Asianet Suvarna News Asianet Suvarna News

ಅಮೆರಿಕದ ಉದ್ಯೋಗ ತ್ಯಜಿಸಿ ತಂದೆ ಉದ್ಯಮ ಮುನ್ನಡೆಸಿದ ಮಗ ಈಗ 1,25,000 ಕೋಟಿ ರೂ. ಮೌಲ್ಯದ ಕಂಪನಿ ಮಾಲೀಕ

ಪೆವಿಕಲ್, ಪೆವಿಕ್ವಿಕ್ ಎಲ್ಲರಿಗೂ ಚಿರಪರಿತ. ಆದರೆ, ಇದನ್ನು ಉತ್ಪಾದಿಸುವ ಪಿಡಿಲೈಟ್ ಇಂಡಸ್ಟ್ರೀಸ್ ಮುಖ್ಯಸ್ಥ ಮಧುಕರ್ ಪರೇಖ್ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. 1,25,000 ಕೋಟಿ ರೂ. ಮಾರುಕಟ್ಟೆ ಬಂಡವಾಳ ಹೊಂದಿರುವ ಪಿಡಿಲೈಟ್ ಮುಖ್ಯಸ್ಥ ಮಧುಕರ್ ಪರೇಖ್ ಅವರ ಸಂಪತ್ತು  24,150 ಕೋಟಿ ರೂ. 

Meet man with Rs 24150 crore net worth left job in US to lead Rs 125000 crore company in India anu
Author
First Published Nov 10, 2023, 2:21 PM IST

Business Desk: ಸ್ವಂತ ಉದ್ಯಮ ಮಾಡಬೇಕೆಂಬ ಕನಸು ಹೊತ್ತವರಿಗೆ ಇನ್ನೊಬ್ಬರ ಕೈ ಕೆಳಗೆ ಕೆಲಸ ಮಾಡೋದು ಕಷ್ಟದ ಕೆಲಸವೇ ಸರಿ. ಇದೇ ಕಾರಣಕ್ಕೆ ಅದೆಷ್ಟೋ ಮಂದಿ ಪ್ರತಿಭಾವಂತರು ಉತ್ತಮ ವೇತನದ ಉನ್ನತ ಹುದ್ದೆಯನ್ನು ಬಿಟ್ಟು ಉದ್ಯಮಕ್ಕೆ ಕೈ ಹಾಕುತ್ತಾರೆ. ಅಮೆರಿಕದಲ್ಲಿನ ಉನ್ನತ ಹುದ್ದೆಯನ್ನು ಕೂಡ ಉದ್ಯಮಕ್ಕಾಗಿ ತ್ಯಜಿಸಿ ಬಂದವರು ಅನೇಕರಿದ್ದಾರೆ. ಅಂಥವರಲ್ಲಿ ಮಧುಕರ್ ಬಿ ಪರೇಖ್ ಕೂಡ ಒಬ್ಬರು. ಪ್ರಸ್ತುತ ಪಿಡಿಲೈಟ್ ಇಂಡಸ್ಟ್ರೀಸ್ ಮುಖ್ಯಸ್ಥರಾಗಿರುವ ಮಧುಕರ್ ಪರೇಖ್ 1972ರಲ್ಲಿ ಈ ಸಂಸ್ಥೆಗೆ ಸೇರ್ಪಡೆಗೊಂಡಿದ್ದರು. ಇದಕ್ಕೂ ಮುನ್ನ ಅಮೆರಿಕದ ಅಬ್ಬೊಟ್ ಲ್ಯಾಬೊರೇಟರೀಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಪಿಡಿಲೈಟ್ ಇಂಡಸ್ಟ್ರೀಸ್ ಅನ್ನು ಮಧುಕರ್ ಪರೇಖ್ ಅವರ ತಂದೆ ಬಲ್ವಂತ್ ಪರೇಖ್ 1959ರಲ್ಲಿ ಸ್ಥಾಪಿಸಿದ್ದರು. ಪೆವಿಕೋಲ್ ಇದೇ ಸಂಸ್ಥೆ ಉತ್ಪನ್ನವಾಗಿದೆ. ಪಿಡಿಲೈಟ್ ಇಂಡಸ್ಟ್ರೀಸ್ 1,25,000 ಕೋಟಿ ರೂ. ಮಾರುಕಟ್ಟೆ ಬಂಡವಾಳ ಹೊಂದಿದೆ. 

