Asianet Suvarna News Asianet Suvarna News

ಬೀದಿಯಲ್ಲಿ ಪೆನ್ ಮಾರಾಟ ಮಾಡುತ್ತಿದ್ದ ವ್ಯಕ್ತಿ ಇಂದು 2300 ಕೋಟಿ ಮೌಲ್ಯದ ಕಂಪನಿ ಒಡೆಯ!

ಒಂದೇ ಒಂದು ಆಲೋಚನೆ ಬದುಕು ಬದಲಿಸಬಲ್ಲದು ಎಂಬುದಕ್ಕೆ ಈತ ಅತ್ಯುತ್ತಮ ನಿದರ್ಶನ. ಒಂದು ಕಾಲದಲ್ಲಿ ಬೀದಿಯಲ್ಲಿ ಪೆನ್ ಮಾರಾಟ ಮಾಡುತ್ತಿದ್ದ ಈತ, ಇಂದು ಬಹುಕೋಟಿ ಮೌಲ್ಯದ ಕಂಪನಿ ಒಡೆಯ. 
 

Meet Kunwar Sachdev who once used to sell pens on streets now owns Rs 2300 crore company anu
Author
First Published Feb 8, 2024, 2:17 PM IST

Business Desk:ಗುರಿ ನಿಗದಿಪಡಿಸೋದು ಹಾಗೂ ಅದನ್ನು ಸಾಧಿಸೋದು ಎರಡೂ ಭಿನ್ನ ಸಂಗತಿಗಳು. ಹೌದು, ಜಯ ಸಾಧಿಸಿದವರು ಹಾಗೂ ವಿಫಲನಾದವರು ಇಬ್ಬರ ಗುರಿಯೂ ಒಂದೇ ಆಗಿರುತ್ತದೆ. ಆದರೆ, ಇದರಲ್ಲಿಬಹುತೇಕರು ಸೋತರೆ, ಬೆರಳೆಣಿಕೆಯಷ್ಟು ಮಂದಿ ಜಯ ಸಾಧಿಸುತ್ತಾರೆ. ಇದು ಉದ್ಯಮ ರಂಗಕ್ಕೂ ಅನ್ವಯಿಸುತ್ತದೆ. ಉದ್ಯಮ ಜಗತ್ತಿನಲ್ಲಿ ಹೀಗೆ ಗುರಿ ನಿಗದಿಪಡಿಸಿಕೊಂಡು ಜಯ ಸಾಧಿಸಿದವರಲ್ಲಿ ಕುನ್ವರ್ ಸಚ್ ದೇವ್ ಕೂಡ ಒಬ್ಬರು. 'ಒಂದೇ ಒಂದು ಆಲೋಚನೆ ನಿಮ್ಮ ಇಡೀ ಬದುಕನ್ನೇ ಬದಲಾಯಿಸಿ ಬಿಡಬಲ್ಲದು' ಎಂಬ ಮಾತನ್ನು ಆಗಾಗ ಕೇಳುತ್ತೇವೆ. ಆದರೆ, ಆ ಒಂದು ಆಲೋಚನೆಯನ್ನು ಕಾರ್ಯರೂಪಕ್ಕೆ ತರೋರು ತುಂಬಾ ಕಡಿಮೆ. ಆದರೆ, ಕುನ್ವರ್ ಸಚ್ ದೇವ್ ತನಗೆ ಹೊಳೆದ ಆಲೋಚನೆಯನ್ನು ಕಾರ್ಯರೂಪಕ್ಕೆ ತರುವ ಮೂಲಕ ಬದುಕನ್ನೇ ಬದಲಾಯಿಸಿಕೊಂಡಿದ್ದಾರೆ. ಅವರ ಯಶಸ್ಸು ಅನೇಕರಿಗೆ ಸ್ಫೂರ್ತಿದಾಯಕ ಕೂಡ ಹೌದು. ಅಂದಹಾಗೇ ಕುನ್ವರ್ ಸಚ್ ದೇವ್ ಅವರನ್ನು 'ಭಾರತದ ಸೋಲಾರ್ ಮ್ಯಾನ್' ಎಂದು ಕೂಡ ಕರೆಯುತ್ತಾರೆ. 

