ಪಾಕ್ ಸೋಲಿಸಿದ ಅಫ್ಘಾನಿಸ್ತಾನದ ರಷೀದ್ ಖಾನ್‌ಗೆ 10 ಕೋಟಿ ಬಹುಮಾನ ಕೊಟ್ಟ ರತನ್ ಟಾಟಾ! ಅಸಲಿಯತ್ತು ಹೀಗಿದೆ..
ರತನ್ ಟಾಟಾ ಅವರು ಪಾಕಿಸ್ತಾನದ ವಿರುದ್ಧ ಗೆದ್ದ ನಂತರ ಅಫ್ಘಾನಿಸ್ತಾನ ಕ್ರಿಕೆಟಿಗ ರಶೀದ್ ಖಾನ್‌ಗೆ 10 ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ ಎಂದು ವಾಟ್ಸಾಪ್ ಫಾರ್ವರ್ಡ್‌ಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಅವರೇ ಸ್ಪಷ್ಟನೆ ನೀಡಿದ್ದಾರೆ.
ನವದೆಹಲಿ (ಅಕ್ಟೋಬರ್ 30, 2023): ಇಂದು ಅಫ್ಘಾನಿಸ್ತಾನ ತಂಡ ಶ್ರೀಲಂಕಾ ವಿರುದ್ಧ ವಿಶ್ವಕಪ್ ಕ್ರಿಕೆಟ್ ಪಂದ್ಯವಾಡ್ತಿದೆ. ಈ ನಡುವೆ ಅಫ್ಘಾನ್ ಕ್ರಿಕೆಟಿಗ ರಷೀದ್ ಖಾನ್‌ಗೆ ಖ್ಯಾತ ಉದ್ಯಮಿ ರತನ್ ಟಾಟಾ 10 ಕೋಟಿ ರೂ. ಬಹುಮಾನ ಘೋಷಿಸಿದ್ದಾರೆಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ. ಈ ಬಗ್ಗೆ ಸ್ವತ: ಉದ್ಯಮಿ ರತನ್ ಟಾಟಾ ಅವರೇ ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ನಾನು ಯಾವುದೇ ಘೋಷಣೆ ಮಾಡಿಲ್ಲ ಅಥವಾ ಯಾವುದೇ ಬಹುಮಾನವನ್ನು ನೀಡಿಲ್ಲ ಅಥವಾ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಅಥವಾ ಯಾವುದೇ ಆಟಗಾರನಿಗೆ ಯಾವುದೇ ಸಲಹೆಗಳನ್ನು ನೀಡಿಲ್ಲ ಎಂದು ಕೈಗಾರಿಕೋದ್ಯಮಿ ರತನ್ ಟಾಟಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿರುವ ಸುದ್ದಿಯನ್ನು ನಿರಾಕರಿಸಿದ್ದಾರೆ. "ಯಾವುದೇ ಆಟಗಾರರಿಗೆ ದಂಡ ಅಥವಾ ಬಹುಮಾನದ ಬಗ್ಗೆ ಯಾವುದೇ ಕ್ರಿಕೆಟ್ ಸದಸ್ಯರ ಬಗ್ಗೆ ನಾನು ಐಸಿಸಿ ಅಥವಾ ಯಾವುದೇ ಕ್ರಿಕೆಟ್ ಫ್ಯಾಕಲ್ಟಿಗೆ ಯಾವುದೇ ಸಲಹೆಗಳನ್ನು ನೀಡಿಲ್ಲ. ನನಗೂ ಕ್ರಿಕೆಟ್‌ಗೂ ಯಾವುದೇ ಸಂಬಂಧವಿಲ್ಲ. ಅಂತಹ ಸ್ವರೂಪದ ವಾಟ್ಸಾಪ್ ಫಾರ್ವರ್ಡ್‌ಗಳು ಮತ್ತು ವಿಡಿಯೋಗಳು ನನ್ನ ಅಧಿಕೃತ ವೇದಿಕೆಗಳಿಂದ ಬರದ ಹೊರತು ದಯವಿಟ್ಟು ನಂಬಬೇಡಿ" ಎಂದು ರತನ್ ಟಾಟಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನು ಓದಿ: ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡ್ಬೇಕೆಂದ ನಾರಾಯಣ ಮೂರ್ತಿ: ಬೆಂಗಳೂರಿನ ಖ್ಯಾತ ಹೃದ್ರೋಗ ತಜ್ಞರ ಟ್ವೀಟ್ ವೈರಲ್
ರತನ್ ಟಾಟಾ ಅವರು ಪಾಕಿಸ್ತಾನದ ವಿರುದ್ಧ ಗೆದ್ದ ನಂತರ ಅಫ್ಘಾನಿಸ್ತಾನ ಕ್ರಿಕೆಟಿಗ ರಶೀದ್ ಖಾನ್‌ಗೆ 10 ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ ಎಂದು ವಾಟ್ಸಾಪ್ ಫಾರ್ವರ್ಡ್‌ಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಆದರೆ ಹೆಸರಾಂತ ಕೈಗಾರಿಕೋದ್ಯಮಿ ಅಂತಹ ಯಾವುದೇ ಹೇಳಿಕೆಗಳನ್ನು ನಿರಾಕರಿಸಿದ್ದಾರೆ.
