Asianet Suvarna News Asianet Suvarna News

ಬಾಂಬೆ ಐಐಟಿಯಲ್ಲಿ ಓದಿದ ಇವರು ಭಾರತದ ಪ್ರತಿಷ್ಟಿತ ಐಟಿ ಕಂಪನಿ ಸಿಇಒ; ಇವರ ಒಂದು ದಿನದ ವೇತನವೇ 21ಲಕ್ಷ ರೂ.!

ಐಐಟಿಯಲ್ಲಿ ಓದಿದವರು ಅನೇಕ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಆಯಕಟ್ಟಿನ ಹುದ್ದೆ ಹೊಂದಿರುವ ಜೊತೆಗೆ ಉತ್ತಮ ವೇತನ ಕೂಡ ಗಳಿಸುತ್ತಿದ್ದಾರೆ. ಪ್ರಸ್ತುತ ಭಾರತದ ಪ್ರತಿಷ್ಟಿತ ಐಟಿ ಕಂಪನಿಯ ಸಿಇಒ ಆಗಿರೋರು ಕೂಡ ಬಾಂಬೆ ಐಐಟಿ ಹಳೆಯ ವಿದ್ಯಾರ್ಥಿಯಾಗಿದ್ದು, ದಿನಕ್ಕೆ 21 ಲಕ್ಷ ರೂ. ವೇತನ ಪಡೆಯುತ್ತಿದ್ದಾರೆ. 
 

Meet Salil Parekh IIT Bombay alumnus whose package is Rs 21 lakh per day anu
Author
First Published Nov 4, 2023, 12:31 PM IST

Business Desk: ಸಲೀಲ್ ಪರೇಖ್ ಹೆಸರು  ಐಟಿ ವಲಯದಲ್ಲಿ ಚಿರಪರಿಚಿತ. ಜಗತ್ತಿನ ಅತ್ಯಂತ ಜನಪ್ರಿಯ ಐಟಿ ಕಂಪನಿಗಳ ಸಿಇಒಗಳಲ್ಲಿ ಸಲೀಲ್ ಪರೇಖ್ ಕೂಡ ಒಬ್ಬರು. ಭಾರತದ ನಾಲ್ಕು ಟತೀದೊಡ್ಡ ಐಟಿ ಕಂಪನಿಗಳಲ್ಲಿ ಒಂದಾಗಿರುವ ಇನ್ಫೋಸಿಸ್ ಸಿಇಒ ಹಾಗೂ ಎಂಡಿ ಆಗಿರುವ ಪರೇಖ್, ಈ ಕ್ಷೇತ್ರದಲ್ಲಿ ಮೂರು ದಶಕಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಇನ್ನು ಭಾರತದ ಐಟಿ ವಲಯದಲ್ಲಿ ಅತೀಹೆಚ್ಚು ವೇತನ ಪಡೆಯುವ ಟಾಪ್ 5 ಸಿಇಒಗಳಲ್ಲಿ ಪರೇಖ್ ಕೂಡ ಒಬ್ಬರು. ಪ್ರಸ್ತುತ ಪರೇಖ್ ಭಾರತೀಯ ಕೈಗಾರಿಕೆ ಒಕ್ಕೂಟದ ರಾಷ್ಟ್ರೀಯ ಮಂಡಳಿ ಸದಸ್ಯರು ಕೂಡ ಹೌದು. ಭಾರತೀಯ ಹಾಗೂ ಜಾಗತಿಕ ಐಟಿ ಕಂಪನಿಗಳಲ್ಲಿ ಕಾರ್ಯನಿರ್ವಹಿಸಿ ಸಾಕಷ್ಟು ಅನುಭವ ಗಳಿಸಿರುವ ಪರೇಖ್, ಕಂಪನಿಯನ್ನು ಸೂಕ್ತ ದಿಕ್ಕಿನಲ್ಲಿ ಮುನ್ನಡೆಸುವಲ್ಲಿ ಸಮರ್ಥರಾಗಿದ್ದಾರೆ. ಇನ್ನು ಜಾಗತಿಕ ಕಾರ್ಪೋರೇಟ್ ವಲಯದಲ್ಲಿ ಪರೇಖ್ ಅನೇಕ ಆಯಕಟ್ಟಿನ ಹುದ್ದೆಗಳನ್ನು ನಿರ್ವಹಿಸಿದ್ದಾರೆ ಕೂಡ. ಕ್ಯಾಪ್ ಜೆಮಿನಿ ಮಂಡಳಿಯಲ್ಲಿದ್ದ ಪರೇಖ್ ಅಲ್ಲಿ ಅನೇಕ ಹುದ್ದೆಗಳನ್ನು ನಿಭಾಯಿಸಿದ್ದಾರೆ ಕೂಡ. 

