ಒಳ ಉಡುಪು ಉದ್ಯಮದ ಒಡತಿ: ಛೀ ಥೂ ಎನ್ನಿಸಿಕೊಂಡಾಕೆ 1300 ಕೋಟಿಯ ಸಾಮ್ರಾಜ್ಯ ಕಟ್ಟಿದ್ದೇ ರೋಚಕ
ಒಳ ಉಡುಪು ಉದ್ಯಮ ಆರಂಭಿಸಿದಾಗ ಮನೆಯವರಿಂದಲೇ ತಿರಸ್ಕರಿಸಲ್ಪಟ್ಟಿದ್ದ ಯುವತಿ ಈಗ 1,300 ಕೋಟಿ ಸಾಮ್ರಾಜ್ಯದ ಒಡತಿ. ಈಕೆ ಕಥೆ ಕೇಳಿ...
ಸಾಧಿಸುವ ಮನಸ್ಸಿಗೆ, ಮನಸ್ಸಿನಲ್ಲಿ ಗುರಿಯಿದ್ದರೆ ಏನು ಬೇಕಾದರೂ ಸಾಧಿಸಬಹುದು. ಯಾರು ಏನೇ ಹೇಳಿದರೂ, ಯಾರೇ ಅಡ್ಡಗಾಲು ಹಾಕಿದರೂ ಹಿಡಿದ ಕೆಲಸ ಸಾಧನೆ ಮಾಡಿಯೇ ತೀರುತ್ತೇನೆ ಎನ್ನುವ ಛಲವಿದ್ದರೆ ಅವರನ್ನು ಯಾರೂ ಸೋಲಿಸಲಾರರು ಎನ್ನುವುದಕ್ಕೆ ಸಾಕ್ಷಿಯಾಗಿ ನಿಂತಿದ್ದಾರೆ ರಿಚಾ ಕರ್. ಮಗಳು ಒಳ ಉಡುಪು ಮಾರಾಟ ಮಾಡುತ್ತಿದ್ದಾಳೆ, ಇದರ ಬಿಜಿನೆಸ್ ಶುರು ಮಾಡಿದ್ದಾಳೆ ಎಂದಾಗ ಮನೆಯವರೇ ಛೇ ಬೇಡ, ಜನರಿಗೆ ಏನು ಹೇಳುವುದು, ಮಗಳು ಇದನ್ನು ಮಾರುತ್ತಾ ಇದ್ದಾಳೆ ಎನ್ನೋದಾ? ಇದೆಲ್ಲಾ ಬಿಟ್ಟುಬಿಡು, ನಮಗೆ ನಾಚಿಕೆ ಆಗತ್ತೆ ಎಂದೆಲ್ಲಾ ಹೇಳಿದರು. ಮನೆಯವರು, ಕುಟುಂಬಸ್ಥರು, ಸ್ನೇಹಿತರು ಎಲ್ಲರಿಂದಲೂ ಇದೇ ಮಾತನ್ನು ಕೇಳಿದರು ರಿಚಾ. ಆದರೆ, ಆಕೆಯ ಗುರಿ ಸ್ಪಷ್ಟವಾಗಿತ್ತು. ಸೇಲ್ಸ್‌ಮೆನ್ ಪುರುಷರಾಗಿದ್ದರೆ ಮಹಿಳೆಯರು ಅಂಗಡಿಯನ್ನು ಸಂಪರ್ಕಿಸಲು ಹಿಂಜರಿಯುತ್ತಾರೆ ಎಂಬುದನ್ನು ಗುರುತಿಸಿದ್ದ ರಿಚಾ, ತಾವೇ ಆ ಉದ್ಯಮ ಆರಂಭಿಸುವ ಪಣ ತೊಟ್ಟು ಇಂದು 1,300 ಕೋಟಿ ಉದ್ಯಮದ ಒಡತಿಯಾಗಿದ್ದಾರೆ!
ಆರಂಭದಲ್ಲಿ ಅಪ್ಪ-ಅಮ್ಮ ಮಗಳ ಈ ಕ್ರಮಕ್ಕೆ ವಿರೋಧಿಸಿದ್ದರೂ ಕೊನೆಗೆ ಮಗಳ ಸಮರ್ಪಣಾ ಮನೋಭಾವಕ್ಕೆ ತಲೆಬಾಗಿದ್ದಾರೆ. ತಮ್ಮ ಮಗಳು ಒಳಉಡುಪುಗಳ ವ್ಯಾಪಾರವನ್ನು ಪ್ರಾರಂಭಿಸಿದ್ದಾಳೆ ಎಂದು ಸ್ನೇಹಿತರು ಮತ್ತು ಸಂಬಂಧಿಕರಿಗೆ ಹೇಗೆ ಹೇಳುವುದು ಎಂದು ಚಿಂತಿತರಾಗಿದ್ದ ರಿಚಾ ಅವರ ಅಮ್ಮ, ಈಗ ಹೆಮ್ಮೆಯಿಂದ ಮಗಳ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ. ಉತ್ತಮ ಉದ್ಯೋಗದಲ್ಲಿ ಇದ್ದರೂ ರಿಚಾ ತಮ್ಮ ಗುರಿ ಸಾಧನೆಗೆ ಆ ಉದ್ಯೋಗ ಬಿಟ್ಟು ಇದನ್ನೇ ಅಪ್ಪಿಕೊಂಡರು. ಕೆಲವರು ಛೀ ಥೂ ಎಂದರು. ಅದರೆ ರಿಚಾ ಯಾವುದಕ್ಕೂ ಕೇರೇ ಮಾಡಲಿಲ್ಲ. ಅದನ್ನೇ ಪ್ಯಾಶನ್ ಆಗಿ ತೆಗೆದುಕೊಂಡರು.