ಅಫ್ಘಾನಿಸ್ತಾನ ಕಳೆದ ವಾರ ವಿಶ್ವಕಪ್‌ನಲ್ಲಿ ತನ್ನ ಎರಡನೇ ಅಚ್ಚರಿಯ ವಿಜಯವನ್ನು ದಾಖಲಿಸಿತು ಮತ್ತು 50-ಓವರ್‌ಗಳ ಸ್ವರೂಪದಲ್ಲಿ ಪಾಕಿಸ್ತಾನದ ವಿರುದ್ಧ ತನ್ನ ಮೊದಲ ಜಯವನ್ನು ದಾಖಲಿಸಿದೆ. ಮೈದಾನದಲ್ಲಿ ಬೆರಗುಗೊಳಿಸುವ ಆಲ್‌ರೌಂಡ್ ಪ್ರದರ್ಶನ ನೀಡಿದ ಅಫ್ಘಾನಿಸ್ತಾನವು ನಿಧಾನಗತಿಯ ಚೆನ್ನೈ ಪಿಚ್‌ನಲ್ಲಿ 8 ವಿಕೆಟ್‌ಗಳ ಭರ್ಜರಿ ಗೆಲುವಿನೊಂದಿಗೆ ಪಾಕ್ ತಂಡವನ್ನು ಬೆರಗುಗೊಳಿಸಿದೆ.
ಇದನ್ನೂ ಓದಿ: ವಿಶ್ವದ ನಂ. 1 ಶ್ರೀಮಂತ ವ್ಯಕ್ತಿಗೆ ಈ ಕ್ಷೇತ್ರದಲ್ಲಿ ಪೈಪೋಟಿ ನೀಡಲಿರೋ ಏಷ್ಯಾದ ನಂ. 1 ಶ್ರೀಮಂತ ಮುಖೇಶ್ ಅಂಬಾನಿ!
.
ಅಫ್ಘಾನಿಸ್ತಾನವು ಕ್ರಿಕೆಟ್‌ನ 2 ಶಕ್ತಿಶಾಲಿ ತಂಡಗಳಾದ ಮಾಜಿ ವಿಶ್ವ ಚಾಂಪಿಯನ್ ಪಾಕಿಸ್ತಾನ ಮತ್ತು ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡಗಳನ್ನು ಸೋಲಿಸಿದೆ. ಅಫ್ಘಾನಿಸ್ತಾನ ಇಂದು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಇಂದು (ಅಕ್ಟೋಬರ್ 30 ರಂದು) ಶ್ರೀಲಂಕಾ ವಿರುದ್ಧ ಪಂದ್ಯವಾಡುತ್ತಿದೆ.
ಇದನ್ನೂ ಓದಿ: ಭಾರತದ ಅತಿದೊಡ್ಡ ವಾಣಿಜ್ಯ ಬ್ಯಾಂಕ್ ಬ್ರ್ಯಾಂಡ್ ರಾಯಭಾರಿಯಾದ ಭಾರತದ ಮಾಜಿ ಕೂಲ್ ಕ್ಯಾಪ್ಟನ್!