ಕೃಷಿಗಾಗಿ ಉತ್ತಮ ವೇತನದ ಬ್ಯಾಂಕ್ ಉದ್ಯೋಗ ತೊರೆದ ಪುಣೆ ಮೂಲದ ಸಹೋದರರಿಬ್ಬರು ಇಂದು ಸಾವಯವ ಸಂಸ್ಥೆಯೊಂದನ್ನು ಸ್ಥಾಪಿಸುವ ಮೂಲಕ ಯಶಸ್ಸು ಕಂಡಿದ್ದಾರೆ. ಸತ್ಯಜಿತ್ ಹಾಂಗೆ ಹಾಗೂ ಅಜಿಂಕ್ಯ ಹಾಂಗೆ ಎಂಬ ಇಬ್ಬರು ಸಹೋದರರು 'ಟೂ ಬ್ರದರ್ಸ್ ಆರ್ಗನಿಕ್ ಫಾರ್ಮ್ ' (ಟಿಬಿಒಎಫ್) ಹೆಸರಿನ ಸಂಸ್ಥೆ ಸ್ಥಾಪಿಸಿದ್ದು, ವಾರ್ಷಿಕ 12 ಕೋಟಿ ರೂ. ವಹಿವಾಟು ನಡೆಸುತ್ತಿದ್ದಾರೆ.
Business Desk: ಲಕ್ಷಾಂತರ ರೂಪಾಯಿ ವೇತನದ ಉದ್ಯೋಗ ತೊರೆದು ಸ್ವಂತ ಕಂಪನಿ ಸ್ಥಾಪಿಸಿ ಯಶಸ್ವಿಯಾದ ಉದ್ಯಮಿಗಳ ಅನೇಕ ಕಥೆಗಳನ್ನು ನಾವು ಕೇಳುತ್ತಲೇ ಇರುತ್ತೇವೆ. ಇನ್ನೂ ಕೆಲವರು ಐಎಎಸ್ ಅಥವಾ ಐಪಿಎಸ್ ಅಧಿಕಾರಿಯಾಗುವ ಕನಸು ಹೊತ್ತು ಉದ್ಯೋಗ ತೊರೆದು ಯುಪಿಎಸ್ ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಾರೆ. ಆದರೆ, ಕೊರೋನಾ ಮಹಾಮಾರಿ ಕಾಣಿಸಿಕೊಂಡ ಬಳಿಕ ಕೃಷಿಗಾಗಿ ಉದ್ಯೋಗ ತೊರೆದು ಅದರಲ್ಲಿ ತೊಡಗಿಕೊಂಡವರು ಕೆಲವರಿದ್ದಾರೆ. ಮಹಾರಾಷ್ಟ್ರದ ಪುಣೆ ಮೂಲದ ಇಬ್ಬರು ಸಹೋದರರು ಕೊರೋನಾ ಅವಧಿಗಿಂತಲೂ ಮುನ್ನವೇ ತಮ್ಮ ಉದ್ಯೋಗ ತೊರೆದು ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡು ಇಂದು ವಾರ್ಷಿಕ 12 ಕೋಟಿ ರೂ. ವಹಿವಾಟು ನಡೆಸುತ್ತಿದ್ದಾರೆ. ಸತ್ಯಜಿತ್ ಹಾಂಗೆ ಹಾಗೂ ಅಜಿಂಕ್ಯ ಹಾಂಗೆ ಎಂಬ ಇಬ್ಬರು ಸಹೋದರರು 'ಟೂ ಬ್ರದರ್ಸ್ ಆರ್ಗನಿಕ್ ಫಾರ್ಮ್ ' (ಟಿಬಿಒಎಫ್) ಹೆಸರಿನ ಸಂಸ್ಥೆ ಸ್ಥಾಪಿಸಿ, ಅದರಲ್ಲಿ ಯಶಸ್ಸು ಕಂಡಿದ್ದಾರೆ. ಅಷ್ಟೇ ಅಲ್ಲದೆ, ಕೃಷಿಯಲ್ಲಿ ತೊಡಗಿಕೊಳ್ಳುವ ಆಸಕ್ತಿ ಹೊಂದಿರುವ ಅನೇಕ ಯುವಜನರಿಗೆ ಇವರಿಬ್ಬರು ಸ್ಫೂರ್ತಿ ಕೂಡ. ಹಾಗಾದ್ರೆ ಇವರಿಬ್ಬರು ತಮ್ಮ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದು ಹೇಗೆ? ಅದರಲ್ಲಿ ಯಶಸ್ಸು ಕಾಣಲು ಇವರು ಅನುಸರಿಸಿದ ಸೂತ್ರಗಳೇನು? ಇಲ್ಲಿದೆ ಮಾಹಿತಿ.