ಕುನ್ವರ್ ಸಚ್ ದೇವದ ಮನೆ ಮನೆಗೆ ಪೆನ್ ಗಳನ್ನು ಮಾರಾಟ ಮಾಡಿ ಅದರಿಂದ ಅಲ್ಪ ಕಾಸು ಗಳಿಸುತ್ತಿದ್ದರು. ಇದರಿಂದಲೇ ಅವರ ಜೀವನ ನಿರ್ವಹಣೆ ಆಗುತ್ತಿತ್ತು ಕೂಡ. ಹೀಗಿರುವಾಗ ಅವರ ತಲೆಯಲ್ಲೊಂದು ಹೊಸ ಯೋಚನೆ ಮೂಡಿತು. ಅದೇ ಸ್ವಲ್ಪ ಹಣವನ್ನು ಹೂಡಿಕೆ ಮಾಡಿ ಉದ್ಯಮ ಪ್ರಾರಂಭಿಸಬೇಕು ಎಂಬುದು. ಈ ಆಲೋಚನೆಯನ್ನು ಕಾರ್ಯರೂಪಕ್ಕೆ ತಂದ ಕುನ್ವರ್, ಇಂದು ಯಶಸ್ವಿ ಉದ್ಯಮಿ. ಅವರ ಉದ್ಯಮ ಇಂದು ಭಾರತದಲ್ಲಿ ಮಾತ್ರವಲ್ಲ, ಇತರ ರಾಷ್ಟ್ರಗಳಲ್ಲಿ ಕೂಡ ಕಾರ್ಯನಿರ್ವಹಿಸುತ್ತಿದೆ. 

ದಿವಾಳಿಯಾದ ಕುಟುಂಬಕ್ಕೆ ನೆರವಾಗಲು ಡೆಲಿವರಿ ಬಾಯ್ ಆಗಿದ್ದರು ಈ ಕಂಪನಿ ಸಿಇಒ; ಯಾರವರು ಗೊತ್ತಾ?

ಕುನ್ವರ್ ಅವರು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರು. ಅವರ ತಂದೆ ರೈಲ್ವೆ ಇಲಾಖೆಯಲ್ಲಿ ಕ್ಲಾರ್ಕ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸರ್ಕಾರಿ ಶಾಲೆಯಲ್ಲಿ ಅವರು ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದ್ದರು. ಆ ಬಳಿಕ ಕುನ್ವರ್ ಮನೆ ಮನೆಗೆ ತೆರಳಿ ಪೆನ್ನುಗಳನ್ನು ಮಾರಾಟ ಮಾಡುವ ಮೂಲಕ ಕಾಲೇಜು ಶಿಕ್ಷಣಕ್ಕೆ ಅಗತ್ಯವಾದ ಹಣ ಸಂಗ್ರಹಿಸುತ್ತಿದ್ದರು. ವೈದ್ಯರಾಗಬೇಕೆಂಬ ಕನಸಿದರೂ ಕೂಡ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗಲಿಲ್ಲ. ಹೀಗಾಗಿ ವೈದ್ಯರಾಗಬೇಕು ಎಂಬ ಕನಸನ್ನು ಕುನ್ವರ್ ತ್ಯಜಿಸಿದ್ದರು. 

ಪದವಿ ಬಳಿಕ ಕೇಬಲ್ ಕಂಪನಿಯೊಂದರಲ್ಲಿ ಮಾರ್ಕೆಟಿಂಗ್ ಕೆಲಸ ಮಾಡುತ್ತಿದ್ದರು. ಈ ಸಮಯದಲ್ಲಿ ಈ ಕ್ಷೇತ್ರದಲ್ಲಿ ಬೆಳವಣಿಗೆಗೆ ಸಾಕಷ್ಟು ಅವಕಾಶವಿದೆ ಎಂಬ ವಿಚಾರ ಕುನ್ವರ್ ಅವರಿಗೆ ಹೊಳೆಯಿತು. ಹೀಗಾಗಿ ಅವರು ಉದ್ಯೋಗ ತ್ಯಜಿಸಿ ಸು-ಕುಮ್ ಕಮ್ಯೂನಿಕೇಷನ್ ಎಂಬ ಕಂಪನಿ ಸ್ಥಾಪಿಸಿದರು. ಈ ಕಂಪನಿ ಅನೇಕ ವಿಧದ ಸೌರವಿದ್ಯುತ್ ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ. ಈ ಉತ್ಪನ್ನಗಳಿಗೆ ಭಾರತ ಹಾಗೂ ವಿದೇಶಗಳಲ್ಲಿ ಭಾರೀ ಬೇಡಿಕೆಯಿದೆ ಕೂಡ. ಇವರ ಕಂಪನಿಯ ಇನ್ವರ್ಟರ್ ಗಳಿಗೆ ಭಾರೀ ಬೇಡಿಕೆಯಿದೆ ಕೂಡ. ಭಾರತದ ಬ್ಯಾಕ್ ಅಪ್ ಪವರ್ ಕ್ಷೇತ್ರದಲ್ಲಿ ಕುನ್ವರ್ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದ್ದಾರೆ. 

