ನವದೆಹಲಿ(ಏ.16): ಕೊರೋನಾ ಲಾಕ್‌ಡೌನ್‌ನಿಂದಾಗಿ ತ್ರಾಸ ಪಡುತ್ತಿರುವ ನಿರ್ಗತಿಕರಿಗೆ ಸಹಾಯ ಮಾಡಲು ಕ್ಯಾಡ್‌ಬರಿ ಚಾಕಲೇಟ್‌ ಹಾಗೂ ಬಿಸ್ಕೆಟ್‌ ಉತ್ಪಾದಿಸುವ ಮೊಂಡೆಲಿಜ್‌ ಫುಡ್ಸ್‌ ಪ್ರೈವೆಟ್‌ ಲಿಮಿಟೆಡ್‌ ಸಂಸ್ಥೆ 71 ಟನ್‌ ಬಿಸ್ಕೆಟ್‌ ಹಾಗೂ ಚಾಕಲೇಟ್‌ಗಳನ್ನು ಹಂಚಲು ನಿರ್ಧರಿಸಿದೆ.

ಕೊರೋನಾ ಸಮರಕ್ಕೆ 'ಪಾರ್ಲೆ-ಜಿ' ಸಾಥ್: ಬಡವರಿಗೆ ಫ್ರೀ ಬಿಸ್ಕೆಟ್!

ದೇಶದ 12 ನಗರಗಳಲ್ಲಿ 3.6 ಲಕ್ಷ ಬಿಸ್ಕೆಟ್‌ ಪೊಟ್ಟಣ ಹಾಗೂ 23 ಲಕ್ಷ ಚಾಕಲೇಟ್‌ಗಳನ್ನು ಕಂಪನಿ ವಿತರಿಸಲಿದೆ. ಈಗಾಗಲೇ ಮುಂಬೈನಲ್ಲಿ 1 ಲಕ್ಷ ಮಾಸ್ಕ್‌ ಹಾಗೂ 225 ಲೀಟರ್‌ ಸ್ಯಾನಿಟೈಸರ್‌ಗಳನ್ನು ಕಂಪನಿ ವಿತರಿಸಿದೆ.

ಮಹಾರಾಷ್ಟ್ರ, ಆಂಧ್ರಪ್ರದೇಶ, ಹಿಮಾಚಲ ಪ್ರದೇಶಗಳಲ್ಲಿ ಟ್ಯಾಂಗ್‌ ಸೇರಿ ಹಲವು ರಿಲೀಫ್‌ ಕಿಟ್‌ಗಳನ್ನು ನೀಡಿದೆ.