ಪುಣೆ ಸಮೀಪದ ಭೋದನಿ ಎಂಬ ಹಳ್ಳಿಯಲ್ಲಿ 2014ರಲ್ಲಿ ಸತ್ಯಜಿತ್ ಹಾಂಗೆ ಹಾಗೂ ಅಜಿಂಕ್ಯ ಹಾಂಗೆ ಜೊತೆಗೂಡಿ ''ಟೂ ಬ್ರದರ್ಸ್ ಆರ್ಗನಿಕ್ ಫಾರ್ಮ್ ' ಎಂಬ ಸಾವಯವ ಕೃಷಿ ಫಾರ್ಮ್ ಸ್ಥಾಪಿಸಿದರು. ಈ ಇಬ್ಬರು ಸಹೋದರರು ತಮ್ಮ ಹಳ್ಳಿಗೆ ಮರಳಿ ಪೂರ್ಣ ಪ್ರಮಾಣದಲ್ಲಿ ಕೃಷಿಯಲ್ಲಿ ತೊಡಗಿಕೊಳ್ಳಲು ಬ್ಯಾಂಕ್ ಉದ್ಯೋಗವನ್ನು ತ್ಯಜಿಸಿದ್ದರು. ಇವರಿಬ್ಬರೂ ಇದಕ್ಕೂ ಮುನ್ನ ಬ್ಯಾಂಕಿಂಗ್ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಧಿಕ ವೇತನದ ಉದ್ಯೋಗದಲ್ಲಿದ್ದರು.
ಹೆಣ್ಣುಕೊಟ್ಟಅತ್ತೆ ಕೈಗೇ 800 ಕೋಟಿ ಮೌಲ್ಯದ ಕಂಪನಿ ನೀಡಿದ ಧೋನಿ; ಸಿಇಒ ಶೀಲಾ ಸಿಂಗ್ ಕುರಿತ ಮಾಹಿತಿ ಇಲ್ಲಿದೆ
ಕಿರಿಯ ಸಹೋದರ ಅಜಿಂಕ್ಯ ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿ ಪಡೆದಿದ್ದು, ಪುಣೆಯ ಇಂದಿರ ಕಾಲೇಜಿನಿಂದ ಎಂಬಿಎ ಪದವಿ ಕೂಡ ಪಡೆದಿದ್ದಾರೆ. 39 ವರ್ಷ ವಯಸ್ಸಿನ ಇವರು, ಬ್ಯಾಂಕಿಂಗ್ ವಲಯದಲ್ಲಿ ಸುಮಾರು 4 ವರ್ಷಗಳ ಕಾ ಕಾರ್ಯನಿರ್ವಹಿಸಿದ್ದರು. ಎಚ್ ಡಿ ಎಫ್ ಸಿ ಹಾಗೂ ಎಚ್ ಎಸ್ ಬಿಸಿ ಮುಂತಾದ ಕಂಪನಿಗಳಲ್ಲಿ ಸುಮಾರು ನಾಲ್ಕು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ಇನ್ನು ಹಿರಿಯ ಸಹೋದರ 42 ವರ್ಷ ವಯಸ್ಸಿನ ಸತ್ಯಜಿತ್, ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದು, ಎಂಬಿಎ ಪದವಿ ಕೂಡ ಪೂರ್ಣಗೊಳಿಸಿದ್ದಾರೆ. ಇವರು ಕೂಡ ಬ್ಯಾಂಕಿಂಗ್ ವಲಯದಲ್ಲಿ ದಶಕಗಳ ಕಾಲ ಕಾರ್ಯನಿರ್ವಹಿಸಿದ್ದರು. ಕೋಟಕ್ ಲೈಫ್ ಇನ್ಯುರೆನ್ಸ್, ಸಿಟಿ ಕಾರ್ಪ್ ಫೈನಾನ್ಸ್ ಹಾಗೂ ಡಿಬಿಎಸ್ ಮುಂತಾದ ಕಂಪನಿಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಇವರಿಗಿದೆ. ಈ ಇಬ್ಬರು ಸಹೋದರರು ಈಗ ಜೊತೆಯಾಗಿ ತಮ್ಮ ಫಾರ್ಮ್ ಕಾರ್ಯನಿರ್ವಹಣೆಯ ಮೇಲ್ವಿಚಾರಣೆ ನಡೆಸುತ್ತಾರೆ.