ಕ್ಯಾಪ್ ಜೆಮಿನಿಯಲ್ಲಿ ಸ್ಪೇರ್ ಹೆಡೆಡ್ ಅಪ್ಲಿಕೇನ್ ಸರ್ವೀಸಸ್, ಕ್ಲೌಡ್ ಇನ್ಫ್ರಾಸ್ಟ್ರಚರ್ ಸರ್ವೀಸಸ್ ಹಾಗೂ ಟೆಕ್ ವಿಭಾಗದ ನಿರ್ವಹಣೆಯನ್ನು ಪರೇಖ್ ಸಮರ್ಥವಾಗಿ ನಿಭಾಯಿಸಿದ್ದಾರೆ. ಅರ್ನಸ್ಟ್ಆಂಡ್ ಯಂಗ್ ಸಂಸ್ಥೆಯಲ್ಲಿ ಪಾರ್ಟನರ್ ಆಗಿದ್ದರು ಕೂಡ. ಭಾರತದಲ್ಲಿ ಈ ಕಂಪನಿ ಬೆಳವಣಿಗೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಬಾಂಬೆ ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇವರು ಏರೋನಾಟಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಆ ಬಳಿಕ ನ್ಯೂಯಾರ್ಕ್‌ನಲ್ಲಿರುವ ಕಾರ್ನೆಲ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ ಹಾಗೂ ಮೆಕಾನಿಕಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಉದ್ಯೋಗಿಗೆ ಬರೋಬ್ಬರಿ 4.3 ಕೋಟಿ ರೂ. ಸಂಬಳ ನೀಡುತ್ತೆ ಭಾರತದ ಈ ದಿಗ್ಗಜ ಐಟಿ ಕಂಪೆನಿ!

2022ರಲ್ಲಿ ಇನ್ಫೋಸಿಸ್  (Infosys) ಸಿಇಒ (CEO) ಆಗಿ ಮರುನೇಮಕಗೊಂಡ ಸಲೀಲ್‌ ಪಾರೇಖ್‌ (Salil Parekh) ಅವರ ವೇತನದಲ್ಲಿ (Salary) ಶೇ.88ರಷ್ಟು ಏರಿಕೆ ಮಾಡಲಾಗಿತ್ತು. ಈ ಹೆಚ್ಚಳದಿಂದ ಪಾರೇಖ್ ಅವರ ವಾರ್ಷಿಕ ಪ್ಯಾಕೇಜ್  79.75 ಕೋಟಿ ರೂಪಾಯಿ ಮುಟ್ಟಿತ್ತು.  ಅಂದರೆ ದಿನಕ್ಕೆ ಅವರ ವೇತನ 21ಲಕ್ಷ ರೂ. ಆ ಸಮಯದಲ್ಲಿ ಅವರು ಭಾರತದ ಅತೀಹೆಚ್ಚು ವೇತನ ಪಡೆಯುವ ಸಿಇಒ ಎಂದು ಗುರುತಿಸಿಕೊಂಡಿದ್ದರು.  2021ರಲ್ಲಿ ಸಲೀಲ್ ಪರೇಖ್ ವಾರ್ಷಿಕ ವೇತನ ಬರೋಬ್ಬರಿ 49.68 ಕೋಟಿ ರೂಪಾಯಿ. 2020ರಲ್ಲಿ ಪರೇಖ್ 12 ತಿಂಗಳ ವೇತನ  34.27 ಕೋಟಿ ರೂಪಾಯಿ ಆಗಿತ್ತು. 2021ರ ಸಾಲಿನಲ್ಲಿ ಶೇಕಡಾ 45 ರಷ್ಚು ವೇತನ ಹೆಚ್ಚಿಸಲಾಗಿತ್ತು. ಸಲೀಲ್ ಪರೇಖ್ ಜನವರಿ 2018 ರಿಂದ ಇನ್ಫೋಸಿಸ್‌ನ (Infosys) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. 

