Asianet Suvarna News Asianet Suvarna News

ಅಮೆರಿಕದಲ್ಲಿಓದಿ ಬಂದ ಮಗ ಅಪ್ಪನ ಉದ್ಯಮಕ್ಕೆ ಹೊಸ ದಿಕ್ಕು ತೋರಿದ; ಈತನ ಕಂಪನಿ ಮೌಲ್ಯ ಈಗ 26,473 ಕೋಟಿ ರೂ.

ಅಪ್ಪನ ಉದ್ಯಮ ಮುನ್ನಡೆಸಲು ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆದು ಬಂದ ಮಗ ಸಂಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಿದ್ದಿದ್ದಾರೆ. ಮಗನ ಆಡಳಿತದಲ್ಲಿ ಈ ಕಂಪನಿ ವರ್ಷದಿಂದ ವರ್ಷಕ್ಕೆ ಆದಾಯ ಹೆಚ್ಚಿಸಿಕೊಳ್ಳುತ್ತಿದೆ. 

Meet man who studied in US returned to India now helps father run Rs 26473 crore company anu
Author
First Published Nov 9, 2023, 4:53 PM IST

Business Desk: ತಂದೆ ಕಟ್ಟಿದ ಉದ್ಯಮ ಸಾಮ್ರಾಜ್ಯವನ್ನು ಮುನ್ನಡೆಸಲು ಮಕ್ಕಳು ವಿದೇಶದಲ್ಲಿ ಓದಿ ಬರೋದು ಸಾಮಾನ್ಯ. ಈ ರೀತಿ ವಿದೇಶದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಲ್ಲಿ ಓದಿದವರು ಅಪ್ಪನ ಉದ್ಯಮವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ ಕೂಡ. ಇಂಥವರಲ್ಲಿ ಜವಳಿ ಹಾಗೂ ಸಕ್ಕರೆ ಕಾರ್ಖಾನೆಗಳನ್ನು ಹೊಂದಿರುವ ಕೆಪಿಆರ್ ಮಿಲ್ ಕಾರ್ಯನಿರ್ವಾಹಕ ನಿರ್ದೇಶಕ ಸಿ.ಆರ್. ಆನಂದಕೃಷ್ಣನ್ ಕೂಡ ಒಬ್ಬರು. ಈ ಸಂಸ್ಥೆಯನ್ನು ಸಿ.ಆರ್. ಆನಂದ ಕೃಷ್ಣನ್ ಅವರ ತಂದೆ ಕೆ.ಪಿ.ರಾಮಸ್ವಾಮಿ 1984ರಲ್ಲಿ ಪ್ರಾರಂಭಿಸಿದ್ದರು. ವಿದೇಶದಲ್ಲಿ ಉನ್ನತ ಶಿಕ್ಷಣ ಪೂರ್ಣಗೊಳಿಸಿ ಹಿಂತಿರುಗಿದ ಆನಂದ ಕೃಷ್ಣನ್ ತಂದೆಯ ಉದ್ಯಮದ ಉಸ್ತುವಾರಿ ವಹಿಸಿಕೊಳ್ಳುವ ಮೂಲಕ ಅದನ್ನು ಹೊಸ ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಕೆಪಿಆರ್ ಗ್ರೂಪ್ ನ ಉದ್ಯಮ ವಿಸ್ತರಣೆ ಹಾಗೂ ಆಧುನೀಕರಣ ಯೋಜನೆಗಳಲ್ಲಿ ಇವರು ಮುಖ್ಯ ಪಾತ್ರ ವಹಿಸಿದ್ದಾರೆ. ಇನ್ನು ಈ ವರ್ಷ ಆನಂದ ಕೃಷ್ಣನ್ 2.3 ಬಿಲಿಯನ್  ಅಮೆರಿಕನ್  ಡಾಲರ್ ನಿವ್ವಳ ಸಂಪತ್ತಿನೊಂದಿಗೆ ಭಾರತದ ಟಾಪ್ 100 ಶ್ರೀಮಂತರ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ಸ್ಥಾನ ಪಡೆದುಕೊಂಡಿದ್ದಾರೆ. ಕೆಪಿಆರ್ ಮಿಲ್ ಸಮೂಹ ಸಂಸ್ಥೆ ಪ್ರಸ್ತುತ 26,473 ಕೋಟಿ ರೂ. ಮಾರುಕಟ್ಟೆ ಬಂಡವಾಳ ಹೊಂದಿದೆ. 

ಕೊಯಮತ್ತೂರಿನ ಜಿಆರ್ ಡಿ ಕಾಲೇಜಿನಲ್ಲಿ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ನಲ್ಲಿ ಪದವಿ ಪೂರ್ಣಗೊಳಿಸಿದ ಆನಂದ ರಾಮಕೃಷ್ಣನ್, ಅಮೆರಿಕದ ಫಿಲಾಡೆಲ್ಫಿಯಾ ಯುನಿವರ್ಸಿಟಿಯಿಂದ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದರು. 2011ರಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಂಡ ಬಳಿಕ ಆನಂದ ಕೃಷ್ಣನ್  2002ರಲ್ಲಿ ತಂದೆಯ ಕೆಪಿಆರ್ ಗ್ರೂಪ್ ಆಡಳಿತ ತಂಡಕ್ಕೆ ಸೇರ್ಪಡೆಗೊಳ್ಳುತ್ತಾರೆ. ಅಲ್ಲಿಂದ ಮುಂದೆ ಸಂಸ್ಥೆಯನ್ನು ಮುನ್ನಡೆಸಲು ಅವರು ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ.

