Asianet Suvarna News Asianet Suvarna News

ಸ್ವತಂತ್ರಪೂರ್ವ ಭಾರತದ ಅತಿದೊಡ್ಡ ಉದ್ಯಮಿ ಇವರೇ: ಜಮ್‌ಶೆಟ್‌ಜೀ ಟಾಟಾ, ಮಹೀಂದ್ರಾ, ಲವ್ಜಿ ವಾಡಿಯಾ ಇವರ್ಯಾರೂ ಅಲ್ಲ!

ಭಾರತದ ಕಾಟನ್ ಕಿಂಗ್ ಎಂದು ಕರೆಯಲ್ಪಡುವ ಗೋವಿಂದರಾಮ್ ಸೆಸ್ಕರಿಯಾ ಅವರ ಕಾಲದಲ್ಲಿ ದೊಡ್ಡ ಉದ್ಯಮಿಯಾಗಿದ್ದರು. ಅವರ ಬಗ್ಗೆ ಇಲ್ಲಿದೆ ವಿವರ..

meet biggest businessman of pre independence india not jamsetji tata mahindra lovji wadia govindram seksaria ash
Author
First Published Oct 31, 2023, 4:09 PM IST

ನವದೆಹಲಿ (ಅಕ್ಟೋಬರ್ 31, 2023): ಅಕ್ಟೋಬರ್ 19, 1888 ರಂದು ಜನಿಸಿದ ಗೋವಿಂದರಾಮ್ ಸೆಕ್ಸಾರಿಯಾ ಅವರು ಸ್ವಾತಂತ್ರ್ಯಪೂರ್ವ ಭಾರತದ ಅತ್ಯಂತ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರು. ಸೆಸ್ಕರಿಯಾ ರಾಜಸ್ಥಾನದ ನವಲಗಢದಲ್ಲಿ ಮಾರ್ವಾಡಿ ಕುಟುಂಬದಲ್ಲಿ ಜನಿಸಿದರು. 

ಭಾರತದ ಕಾಟನ್ ಕಿಂಗ್ ಎಂದು ಕರೆಯಲ್ಪಡುವ ಗೋವಿಂದರಾಮ್ ಸೆಸ್ಕರಿಯಾ ಅವರ ಕಾಲದಲ್ಲಿ ದೊಡ್ಡ ಉದ್ಯಮಿಯಾಗಿದ್ದರು. ಮಾರ್ವಾಡಿ ಕುಟುಂಬದಲ್ಲಿ ಜನಿಸಿದ ಅವರು 16ನೇ ವಯಸ್ಸಿನಲ್ಲಿ ತಮ್ಮ ತಂದೆ - ತಾಯಿ ಇಬ್ಬರನ್ನೂ ಕಳೆದುಕೊಂಡರು. ಅವರ ಹೆತ್ತವರ ಮರಣದ ನಂತರ, ಸೆಸ್ಕರಿಯಾ ಅವರು ತಮ್ಮ ಪತ್ನಿ, ಸಹೋದರರಾದ ಭೋಲಾರಾಮ್, ರಾಮನಾಥ್, ಮಖನ್ಲಾಲ್ ಮತ್ತು ಇಬ್ಬರು ಸಹೋದರಿಯರ ಜವಾಬ್ದಾರಿಯನ್ನು ವಹಿಸಿಕೊಂಡರು.

ಇದನ್ನು ಓದಿ: ದೆಹಲಿ ವಿಮಾನ ನಿಲ್ದಾಣಕ್ಕಿಂತ ಪಕ್ಕದ ಈ ಏರ್‌ಪೋರ್ಟ್‌ನಿಂದ ಫ್ಲೈಟ್‌ ಹತ್ತಿ ಸಾವಿರಾರು ರೂ. ಹಣ ಉಳಿಸಿಕೊಳ್ಳಿ..!

ನಂತರ, 1900 ರ ದಶಕದ ಆರಂಭದಲ್ಲಿ, ಗೋವಿಂದರಾಮ್ ಸೆಸ್ಕರಿಯಾ ಮುಂಬೈಗೆ ಬಂದರು (ಆಗ ಇದನ್ನು ಬಾಂಬೆ ಎಂದು ಕರೆಯಲಾಗುತ್ತಿತ್ತು). ಭಾರತವು ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದರಿಂದ, ದೇಶದ ಎಲ್ಲಾ ಪ್ರಮುಖ ವ್ಯವಹಾರಗಳು ಬ್ರಿಟಿಷರ ಒಡೆತನದಲ್ಲೇ ಇತ್ತು ಅಥವಾ ನಿರ್ವಹಿಸಲ್ಪಟ್ಟವು. ಅಂತಹ ಸಂದರ್ಭಗಳಲ್ಲಿ ಕಾರ್ಯನಿರ್ವಹಿಸಲು ಭಾರತೀಯ ಕಂಪನಿಗಳು ಮತ್ತು ಉದ್ಯಮಿಗಳಿಗೆ ತುಂಬಾ ಕಠಿಣವಾಗಿತ್ತು. 