2022-23ರ ಆರ್ಥಿಕ ವರ್ಷದಲ್ಲಿ ಇವರ ವೇತನದ ಪ್ಯಾಕೇಜ್‌ ಶೇ.21ರಷ್ಟು ಕಡಿಮೆಯಾದರೂ, ಕಳೆದ ಆರ್ಥಿಕ ವರ್ಷದಲ್ಲಿ ಅವರು 56.4 ಕೋಟಿ ರೂ. ಸಂಬಳ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರರ್ಥ ಈ ಐಐಟಿ ಪದವೀಧರ ದಿನಕ್ಕೆ 15.4 ಲಕ್ಷ ರೂ. ವೇತನ ಪಡೆಯುತ್ತಿದ್ದಾರೆ.

ವಾರಕ್ಕೆ 70 ಗಂಟೆ ಕೆಲಸ ಮಾಡಲು ಸೂಚಿಸಿದ ನಾರಾಯಣ ಮೂರ್ತಿ; ಮಗ ಇನ್ಫೋಸಿಸ್ ಬಿಟ್ಟು ಹೋಗಿದ್ಯಾಕೆ?

ಇನ್ನು 2019ರಲ್ಲಿ ಸಲೀಲ್ ಪರೇಖ್ ವಿರುದ್ಧ ಇನ್ಫೋಸಿಸ್ ಉದ್ಯೋಗಿಗಳು ಆರೋಪ ಮಾಡಿದ್ದರು. ಲಾಭದ ಸಂಖ್ಯೆ ಮತ್ತು ಪ್ರಮಾಣ ಹೆಚ್ಚಳವಾಗಿದೆ ಎಂದು ತೋರಿಸಲು ವಾಮಮಾರ್ಗ ಬಳಿಸಲಾಗಿದೆ ಎಂದು ಅಮೆರಿಕದ ಷೇರುಪೇಟೆ ಸೆಕ್ಯುರಿಟೀಸ್‌ಗೆ ನೀಡಿರುವ ದೂರಿನಲ್ಲಿ  ತಿಳಿಸಿದ್ದರು. ಇದರಿಂದ ಇನ್ಫೋಸಿಸ್ ಷೇರುಗಳ ಬೆಲೆಯಲ್ಲಿ ಕೂಡ ಕುಸಿತವಾಗಿತ್ತು. ಅಲ್ಲದೆ, ಸಂಸ್ಥೆಯ ಆಂತರಿಕ ಸಭೆಗಳಲ್ಲಿ ಸಲೀಲ್ ಪಾರೇಖ್ ದಕ್ಷಿಣ ಭಾರತದ ಅಧಿಕಾರಿಗಳನ್ನು ಮದ್ರಾಸಿ ಎಂದು ಸಂಬೋಧಿಸಿ ಕಿಚಾಯಿಸುತ್ತಿದ್ದರು ಎಂದು ಆರೋಪಿಸಲಾಗಿತ್ತು.

Follow Us:
Download App:
  • android
  • ios