Asianet Suvarna News Asianet Suvarna News

ತನ್ನ 8ಲಕ್ಷ ಕೋಟಿ ರೂ ಮೌಲ್ಯದ ಕಂಪೆನಿಯಿಂದ ಬೃಹತ್ ಕ್ರಿಸ್ಮಸ್ ಉಡುಗೊರೆ ಸ್ವೀಕರಿಸಲು ರೆಡಿಯಾದ ಇಶಾ ಅಂಬಾನಿ

ಇಶಾ ಅಂಬಾನಿ ಕಳೆದ ವರ್ಷದಿಂದ ರಿಲಯನ್ಸ್ ಇಂಡಸ್ಟ್ರೀಸ್‌ನ ಅತ್ಯಮೂಲ್ಯ ಅಂಗಸಂಸ್ಥೆಗಳಲ್ಲಿ ಒಂದನ್ನು ಮುನ್ನಡೆಸುತ್ತಿದ್ದಾರೆ.  ಕಳೆದ ವರ್ಷ ರಿಲಯನ್ಸ್ ರಿಟೇಲ್‌ನ ನಾಯಕಿ ಎಂದು ಹೆಸರಿಸಲಾಯಿತು.

Isha Ambani may receive this huge Christmas gift  her Rs 800000 crore company gow
Author
First Published Dec 23, 2023, 4:34 PM IST

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಅವರು ದೇಶದ ಅತ್ಯಂತ ಬೆಲೆಬಾಳುವ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಅನ್ನು ನಡೆಸುತ್ತಿದ್ದಾರೆ, ಇದು ಸುಮಾರು 17.33 ಟ್ರಿಲಿಯನ್ ಮಾರುಕಟ್ಟೆ ಮೌಲ್ಯ ಹೊಂದಿದೆ. ಬಿಲಿಯನೇರ್‌ ಸಂಘಟಿತ ಸಂಸ್ಥೆ ರಿಲಯನ್ಸ್ ಅದರ ಅಡಿಯಲ್ಲಿ ವಿವಿಧ ಅಂಗಸಂಸ್ಥೆಗಳನ್ನು ಹೊಂದಿದೆ. ಅದನ್ನು ಅವರ ಸಹವರ್ತಿಗಳು ಮತ್ತು ಅವರ ಮಕ್ಕಳಾದ ಇಶಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿಯವರು ಮುನ್ನಡೆಸುತ್ತಿದ್ದಾರೆ. 

ಇಶಾ ಅಂಬಾನಿ ಕಳೆದ ವರ್ಷದಿಂದ ರಿಲಯನ್ಸ್ ಇಂಡಸ್ಟ್ರೀಸ್‌ನ ಅತ್ಯಮೂಲ್ಯ ಅಂಗಸಂಸ್ಥೆಗಳಲ್ಲಿ ಒಂದನ್ನು ಮುನ್ನಡೆಸುತ್ತಿದ್ದಾರೆ. ಇಶಾ ಅಂಬಾನಿ ಅವರನ್ನು ಕಳೆದ ವರ್ಷ ರಿಲಯನ್ಸ್ ರಿಟೇಲ್‌ನ ನಾಯಕಿ ಎಂದು ಹೆಸರಿಸಲಾಯಿತು ಮತ್ತು ಅಂದಿನಿಂದ ಕಂಪನಿಯ ವಿಸ್ತರಣೆಗೆ ಬಂದಾಗ ಅವರು ತುಂಬಾ ಮುಂದಾಳತ್ವ ತೆಗೆದುಕೊಳ್ಳುತ್ತಿದ್ದಾರೆ.

65,000 ಕೋಟಿ ರೂ ಹೆಚ್ಚು ಮೌಲ್ಯದ ಸ್ಟಾರ್ಟ್‌ಅಪ್‌ ತೆರೆದು ತಂತ್ರಜ್ಞಾನ ಕ್ಷೇತ್ರಕ್ಕೆ ನಾಂದಿ ಹಾಡಿದ ಐಐಟಿ ಪದವೀಧರ

ರಿಲಯನ್ಸ್ ರಿಟೇಲ್ ಪ್ರಸ್ತುತ 8.2 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಮೌಲ್ಯವನ್ನು ಹೊಂದಿದೆ ಮತ್ತು. ಆನ್‌ಲೈನ್ ಫ್ಯಾಷನ್ ವ್ಯವಹಾರ ಕಂಪೆನಿ ಅಜಿಯೊ ಉತ್ತಮ ಲಾಭದಲ್ಲಿದೆ ಎಂದು ವರದಿಯಾಗಿದೆ. ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಅಜಿಯೊ ಈ ತಿಂಗಳು ರಿಲಯನ್ಸ್ ರಿಟೇಲ್‌ನ ಮೊದಲ ಲಾಭದಾಯಕ ಆನ್‌ಲೈನ್ ಉದ್ಯಮವಾಗಲಿದೆ. ಹೀಗಾಗಿ ಕ್ರಿಸ್‌ಮಸ್‌ ಮತ್ತು ಹೊಸ ವರ್ಷಕ್ಕೆ ಭರ್ಜರಿ ಲಾಭದೊಂದಿದೆ ಇಶಾಗೆ ಉಡುಗೊರೆ ಅನಿಸಲಿದೆ.

