Asianet Suvarna News Asianet Suvarna News

ಅಕ್ಟೋಬರ್‌ನಲ್ಲಿ ಹೆಚ್ಚಾಗಲಿದೆ ಗ್ಯಾಸ್ ಬೆಲೆ: ರೆಡಿಯಾಗಿ ಈಗಲೇ!

ನೈಸರ್ಗಿಕ ಅನಿಲ ಬೆಲೆಯಲ್ಲೂ ಹೆಚ್ಚಳ?! ಅಕ್ಟೋಬರ್‌ನಲ್ಲಿ ಅಡುಗೆ ಅನಿಲ ಬೆಲೆ ಏರಿಕೆ?! ಅಗತ್ಯ ವಸ್ತುಗಳ ಬೆಲೆಯಲ್ಲಿ ಭಾರೀ ಏರಿಕೆ?     
 

Massive 15% natural gas price hike on anvil
Author
Bengaluru, First Published Aug 30, 2018, 7:12 PM IST

ನವದೆಹಲಿ(ಆ.30): ಜಾಗತಿಕ ವಾಣಿಜ್ಯ ಯುದ್ಧದ ಕರಿನೆರಳು ಎಲ್ಲಾ ದೇಶಗಳ ಆರ್ಥಿಕತೆ ಮೇಲೂ ದುಷ್ಪರಿಣಾಮ ಬೀರುತ್ತಿದ್ದು, ಭಾರತದಂತ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಇದರ ಬಿಸಿ ತುಸು ಹೆಚ್ಚೇ ತಟ್ಟಿದೆ.

ಜಾಗತಿಕ ವಾಣಿಜ್ಯ ಯುದ್ಧದಿಂದಾಗಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಈಗಾಗಲೇ ತೈಲದರ ಗಗನಕ್ಕೇರಿದ್ದು, ಅಗತ್ಯ ವಸ್ತುಗಳ ಬೆಲೆ ಕೂಡ ಆಕಾಶ ಚುಂಬಿಸಲಿವೆ ಎಂಬ ಆತಂಕ ಎದುರಾಗಿದೆ.

ಅದರಂತೆ ಕೇಂದ್ರ ಸರ್ಕಾರ ಇದೇ ಅಕ್ಟೋಬರ್ ನಲ್ಲಿ ಗೃಹ ಬಳಕೆ ಇಂಧನದ ಬೆಲೆಯಲ್ಲೂ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ದೇಶೀಯವಾಗಿ ಉತ್ಪಾದಿಸಲಾಗುವ ನೈಸರ್ಗಿಕ ಅನಿಲದ ಮೇಲೆ ಕೇಂದ್ರ ಸರ್ಕಾರ 3.50 ಯುಎಸ್ ಡಾಲರ್ ನಷ್ಟು ಏರಿಕೆ ಮಾಡಿದೆ. ಇದರಿಂದ ಸ್ವಾಭಾವಿಕವಾಗಿ ನೈಸರ್ಗಿಕ ಇಂಧನದ ಬೆಲೆ ಕೂಡ ಹೆಚ್ಚಾಗಲಿದ್ದು, ಗೃಹೋಪಯೋಗಿ ಇಂದನ ಮತ್ತು ಆಟೋ ಎಲ್ ಪಿಜಿ ಬೆಲೆ ಕೂಡ ಏರಿಕೆ ಕಾಣಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

Follow Us:
Download App:
  • android
  • ios