ಈ ಹಿನ್ನೆಲೆ ಗೋವಿಂದರಾಮ್ ಸೆಕ್ಸಾರಿಯಾ ಮೊದಲು ಬಾಂಬೆ ಕಾಟನ್ ಎಕ್ಸ್‌ಚೇಂಜ್‌ನಲ್ಲಿ (Bombay Cotton Exchange) ಆಪರೇಟರ್ ಆಗಿ ಕೆಲಸ ಮಾಡಿದರು ಮತ್ತು ಶೀಘ್ರದಲ್ಲೇ ಹತ್ತಿ ಒಪ್ಪಂದ ಮಂಡಳಿಯ (Cotton Contract Board) ಸದಸ್ಯರಾದರು. ನಂತರ ಅವರು ಈಸ್ಟ್ ಇಂಡಿಯಾ ಕಾಟನ್ ಅಸೋಸಿಯೇಷನ್‌ನ (East India Cotton Association) ಸದಸ್ಯರಾದರು ಮತ್ತು ಹತ್ತಿ ಮಾರುಕಟ್ಟೆಯಲ್ಲಿ ಭಾರಿ ಜನಪ್ರಿಯ ಹೆಸರಾದರು. 

ಇದನ್ನೂ ಓದಿ: ಅವರು ವಾರಕ್ಕೆ 80 - 90 ಗಂಟೆ ವರ್ಕ್‌ ಮಾಡ್ತಾರೆ: 70 ಗಂಟೆ ಕೆಲಸ ಸೂತ್ರದ ಬಗ್ಗೆ ಪತಿ ಹೇಳಿಕೆಗೆ ಸುಧಾಮೂರ್ತಿ ಪ್ರತಿಕ್ರಿಯೆ

ಹತ್ತಿ ಮಾರುಕಟ್ಟೆಯಲ್ಲಿ ಯಶಸ್ವಿಯಾದ ನಂತರ ಉದ್ಯಮಿ ಗೋವಿಂದರಾಮ್ ಸೆಕ್ಸಾರಿಯಾ ಬುಲಿಯನ್ ಹಾಗೂ ಇತರ ಸರಕು ಮಾರುಕಟ್ಟೆಗೂ ಪ್ರವೇಶಿಸಿದರು. ಅವರು ಭಾರತೀಯ ಷೇರು ವಿನಿಮಯ ಕೇಂದ್ರದ (Indian Stock Exchange) ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು.

1934 ರಲ್ಲಿ, ಗೋವಿಂದರಾಮ್‌ ಸೆಕ್ಸಾರಿಯಾ ಅವರು ತಮ್ಮ ವ್ಯಾಪಾರವನ್ನು ಭಾರತದ ಹೊರಗೆ ವಿಸ್ತರಿಸಲು ನಿರ್ಧರಿಸಿದರು ಮತ್ತು ನ್ಯೂಯಾರ್ಕ್ ಕಾಟನ್ ಎಕ್ಸ್‌ಚೇಂಜ್‌ನ (New York Cotton Exchange) ಸದಸ್ಯರಾದರು. ಅವರು ಲಿವರ್‌ಪೂಲ್ ಕಾಟನ್ ಎಕ್ಸ್‌ಚೇಂಜ್‌ನ (Liverpool Cotton Exchange) ಸದಸ್ಯರೂ ಆಗಿದ್ದರು.

ಇದನ್ನೂ ಓದಿ: ಪಾಕ್‌ ಸೋಲಿಸಿದ ಅಫ್ಘಾನಿಸ್ತಾನದ ರಷೀದ್‌ ಖಾನ್‌ಗೆ 10 ಕೋಟಿ ಬಹುಮಾನ ಕೊಟ್ಟ ರತನ್‌ ಟಾಟಾ! ಅಸಲಿಯತ್ತು ಹೀಗಿದೆ..

ಬಳಿಕ ಗೋವಿಂದರಾಮ್‌ ಸೆಕ್ಸಾರಿಯಾ 1937 ರಲ್ಲಿ ಗೋವಿಂದರಾಮ್ ಬ್ರದರ್ಸ್ ಪ್ರೈವೇಟ್ ಲಿಮಿಟೆಡ್ ಅನ್ನು ಸ್ಥಾಪಿಸುವ ಮೂಲಕ ಕೈಗಾರಿಕೋದ್ಯಮಿ ಎನಿಸಿಕೊಂಡರು. ಅವರು ಸಸ್ಯಜನ್ಯ ಎಣ್ಣೆ ವ್ಯಾಪಾರವನ್ನು ಪ್ರಾರಂಭಿಸಿದರು ಮತ್ತು ನಂತರ ಸಕ್ಕರೆ, ಜವಳಿ, ಖನಿಜಗಳು, ಗಣಿಗಾರಿಕೆ, ಬ್ಯಾಂಕಿಂಗ್, ಮುದ್ರಣ ಮತ್ತು ಮೋಷನ್‌ ಪಿಕ್ಚರ್ಸ್‌ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದರು. ಗೋವಿಂದರಾಮ್ ಸೆಕ್ಸಾರಿಯಾ ಅವರು 1946 ರಲ್ಲಿ ನಿಧನರಾದರು. 

ಇವರು ದೊಡ್ಡ ಲೋಕೋಪಕಾರಿಯೂ ಆಗಿದ್ದರು ಮತ್ತು ಅವರು ಅನೇಕ ಶಾಲೆಗಳು ಹಾಗೂ ಕಾಲೇಜುಗಳನ್ನು ಸ್ಥಾಪಿಸಿದ್ದಾರೆ.

ಇದನ್ನೂ ಓದಿ: ವಿಶ್ವದ ನಂ. 1 ಶ್ರೀಮಂತ ವ್ಯಕ್ತಿಗೆ ಈ ಕ್ಷೇತ್ರದಲ್ಲಿ ಪೈಪೋಟಿ ನೀಡಲಿರೋ ಏಷ್ಯಾದ ನಂ. 1 ಶ್ರೀಮಂತ ಮುಖೇಶ್‌ ಅಂಬಾನಿ!

Follow Us:
Download App:
  • android
  • ios