ಮಧುಕರ್ ಪರೇಖ್  ಅಮೆರಿಕದ ವಿಸ್ಕನ್ ಸಿನ್ ಯುನಿವರ್ಸಿಟಿಯಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದರು. ಆ ಬಳಿಕ ಅಲ್ಲಿ ಕೆಲವು ಸಮಯ ಅಬ್ಬೊಟ್ ಲ್ಯಾಬೊರೇಟರೀಸ್ ನಲ್ಲಿ ಕಾರ್ಯನಿರ್ವಹಿಸಿದರು. ಇದಾದ ಬಳಿಕ ಭಾರತಕ್ಕೆ ಹಿಂತಿರುಗಿದ ಅವರು ಪಿಡಿಲೈಟ್ ಸಂಸ್ಥೆಗೆ ಸೇರ್ಪಡೆಗೊಂಡರು. ಮಧುಕರ್ ಪರೇಖ್ ಅವರ ಪೂಣ ಹೆಸರು ಮಧುಕರ್ ಬಲ್ವಂತ್ರೆ ಪರೇಖ್ . ಫೋರ್ಬ್ಸ್ ಮಾಹಿತಿ ಪ್ರಕಾರ ಪರೇಖ್ ಅವರ ನಿವ್ವಳ ಸಂಪತ್ತು 24,150 ಕೋಟಿ ರೂ. ಪರೇಖ್ ಚಿನ್ನದ ಪದಕ ವಿಜೇತರಾಗಿದ್ದು, ಇನ್ಸಿಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ (ಐಸಿಟಿ) ಹಳೆಯ ವಿದ್ಯಾರ್ಥಿ. ಇದು ಭಾರತದ ಅತ್ಯಂತ ಪ್ರಮುಖ ಕೆಮಿಕಲ್ ಟೆಕ್ನಾಲಜಿ ರಿಸರ್ಚ್ ಇನ್ಸಿಟಿಟ್ಯೂಟ್ .

ಅಮೆರಿಕದಲ್ಲಿಓದಿ ಬಂದ ಮಗ ಅಪ್ಪನ ಉದ್ಯಮಕ್ಕೆ ಹೊಸ ದಿಕ್ಕು ತೋರಿದ; ಈತನ ಕಂಪನಿ ಮೌಲ್ಯ ಈಗ 26,473 ಕೋಟಿ ರೂ.

ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಮಧುಕರ್ ಪರೇಖ್, ಐಐಟಿ ಪ್ರವೇಶ ಪರೀಕ್ಷೆಯಲ್ಲಿ 4ನೇ ಸ್ಥಾನ ಗಳಿಸಿದ್ದರು. ಆದರೆ, ಅವರು ಮುಂಬೈ ವಿಶ್ವವಿದ್ಯಾಲಯದಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಮಾಡುವ ನಿರ್ಧಾರ ಕೈಗೊಂಡರು. ಇದು ಮುಂದೆ ತಂದೆಯ ಉದ್ಯಮವನ್ನು ಇನ್ನಷ್ಟು ವಿಸ್ತರಿಸಲು ಅವರಿಗೆ ನೆರವಾಯಿತು ಕೂಡ.

ಮಧುಕರ್ 40 ವರ್ಷಗಳ ಅನುಭವ ಹೊಂದಿದ್ದು, ಅವರ ಮಾರ್ಗದರ್ಶನದಲ್ಲಿ ಪಿಡಿಲೈಟ್ ಅನೇಕ ಕಂಪನಿಗಳನ್ನು ಸ್ವಾಧೀನಪಡಿಸಿಕೊಂಡು ಅಂತಾರಾಷ್ಟ್ರೀಯ ಮಾರುಕಟ್ಟೆ ಪ್ರವೇಶಿಸಿದೆ. ಹಾಗೆಯೇ ಅದರ ಉತ್ಪನ್ನದ ಪೋರ್ಟ್ ಫೋಲಿಯೋ ಹಾಗೂ ಮಾರುಕಟ್ಟೆಯಲ್ಲಿನ ಸ್ಥಾನವನ್ನು ಭದ್ರಪಡಿಸಿದೆ.

