಲಗಿಳಿದ ಅವರು ತಮ್ಮ ಮಗಳು ಮೆಹರ್ ಪುದುಮ್ಜೀಗೆ ಅಧಿಕಾರ ವಹಿಸಿಕೊಳ್ಳಲು ಅವಕಾಶ ಮಾಡಿಕೊಟ್ಟರು .81 ವರ್ಷದ ಮುಂಬೈ ಮೂಲದ ಅನು ಶ್ರೀಮಂತ ಮಹಿಳಾ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದಾರೆ. ಇವರ ನಿವ್ವಳ ಮೌಲ್ಯ 2.6 ಬಿಲಿಯನ್ ಡಾಲರ್.
ಪತಿಯೊಂದಿಗೆ ಥರ್ಮ್ಯಾಕ್ಸ್ ನಲ್ಲಿ ಕೆಲಸ
ಅನು ಅಗಾ 1980 ರ ದಶಕದಲ್ಲಿ ಥರ್ಮ್ಯಾಕ್ಸ್ ಎಂಬ ಎಂಜಿನಿಯರಿಂಗ್ ಕಂಪನಿಯಲ್ಲಿ ತನ್ನ ಪತಿಯೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಅವರು ಕಂಪನಿಯ ಪ್ರತಯೊಂದು ಕಾರ್ಯಚಟುವಟಿಕೆಯ ಬಗ್ಗೆ ಸಾಕಷ್ಟು ಮಾಹಿತಿ ಪಡೆದುಕೊಂಡರು. ಅಷ್ಟೇ ಅಲ್ಲ, ಕಂಪನಿಯ ಎಲ್ಲ ವಿಭಾಗಗಳ ಬಗ್ಗೆಯೂ ಅವರಿಗೆ ಮಾಹಿತಿ ಇತ್ತು. ಹೀಗಾಗಿ ಪತಿಯ ಮರಣದ ಬಳಿಕ 1996 ರಲ್ಲಿ ಅವರು ಕಂಪನಿ ಆಡಳಿತವನ್ನು ವಹಿಸಿಕೊಂಡರು.
ಭಾರತದ ಶ್ರೀಮಂತರಲ್ಲಿ ಒಬ್ಬರಾಗಿರುವ ಈ ಮಹಿಳೆಯ ಮಗಳು ಅಮ್ಮನನ್ನೇ ಮೀರಿಸ್ತಾಳೆ!
1996ರಿಂದ 2004ರ ತನಕ ಥರ್ಮ್ಯಾಕ್ಸ್ ಕಂಪನಿಯನ್ನು ಯಶಸ್ವಿಯಾಗಿ ಮುನ್ನಡೆಸಿದ ಅನು ಅಗಾ. ಕಂಪನಿಯನ್ನು ಹೊಸ ಎತ್ತರಕ್ಕೇರಿಸಿದರು. 2004ರಲ್ಲಿ ಥರ್ಮ್ಯಾಕ್ಸ್ ಕಂಪನಿ ಮುಖ್ಯಸ್ಥೆ ಹುದ್ದೆಯಿಂದ ಕೆಳಗಿಳಿದ ಅನು ಅಗಾ, ಆ ಸ್ಥಾನಕ್ಕೆ ಮಗಳು ಮೆಹರ್ ಪುದುಮ್ಜೀ ಅವರನ್ನು ನೇಮಕ ಮಾಡಿದರು. 2018ರಲ್ಲಿ ಅನು ಅಗಾ ನಾನ್ ಎಕ್ಸಿಕ್ಯುಟಿವ್ ನಿರ್ದೇಶಕರಾಗಿ ಕಂಪನಿ ಆಡಳಿತ ಮಂಡಳಿಯನ್ನು ಕೂಡ ತೊರೆದರು.
2023ರ ಡಿಸೆಂಬರ್ 4ಕ್ಕೆ ಅನ್ವಯಿಸುವಂತೆ ಅನು ಅಗಾ ಅವರ ಮಾರುಕಟ್ಟೆ ಬಂಡವಾಳ 30,408 ಕೋಟಿ ರೂ. ಇನ್ನು ಈ ಕಂಪನಿಯ ಷೇರಿನ ಬೆಲೆ ಎನ್ ಎಸ್ ಇಯಲ್ಲಿ 2,700ರೂ. ಇದೆ. ಕಂಪನಿಯಿಂದ ನಿವೃತ್ತಿಯಾದ ಬಳಿಕ ಅನು ಅಗಾ ಸಾಮಾಜಿಕ ಕಾರ್ಯರ್ತೆಯಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದರು. ಭಾರತ ಸರ್ಕಾರ ಕೂಡ ಅವರ ಸೇವೆಯನ್ನು ಗಮನಿಸಿ ಅವರಿಗೆ ಪದ್ಮಶ್ರೀ ಪುರಸ್ಕಾರವನ್ನು ನೀಡಿ ಗೌರವಿಸಿದೆ.
ಇನ್ನು 2023ರ ಡಿಸೆಂಬರ್ 4ಕ್ಕೆ ಸಿಕ್ಕ ಫೋರ್ಬ್ಸ್ ಅಂದಾಜಿನ ಮಾಹಿತಿ ಅನ್ವಯ ಅಗಾ ಅವರ ನಿವ್ವಳ ಸಂಪತ್ತು 20,000 ಕೋಟಿ ರೂ. ಇನ್ನು ಫೋರ್ಬ್ಸ್ ಭಾರತದ ಶ್ರೀಮಂತರ ಪಟ್ಟಿಯಲ್ಲಿ ದೇಶದ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀಮಂತ ಮಹಿಳೆ ಅನು ಅಗಾ ಎಂದು ಗುರುತಿಸಲಾಗಿದೆ. ಥರ್ಮ್ಯಾಕ್ಸ್ ನಲ್ಲಿರುವ ಅನು ಅಗಾ ಅವರ ಬಹುಪಾಲು ಷೇರುಗಳೇ ಅವರ ಸಂಪತ್ತಿನ ಮೂಲ. 81 ವರ್ಷದ ಅನು ಶ್ರೀಮಂತ ಮಹಿಳಾ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದಾರೆ.
ಮುಂಬೈನ ಅತೀ ದುಬಾರಿ ಬಂಗಲೆಯಿದು; ಬೆಲೆ ನಾವು, ನೀವ್ ಗೆಸ್ ಮಾಡಿರೋದಕ್ಕಿಂತ ಸಿಕ್ಕಾಪಟ್ಟೆ ಹೆಚ್ಚು!
ಮುಂಬೈ ಪ್ರತಿಷ್ಟಿತ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಬಿಎ ಎಕಾನಾಮಿಕ್ಸ್ ಪದವಿ ಪೂರ್ಣಗೊಳಿಸಿದ ಅನು ಅಗಾ ವೈದ್ಯಕೀಯ ಹಾಗೂ ಮನಶಾಸ್ತ್ರದ ಸಾಮಾಜಿಕ ಕಾರ್ಯದಲ್ಲಿ ಪ್ರತಿಷ್ಟಿತ ಟಾಟಾ ಇನ್ಸಿಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ ನಿಂದ (TISS)ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 1985ರಲ್ಲಿ ಥರ್ಮ್ಯಾಕ್ಸ್ ನಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದರು. ಆ ಬಳಿಕ ಅವರ ಪತಿಯೇ ಈ ಕಂಪನಿ ಮಾಲೀಕರಾದರು. 2012ರಲ್ಲಿ ಅನು ಅಗಾ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದರು ಕೂಡ. ಇನ್ನು ಇದೇ ವರ್ಷ ಅವರು ಭಾರತದ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು ಕೂಡ.