ಹೊಸ ವರ್ಷಕ್ಕೆ ಹೊಸ ಹುಡುಗನ ಜೊತೆ ಫಾರಿನ್ನಲ್ಲಿ ನಿವೇದಿತಾ ಗೌಡ: ಮತಾಂತರಗೊಂಡ್ರಾ ಕೇಳ್ತಿರೋ ಫ್ಯಾನ್ಸ್!
ಕುತೂಹಲದ ವಿಷಯ ಏನೆಂದರೆ, ರಿಚಾ ಅವರ ಈ ಉದ್ಯಮವನ್ನು ಮುಖೇಶ್ ಅಂಬಾನಿಯವರ ರಿಲಯನ್ಸ್ ರಿಟೇಲ್ ಖರೀದಿ ಮಾಡಿತು. ಜನರು ಸಾಮಾನ್ಯವಾಗಿ ಒಳಉಡುಪು ವ್ಯಾಪಾರ ಮಾಡಲು ಹಿಂಜರಿಯುತ್ತಾರೆ, ಇದರಿಂದ ಗಮನಾರ್ಹ ಲಾಭವನ್ನು ಗಳಿಸುವ ಅವಕಾಶವನ್ನು ಕಳೆದುಕೊಳ್ಳುತ್ತಾರೆ ಎಂದು ರಿಚಾ ಹೇಳುತ್ತಾರೆ. ಇದನ್ನೇ ತಾವು ಪರಿಗಣಿಸಿ ಈ ಸವಾಲನ್ನು ಸ್ವೀಕರಿಸಿ Zivame ಎಂಬ ಆನ್‌ಲೈನ್ ಬ್ರ್ಯಾಂಡ್ ಅನ್ನು ಪ್ರಾರಂಭಿಸಿದರು. ಇದರಿಂದ ರಿಚಾ ತಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಂದ ಸಾಕಷ್ಟು ವಿರೋಧವನ್ನು ಎದುರಿಸಿದ್ದರು. ಆಕೆಯ ಹತ್ತಿರದ ಸಂಬಂಧಿಗಳು ಅಪಹಾಸ್ಯಕ್ಕೊಳಗಾದರು. ಆದರೆ, ಅಚಲವಾದ ರಿಚಾ ಉದ್ಯಮವನ್ನು ಸ್ಥಾಪಿಸಲು ನಿರ್ಧರಿಸಿದರು ಮತ್ತು ಅಂತಿಮವಾಗಿ ಸಾಧಿಸಿ ತೋರಿಸಿದ್ದಾರೆ.
ಆರಂಭದಲ್ಲಿ, ರಿಚಾ ಅವರ ವ್ಯವಹಾರವು ಉತ್ತಮ ಪ್ರತಿಕ್ರಿಯೆಯನ್ನು ಪಡೆಯಲಿಲ್ಲ, ಆದರೆ ಸ್ವಲ್ಪ ಸಮಯದ ನಂತರ, ಇದು ಮಹಿಳೆಯರ ಬೆಂಬಲವನ್ನು ಪಡೆಯಿತು. ರಿಲಯನ್ಸ್ ರಿಟೇಲ್ 2020 ರಲ್ಲಿ ಬ್ರ್ಯಾಂಡ್ ಅನ್ನು ಸ್ವಾಧೀನಪಡಿಸಿಕೊಂಡಿದೆ. ಇಂದು, ಈ ಬ್ರ್ಯಾಂಡ್ 5 ಸಾವಿರಕ್ಕೂ ಹೆಚ್ಚು ಒಳ ಉಡುಪು ಶೈಲಿಗಳನ್ನು ಹೊಂದಿದೆ, 50 ಕ್ಕೂ ಹೆಚ್ಚು ಬ್ರ್ಯಾಂಡ್‌ಗಳನ್ನು ಹೊಂದಿದೆ ಮತ್ತು 100 ಕ್ಕೂ ಹೆಚ್ಚು ಗಾತ್ರಗಳಲ್ಲಿ ಲಭ್ಯವಿದೆ. ರಿಚಾ ಅವರ ಸಾಧನೆಗಳಿಗಾಗಿ 2014 ರಲ್ಲಿ '40 ವರ್ಷದೊಳಗಿನ ಸಾಧಕರ ಪಟ್ಟಿ'ಯಲ್ಲಿ ಗುರುತಿಸಲಾಗಿತ್ತು.
ಅಮ್ಮನ 11ನೇ ದಿನ ಕಾರ್ಯದ ಸಮಯದಲ್ಲಿ ನಡೆದ ಪವಾಡದ ಬಗ್ಗೆ ನಟ ಸುದೀಪ್ ಹೇಳಿದ್ದೇನು?