ಮಿಂತ್ರಾ ಪ್ರಾಬಲ್ಯವನ್ನು ಕಟ್ಟಿ ಹಾಕಲು 2017 ರಲ್ಲಿ ರಿಲಯನ್ಸ್‌ ಅಜಿಯೊ ಅನ್ನು  ಪ್ರಾರಂಭಿಸಿತು. ಕೆಲವೇ ವರ್ಷಗಳಲ್ಲಿ ಬ್ರ್ಯಾಂಡ್ ಗಮನಾರ್ಹವಾಗಿ ಬೆಳೆಯಿತು. ಈಗ ದೇಶದಲ್ಲಿ ಹೆಚ್ಚು ಬಳಸುವ ಫ್ಯಾಷನ್ ವೇದಿಕೆಗಳಲ್ಲಿ ಒಂದಾಗಿದೆ. ವರದಿಯ ಪ್ರಕಾರ, ಅಜಿಯೊ ಒಟ್ಟು ವ್ಯಾಪಾರದ ಮೌಲ್ಯದಲ್ಲಿ ವಾರ್ಷಿಕ  2 ಬಿಲಿಯನ್ ಡಾಲರ್‌ ಮಾರಾಟವನ್ನು ಪ್ರಕಟಿಸುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ, ರಿಲಯನ್ಸ್ ರಿಟೇಲ್ ಅನೇಕ ಅಂತರಾಷ್ಟ್ರೀಯ ಬ್ರಾಂಡ್‌ಗಳೊಂದಿಗೆ ಪಾಲುದಾರಿಕೆ ಹೊಂದಿದೆ, ಅದು ಈಗ ಅಜಿಯೊ ಮೂಲಕ ಭಾರತದಲ್ಲಿ ಪ್ರತ್ಯೇಕವಾಗಿ ಲಭ್ಯವಿದೆ.

ಬಾಲಿವುಡ್‌ ಸೂಪರ್ ಸ್ಟಾರ್ ಜೊತೆ ಬ್ರಿಟಿಷ್ ಪ್ರಜೆಯ ಗೌಪ್ಯ ಮದುವೆ, ಸರಳ ...

ಗೊತ್ತಿಲ್ಲದವರಿಗೆ, ಕಳೆದ ವರ್ಷ ಆಗಸ್ಟ್‌ನಲ್ಲಿ ಮುಖೇಶ್ ಅಂಬಾನಿ ಅವರು ರಿಲಯನ್ಸ್ ರಿಟೇಲ್‌ನ ನಾಯಕಿ ಎಂದು ಇಶಾ ಅಂಬಾನಿಯನ್ನು ಹೆಸರಿಸಿದ್ದಾರೆ. ಜಿಮ್ಮಿ ಚೂ, ಜಾರ್ಜಿಯೊ ಅರ್ಮಾನಿ, ಹ್ಯೂಗೋ ಬಾಸ್, ವರ್ಸೇಸ್, ಮೈಕೆಲ್ ಕಾರ್ಸ್, ಬ್ರೂಕ್ಸ್ ಬ್ರದರ್ಸ್, ಅರ್ಮಾನಿ ಎಕ್ಸ್‌ಚೇಂಜ್, ಬರ್ಬೆರಿ ಮತ್ತು ಇತರ ಅನೇಕ ಜಾಗತಿಕ ಬ್ರ್ಯಾಂಡ್‌ಗಳು ರಿಲಯನ್ಸ್ ರಿಟೇಲ್ ಪಾಲುದಾರ ಬ್ರಾಂಡ್‌ನಂತೆ ಭಾರತದಲ್ಲಿ ಲಭ್ಯವಿದೆ. 

ಮೆಗಾ ರಿಲಯನ್ಸ್ ಇಂಡಸ್ಟ್ರೀಸ್ ಈವೆಂಟ್‌ನಲ್ಲಿ ಇಶಾ ಅಂಬಾನಿ ಬಹಿರಂಗಪಡಿಸಿದಂತೆ, ರಿಲಯನ್ಸ್ ರೀಟೈಲ್ ಕಳೆದ ವರ್ಷ 3300 ಸ್ಟೋರ್‌ಗಳನ್ನು ತೆರೆದಿದೆ. 78 ಕೋಟಿ ಸ್ಟೋರ್‌ ಫುಲ್‌ಫಾಲ್‌ ಮತ್ತು 100 ಕೋಟಿಗೂ ಹೆಚ್ಚು ವಹಿವಾಟುಗಳೊಂದಿಗೆ, ರಿಲಯನ್ಸ್ ರಿಟೇಲ್ ವಿಶ್ವದ ಅತಿ ಹೆಚ್ಚು ಭೇಟಿ ನೀಡಿದ ಟಾಪ್ 10 ಚಿಲ್ಲರೆ ವ್ಯಾಪಾರಗಳಲ್ಲಿ ಒಂದಾಗಿದೆ ಮತ್ತು ಜಾಗತಿಕ ಟಾಪ್ 100 ಪಟ್ಟಿಯಲ್ಲಿನ ಏಕೈಕ ಭಾರತೀಯ ಚಿಲ್ಲರೆ ವ್ಯಾಪಾರಿಯಾಗಿದೆ. 

Follow Us:
Download App:
  • android
  • ios