ತಿಂಗಳಿಗೆ 10 ಸಾವಿರ ಗಳಿಸುತ್ತಿದ್ದವನ ಖಾತೆಯಲ್ಲಿ 2 ಕೋಟಿ ರೂಪಾಯಿ; ಇದು ನಿಮ್ಮ ಸುತ್ತಮುತ್ತವೇ ಇರೋ ಬ್ಯುಸಿನೆಸ್?

ಒಂದು ಕಾಲದಲ್ಲಿ ತಿಂಗಳಿಗೆ ₹10,000 ಸಂಪಾದಿಸುತ್ತಿದ್ದ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಲ್ಲಿ ಈಗ ₹2 ಕೋಟಿ ಇದೆ. ಈ ಕುರಿತಾದ  ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Man Earn  2 Crore Rupees earn in Astro Talk Platform Puneet Gupta Post Viral mrq

ಬೆಂಗಳೂರು: ಎಲ್ಲರಿಗೂ ಸ್ವಂತದ ವ್ಯವಹಾರ ಮಾಡಬೇಕು ಮತ್ತ ಸ್ವಾಭಿಮಾನದಿಂದ ಜೀವನ ನಡೆಸಬೇಕು ಎಂದು ಕನಸು ಕಂಡಿರುತ್ತಾರೆ. ಇತ್ತೀಚೆಗೆ ಲಿಂಕ್ಡ್‌ಇನ್ ಪ್ಲಾಟ್‌ಫಾರಂನಲ್ಲಿ ಪುನೀತ್ ಎಂಬವರ ಪೋಸ್ಟ್  ಸಂಚಲನ ಸೃಷ್ಟಿಸಿದೆ. ಈ ಪೋಸ್ಟ್‌ನಲ್ಲಿ ಬ್ಯಾಂಕ್ ಖಾತೆಯೊಂದರ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಪೋಸ್ಟ್ ಪ್ರಕಾರ, ಆ ಖಾತೆಯಲ್ಲಿರುವ 2 ಕೋಟಿ ರೂಪಾಯಿ  ಇರೋದನ್ನು ಗಮನಿಸಬಹುದು. ಹಾಗೆ  ಒಂದು  ಕಾಲದಲ್ಲಿ ತಿಂಗಳಿಗೆ  10 ಸಾವಿರ ಹಣ  ಸಂಪಾದಿಸುತ್ತಿದ್ದವನ ಖಾತೆಯಲ್ಲಿ ಇದೀಗ 2  ಕೋಟಿ  ರೂಪಾಯಿ ಹಣವಿದೆ ಎಂದು ಬರೆದುಕೊಳ್ಳಲಾಗಿದೆ. ಇಷ್ಟು  ಬೇಗ  ಖಾತೆಗೆ  2  ಕೋಟಿ  ರೂಪಾಯಿ ಹಣ  ತಂದಿರುವ ಬ್ಯುಸಿನೆಸ್ ಯಾವುದು ಎಂಬುದನ್ನು ಸಹ ತಿಳಿಸಲಾಗಿದೆ.

ಭಾರತ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದು, ಇಲ್ಲಿ ಅನೇಕ ಧರ್ಮದವರು ವಾಸಿಸುತ್ತಿದ್ದಾರೆ. ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದು, ಪ್ರತಿಯೊಂದು ಕೆಲಸಕ್ಕೆ ಅದರದ್ದೇ ಆದ  ವಿಧಾನಗಳಿವೆ. ಭಾರತದಲ್ಲಿ ಹುಟ್ಟಿನಿಂದ ಹಿಡಿದು ಸ್ಮಶಾನಕ್ಕೆ ಹೋಗುವರೆಗೂ  ಗಳಿಗೆ ಮುಹೂರ್ತವನ್ನು ನೋಡಲಾಗುತ್ತದೆ. ಈ ಮುಹೂರ್ತವನ್ನು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ. ಈ ರೀತಿಯ ಜಾತಕ, ಭವಿಷ್ಯ ಹೇಳಲು ಅಧ್ಯಯನದ ಅಗತ್ಯವಿರುತ್ತದೆ. ಪ್ರತಿಯೊಂದು ಊರುಗಳಲ್ಲಿ ಶಾಸ್ತ್ರ ಹೇಳುವ ಜನರು ಇರುತ್ತಾರೆ. ಮಹಾನಗರಗಳಲ್ಲಿರುವ ಕೆಲವು  ಜ್ಯೋತಿಷಿಗಳು ತಾವು ಯಾವ ರೀತಿಯಲ್ಲಿ ಪರಿಹಾರ  ಹೇಳುತ್ತೇವೆ ಮತ್ತು ಅದರ ಖಚಿತತೆ ಬಗ್ಗೆ ಭರವಸೆ ನೀಡುತ್ತಾರೆ.