20 ಬಾರಿ ಸೋತರೂ ಕುಗ್ಗದ ವಿಶ್ವಾಸ, 10,000 ಬಂಡವಾಳದಿಂದ ಉದ್ಯಮ ಪ್ರಾರಂಭಿಸಿದ ಯುವಕ ಇಂದು 500 ಕೋಟಿ ಒಡೆಯ!

2008ರಿಂದ ಕೆಪಿಆರ್ ಗ್ರೂಪ್ ಅಧ್ಯಕ್ಷರಾಗಿ ಆನಂದ್ ಕೃಷ್ಣನ್ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಿಂದ ಅವರನ್ನು ಕೆಪಿಆರ್ ಮಿಲ್ ಲಿಮಿಟೆಡ್ ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ಕೆಪಿಆರ್ ಗ್ರೂಪ್ ವಿವಿಧ ವಿಸ್ತರಣೆ ಹಾಗೂ ಆಧುನೀಕರಣದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಪ್ರಸ್ತುತ ಅವರು ಪ್ರೊಸೆಸಿಂಗ್ ವಿಭಾಗ, ಜವಳಿ ಘಟಕ, ಕೆಲವು ಸ್ಪಿನ್ನಿಂಗ್ ಘಟಕಗಳು ಹಾಗೂ ಕರ್ನಾಟಕದಲ್ಲಿರುವ ಸಕ್ಕರೆ ಕಾರ್ಖಾನೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. ಅಲ್ಲದೆ, ಕೊಯಮತ್ತೂರಿನಲ್ಲಿ ಆಡಿ ಹಾಗೂ ಹಾರ್ಲೆ ಡೆವಿಡ್ ಸನ್ ಡೀಲರ್ ಶಿಪ್ ಅನ್ನು ಕೂಡ ಅವರು ನಿರ್ವಹಣೆ ಮಾಡುತ್ತಿದ್ದಾರೆ. ಸ್ಪೋರ್ಟ್ಸ್ ವೇರ್ ನಿಂದ ಹಿಡಿದು ಸ್ಲೀಪ್ ವೇರ್ ತನಕ ವಾರ್ಷಿಕ 128 ಮಿಲಿಯನ್ ಬಟ್ಟೆಗಳನ್ನು ಕೆಪಿಆರ್ ಮಿಲ್ ಉತ್ಪಾದಿಸುತ್ತದೆ. ಈ ಬಟ್ಟೆಗಳನ್ನು ಎಚ್ ಆಂಡ್ ಎಂ, ಮಾರ್ಕ್ಸ್ ಆಂಡ್ ಸ್ಪೆನ್ಸರ್ ಹಾಗೂ ವಾಲ್ ಮಾರ್ಟ್ ಗಳಲ್ಲಿ ಕೂಡ ನೋಡಬಹುದು.

2023ನೇ ಆರ್ಥಿಕ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಕೆಪಿಆರ್ ಗ್ರೂಪ್ 1958.03 ಕೋಟಿ ರೂ. ಆದಾಯ ಗಳಿಸಿದೆ. ಕಂಪನಿಯ ಆದಾಯದಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆ ಕಂಡುಬಂದಿದೆ. 

ಸ್ಕೂಲ್‌ ಫೀಸ್‌ ಕಟ್ಟಲಾಗದೆ ಶಾಲೆ ಬಿಟ್ಟ ವ್ಯಕ್ತಿ: ಈಗ 5.4 ಲಕ್ಷ ಕೋಟಿ ರೂ. ಕಂಪನಿಯ ಸಿಇಒ!

ಆನಂದ್ ಕೃಷ್ಣನ್ ಕೆಪಿಆರ್ ಗ್ರೂಪ್ ಬೆಳವಣಿಗೆಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ. ಇಲ್ಲಿನ ಟೆಕ್ಸ್ ಟೈಲ್ ಮಿಲ್ ಗಳಿಗೆ ಸೂಕ್ತವಾದ ತಂತ್ರಜ್ಞಾನ ಹಾಗೂ ಮಷಿನ್ ಗಳನ್ನು ಅವರು ಒದಗಿಸಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಜವಳಿ ಉತ್ಪಾದನೆ ಪ್ರಕ್ರಿಯೆಗಳ ಅಧ್ಯಯನಕ್ಕೆ ಅವರು ಶ್ರೀಲಂಕಾಕ್ಕೆ ಭೇಟಿ ನೀಡಿದ್ದರು. ಅಲ್ಲಿ  ಜವಳಿ ಉದ್ಯಮದ ಬಗ್ಗೆ ಅವರು ಸಮಗ್ರ ಅಧ್ಯಯನ ನಡೆಸಿದ್ದರು. ಆ ಬಳಿಕ ಅವರ ಆಡಳಿತದಲ್ಲಿ ಕೆಪಿಆರ್ ಪ್ರತಿಷ್ಟಿತ ಜವಳಿ ಘಟಕವನ್ನು ಸ್ಥಾಪಿಸಲಾಯಿತು. ಈ ಘಟಕದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಬಟ್ಟೆಗಳನ್ನು ಉತ್ಪಾದಿಸಲಾಗುತ್ತದೆ.

Follow Us:
Download App:
  • android
  • ios