ಬೆಂಗಳೂರು(ಜೂ. 12)   ಈ ಆನ್ ಲೈನ್ ಶಾಪಿಂಗ್ ಒಮ್ಮೊಮ್ಮೆ ಮಜಾ ತಂದಿಟ್ಟುಬಿಟ್ಟುತ್ತದೆ.  ನೀವು ಆರ್ಡರ್ ಮಾಡಿದ್ದೇ ಒಂದು ...ನಿಮ್ಮ ಮನೆಗೆ ಬಂದಿದ್ದೇ ಒಂದು ಆಗಿರಬಹುದು. 

ನಾವು ಸಹ ಅಷ್ಟೆ , ಆರ್ಡರ್ ಮಾಡಿದ ವಸ್ತು ಎಲ್ಲಿದೆ? ಎಷ್ಟು ದಿನಕ್ಕೆ ಬರುತ್ತದೆ ಎಂಬುದನ್ನು ಟ್ರೇಸ್ ಮಾಡುತ್ತಲೆ ಇರುತ್ತೇವೆ.  ಕೆಟ್ಟ ಪ್ರಾಡೆಕ್ಟ್ ಅಥವಾ ಮನಸಿಗೆ ಸಮಾಧಾನ ಇಲ್ಲದ ಪ್ರಾಡಕ್ಟ್ ಬಂದರೆ  ನಮ್ಮ ಸಿಟ್ಟು ನೆತ್ತಿಗೇರುತ್ತದೆ.

ಜೋಶ್ ಸಾಫ್ಟ್ ವೇರ್ ಸಂಸ್ಥಾಪಕ, ನಿರ್ದೇಶಕ ಗೌತಮ್ ರೇಜ್  ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಅವರು ಅಮೆಜಾನ್ ನಲ್ಲಿ 300 ರೂ . ಬೆಲೆಯ ಸ್ಕಿನ್ ಲೋಶನ್ ಒಂದನ್ನು ಆರ್ಡರ್ ಮಾಡಿದ್ದರಂತೆ.  ಆದರೆ ಅದಕ್ಕೆ ಬದಲಾಗಿ ಅವರಿಗೆ ಬಂದಿದ್ದು 19,00 ರೂ. ಬೆಲೆಯ ಬೋಸ್ ಹೆಡ್ ಪೋನ್!

ಅಮೆಜಾನ್ ಮೂಲಕ ಶೀಘ್ರ ಸರಕು ಪಡೆಯುವುದು ಹೇಗೆ

ಬೇರೆಯವರಾದರೆ ಸುಮ್ಮನೆ ಇಟ್ಟುಕೊಂಡುಬಿಡುತ್ತಿದ್ದರೆನೋ, ಆದರೆ ಗೌತಮ್ ಕಸ್ಟಮರ್ ಕೇರ್ ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆದರೆ ಅಮೆಜಾನ್ ಇಂಡಿಯಾ ಅದನ್ನು ನೀವೆ ಇಟ್ಟುಕೊಳ್ಳಿ ಎಂದು ಉದಾರವಾಗಿ ಹೇಳಿದೆ.

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿಯೂ ಭಿನ್ನ ಭಿನ್ನ ಪ್ರತಿಕ್ರಿಯೆ ಬಂದಿದ್ದು ಅಮೆಜಾನ್ ನಲ್ಲಿ ಇಂಥವು ಆಗುತ್ತಲೇ ಇರುತ್ತವೆ ಎಂದು ಕೆಲವರು ಹೇಳಿದ್ದರೆ, ಅವರು ಹೇಗೆ ಆರ್ಡರ್ ಚೆಂಜ್ ಮಾಡಿದರು ಎಂದು ಪ್ರಶ್ನೆ ಮಾಡಿದವರು ಇದ್ದಾರೆ.