ಪಿಡಿಲೈಟ್ಸ್ ಕಂಪನಿಯ ಪ್ರಮುಖ ಬ್ರ್ಯಾಂಡ್ ಗಳೆಂದರೆ ಅದು ಫೆವಿಕಲ್, ಫೆವಿಕ್ವಿಕ್, ಡಾ.ಫಿಕ್ಸಿಟ್ ಹಾಗೂ ಎಂ-ಸೀಲ್.  ಅಂಟು ಮಾರುಕಟ್ಟೆಯಲ್ಲಿ ಪಿಡಿಲೈಟ್ ಮಾರುಕಟ್ಟೆ ನಾಯಕನಾಗಿ ಮೆರೆಯಲು ಮಧುಕರ್ ಅವರೇ ಕಾರಣ ಎಂದು ಹೇಳಬಹುದು. ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ಕೈಗೊಳ್ಳುವ ಜೊತೆಗೆ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಕೊಂಡೊಯ್ಯುವ ಮೂಲಕ ಅವರು ಪಿಡಿಲೈಟ್ ಯಶಸ್ಸಿನಲ್ಲಿ ಗಮನಾರ್ಹ ಪಾತ್ರ ವಹಿಸಿದ್ದಾರೆ. ಆ ಮೂಲಕ ಪಿಡಿಲೈಟ್ ಅನ್ನು ಭಾರತದ ನಿಜವಾದ ಎಂಎನ್ ಸಿ ಆಗಿ ರೂಪಿಸಿದ್ದಾರೆ. 

20 ಬಾರಿ ಸೋತರೂ ಕುಗ್ಗದ ವಿಶ್ವಾಸ, 10,000 ಬಂಡವಾಳದಿಂದ ಉದ್ಯಮ ಪ್ರಾರಂಭಿಸಿದ ಯುವಕ ಇಂದು 500 ಕೋಟಿ ಒಡೆಯ!

ಇನ್ನು ಉತ್ಪನ್ನ ಹಾಗೂ ಬ್ರ್ಯಾಂಡ್ ಅಭಿವೃದ್ಧಿಗೆ ಮಧುಕರ್ ಹೆಚ್ಚಿನ ಗಮನ ಕೇಂದ್ರೀಕರಿಸಿದ್ದಾರೆ. ಅವರ ನಾಯಕತ್ವದಲ್ಲಿ ಪೆಡಿಲೈಟ್ ಇತರ ಕಂಪನಿಗಳ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸುವಲ್ಲಿ ಯಶಸ್ವಿಯಾಗಿದೆ. ಹೊಸ ಅವಕಾಶಗಳನ್ನು ಗುರುತಿಸುವಲ್ಲಿ ಕೂಡ ಕಂಪನಿ ಹಿಂದೆ ಬಿದ್ದಿಲ್ಲ. ಮುಂಬೈ ಕೊಂಡಿವಿಟ ಆರ್ ಆಂಡ್ ಡಿ ಕೇಂದ್ರದಲ್ಲಿ ಕಂಪನಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿದೆ. ಹಾಗೆಯೇ ಸಿಂಗಾಪುರದಲ್ಲಿ ಪಿಡಿಲೈಟ್ ಇನೋವೇಷನ್ ಕೇಂದ್ರವನ್ನು ಕೂಡ ಸ್ಥಾಪಿಸಿದೆ. 

ಕನ್ಸೂಮರ್ ಪ್ರಾಡಕ್ಟ್ ವಿಭಾಗದಲ್ಲಿ ಎಂ.ಬಿ.ಪರೇಖ್ ಇವೈ ಉದ್ಯಮಿ ವರ್ಷದ ಪ್ರಶಸ್ತಿ 2014 ಅನ್ನು ಕೂಡ ಸ್ವೀಕರಿಸಿದ್ದಾರೆ. ಅವರ ನಾಯಕತ್ವದಲ್ಲಿ ಕಂಪನಿ ಕೂಡ 'ವರ್ಷದ ಅತ್ಯಂತ ಭರವಸೆಯ ಕಂಪನಿ' ಪ್ರಶಸ್ತಿ ಸೇರಿದಂತೆ ಅನೇಕ ಪ್ರತಿಷ್ಟಿತ ಪ್ರಶಸ್ತಿಗಳನ್ನು ಸ್ವೀಕರಿಸಿದೆ. 

Follow Us:
Download App:
  • android
  • ios