ಬೆಂಗಳೂರು:  ಅಮೇಜಾನ್ ನಲ್ಲಿ ಇದೀಗ ನೀವು ಅತ್ಯಂತ ಶೀಘ್ರವಾಗಿ ವಸ್ತುಗಳನ್ನು ಪಡೆದುಕೊಳ್ಳಬಹುದು. ಅಮೆಜಾನ್ ಇದೀಗ ಪ್ರೈಮ್ ಸೇವೆಯೊಂದನ್ನು ಒದಗಿಸುತ್ತಿದ್ದು, ಅದರಲ್ಲಿ ರೀ ಬ್ರಾಂಡ್ ಮಾಡಲಾದ ಅಮೆಜಾನ್ ಪ್ರೈಮ್ ಆಪ್ ಮೂಲಕ ನೀವು ಯಾವುದೇ ಸರಕನ್ನು ಆರ್ಡರ್ ಮಾಡಿ 2 ಗಂಟೆಗಳ ಒಳಗಾಗಿ ಸರಕುಗಳು ನಿಮ್ಮ ಕೈ ಸೇರಲಿವೆ.  

ಎಕ್ಸ್ ಪ್ರೆಸ್ 2 ಗಂಟೆಗಳ ಸರಕು ವಿತರಣೆ ಸೌಲಭ್ಯದ ಮೂಲಕ ಸರಕುಗಳನ್ನು ಒದಗಿಸಲಾಗುತ್ತದೆ. ಪ್ರೈಮ್ ಮೆಂಬರ್ ಗಳು ಮುಂಜಾನೆ 6 ಗಂಟೆಯಿಂದ ಮಧ್ಯರಾತ್ರಿವರೆಗೆ ಈ ಸೌಲಭ್ಯ ಪಡೆಯಬಹುದು. 

ಪ್ರೈಮ್  ಸೇವೆಯು ಕೇವಲ  ಬೆಂಗಳೂರು, ದಿಲ್ಲಿ, ಮುಂಬೈ, ಹೈದ್ರಾಬಾದ್ ನಲ್ಲಿ ವಾಸವಾಗಿರುವ ಗ್ರಾಹಕರು ಮಾತ್ರವೇ ಪಡೆದುಕೊಳ್ಳಲು ಅವಕಾಶ ಒದಗಿಸಲಾಗಿದೆ.  ಪ್ರೈಮ್ ನೌ ಸೇವೆಯ ಅಡಿಯಲ್ಲಿ ಗ್ರಾಹಕರು ಹಣ್ಣು, ತರಕಾರಿ, ದಿನಸಿ, ಮಾಂಸಗಳನ್ನು  ತರಿಸಿಕೊಳ್ಳಬಹುದಾಗಿದೆ.