ಬುದ್ಧಿವಂತ ವಿದ್ಯಾರ್ಥಿಯಲ್ಲ,ಆದರೂ ಐಐಟಿಯಲ್ಲಿ ಓದು,ಈಗ ದಿನದ ಗಳಿಕೆ ಒಂದು ಕೋಟಿ;ಇದು ಝೊಮ್ಯಾಟೋ ಸಿಇಒ ಯಶೋಗಾಥೆ!
'ಟೂ ಬ್ರದರ್ಸ್ ಆರ್ಗನಿಕ್ ಫಾರ್ಮ್ ' ಅಥವಾ TBOF ನೈಸರ್ಗಿಕ ವಿಧಾನದ ಮೂಲಕ ಭಾರತೀಯ ಸಾಂಪ್ರದಾಯಿಕ ಆಹಾರ ತಿನಿಸುಗಳನ್ನು ಯಾವುದೇ ಯಂತ್ರಗಳ ಬಳಕೆ ಇಲ್ಲದೆ ಅಥವಾ ಯಂತ್ರಗಳ ಅತೀ ಕಡಿಮೆ ಬಳಕೆ ಮೂಲಕ ಸಿದ್ಧಪಡಿಸುತ್ತದೆ. ಈ ಸಂಸ್ಥೆಯ ಉತ್ಪನ್ನಗಳನ್ನು ಆನ್ ಲೈನ್ ನಲ್ಲಿ ಖರೀದಿಸಬಹುದು. ಈ ಸಂಸ್ಥೆಯ ವೆಬ್ ಸೈಟ್ ಹಾಗೂ ಅಮೆಜಾನ್ ನಲ್ಲಿ ಉತ್ಪನ್ನಗಳು ಲಭ್ಯವಿವೆ. ಪ್ರಸ್ತುತ ಟಿಬಿಒಎಫ್ ಲಾಡುಗಳು, ತುಪ್ಪ, ಪೀನಟ್ ಬಟರ್, ಗ್ರೌಂಡ್ ನಟ್ ಆಯಿಲ್ ಹಾಗೂ ಸಾಂಪ್ರದಾಯಿಕ ಗೋಧಿ ಪುಡಿ ಸೇರಿದಂತೆ ಅನೇಕ ವಿಧದ ಸಾವಯವ ವಸ್ತುಗಳನ್ನು ಮಾರಾಟ ಮಾಡುತ್ತದೆ. ಕೃಷಿಯಲ್ಲಿ ಕೂಡ ವಿಭಿನ್ನ ಆಲೋಚನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಯಶಸ್ಸು ಸಾಧಿಸಬಹುದು ಎಂಬುದಕ್ಕೆ ಈ ಇಬ್ಬರು ಸಹೋದರರು ಉತ್ತಮ ನಿದರ್ಶನ.
Last Updated Jun 15, 2023, 5:08 PM IST