84 ಲಕ್ಷ ರೂ. ಸಂಬಳದ ಕೆಲಸ ಬಿಟ್ಟು 100 ಕೋಟಿ ರೂ. ಉದ್ಯಮ ಕಟ್ಟಿದ ಐಐಟಿ ಪದವೀಧರ

ಕುನ್ವರ್ ಉದ್ಯಮದ ಪ್ರಾರಂಭಿಕ ದಿನಗಳಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದರು. ಅವರ ಉದ್ಯಮಕ್ಕೆ ಅಗತ್ಯವಾದ ಹಣವನ್ನು ಸಂಗ್ರಹಿಸೋದು ಅವರಿಗೆ ಕಷ್ಟದ ಕೆಲಸವಾಗಿತ್ತು. ಹೀಗಿರುವಾಗ ಗ್ರಾಹಕರು ಮೊದಲ 100 ಇನ್ವರ್ ಟರ್ ಗಳನ್ನು ಕೆಲವೊಂದು ಸಮಸ್ಯೆಗಳ ಕಾರಣಕ್ಕೆ ಹಿಂತಿರುಗಿಸಿದ್ದರು. ಇಂಥ ಸಂದರ್ಭದಲ್ಲಿ ಬೇರೆ ಯಾರೇ ಆಗಿದ್ದರೂ ಉದ್ಯಮವನ್ನು ಅಲ್ಲಿಗೆ ನಿಲ್ಲಿಸುತ್ತಿದ್ದರು. ಆದರೆ, ಕುನ್ವರ್ ಎದೆಗುಂದಲಿಲ್ಲ. ಅವರು ತಮ್ಮ ಉತ್ಪನ್ನಗಳನ್ನು ಇನ್ನಷ್ಟು ಉತ್ತಮಪಡಿಸಲು ಮುಂದಾದರು. ಅದರಲ್ಲಿನ ದೋಷಗಳನ್ನು ಸರಿಪಡಿಸುವ ಮೂಲಕ ಮಾರುಕಟ್ಟೆಯಲ್ಲಿರುವ ಇತರ ಬ್ರ್ಯಾಂಡ್ ಉತ್ಪನ್ನಗಳಿಗಿಂತ ಉತ್ತಮ ಗುಣಮಟ್ಟ ಹೊಂದಿರುವಂತೆ ಮಾಡಿದ್ದರು. ಹೀಗಾಗಿ ಆ ಸಮಯದಲ್ಲಿ ಸು-ಕಮ್ ಗೆ ಪ್ರತಿಸ್ಪರ್ಧೆ ನೀಡುವಂತಹ ಅನೇಕ ಕಂಪನಿಗಳು ಮಾರುಕಟ್ಟೆಯಲ್ಲಿದ್ದರು ಕೂಡ ಇದರ ಉತ್ಪನ್ನಗಳ ಗುಣಮಟ್ಟ ಹಾಗೂ ಬೆಲೆ ಬಹುಬೇಗ ಅದರ ಜನಪ್ರಿಯತೆಯನ್ನು ಹೆಚ್ಚಿಸಿತು. ಇಂದು ಕುನ್ವರ್ ಸಚ್ ದೇವ್ ಅವರ ಉದ್ಯಮದ ಮೌಲ್ಯ 2,300 ಕೋಟಿ ರೂ. 

Follow Us:
Download App:
  • android
  • ios