ಕೆಲವು ಖಾಸಗಿ  ವಿಷಯಗಳನ್ನು ಜ್ಯೋತಿಷಿಗಳ ಬಳಿ  ಹೇಳಿಕೊಳ್ಳಲು ಜನರಿಗೆ ಹಿಂದೇಟು ಹಾಕುತ್ತಾರೆ. ಆದ್ರೂ ತಮ್ಮ ಗ್ರಹಗತಿಗಳ ಬಗ್ಗೆ ತಿಳಿದುಕೊಳ್ಳಲು ಕಾಯುತ್ತಿರುತ್ತಾರೆ. ನಮ್ಮ ಖಾಸಗಿ ವಿಷಯಗಳನ್ನು ಹೇಳಿದ್ರೆ ಬ್ಲಾಕ್‌ಮೇಲ್ ಮಾಡಬಹುದು ಎಂಬ ಆತಂಕ ಇರುತ್ತದೆ. ಈ  ವಿಷಯವನ್ನು ಗಮನದಲ್ಲಿಟ್ಟುಕೊಂಡು ರಚನೆಯಾಗಿದ್ದು ಅಸ್ಟ್ರೋಟಾಕ್. ಇದು ಆನ್‌ಲೈನ್ ಮೂಲಕವೇ ತಮ್ಮ ಜ್ಯೋತಿಷ್ಯವನ್ನು ತಿಳಿದುಕೊಳ್ಳುವ ವೇದಿಕೆಯಾಗಿದೆ.

ಇದನ್ನೂ ಓದಿ: ಅಂಬಾನಿಗೆ ನಡುಕ ಹುಟ್ಟಿಸಿದ ವೊಡಾಫೋನ್ ಐಡಿಯಾ; ಫ್ರೀ ಇಂಟರ್‌ನೆಟ್‌ನ ಸೂಪರ್ ಹೀರೋ ಪ್ಲಾನ್ ತಂದ Vi

ಇಲ್ಲಿ ನಿಮ್ಮ ಸಮಸ್ಯೆ  ಬಗ್ಗೆ ಹೇಳಿಕೊಂಡರೆ ಜ್ಯೋತಿಷ್ಯ ಪರಿಹಾರ ನೀಡಲಾಗುತ್ತದೆ. ಜ್ಯೋತಿಷ್ಯ ಕೇಳುವವರ ಖಾಸಗಿ ವಿಷಯಗಳನ್ನು ರಹಸ್ಯವಾಗಿರಿಸಲಾಗುತ್ತದೆ ಎಂದು ಅಸ್ಟ್ರೋ ಟಾಕ್ ಭರವಸೆ ನೀಡುತ್ತದೆ. ಇಂದು ಎಷ್ಟೋ ಜನರು ಅಸ್ಟ್ರೋಟಾಕ್ ಮೂಲಕ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ಅಸ್ಟ್ರೋ ಟಾಕ್ ವೇದಿಕೆಯಲ್ಲಿ ಜ್ಯೋತಿಷ್ಯ ಶಾಸ್ತ್ರ ಹೇಳುವ ಮೂಲಕ ಇಂದು ಅನೇಕರು  ಉದ್ಯೋಗವನ್ನು ಪಡೆದುಕೊಂಡಿದ್ದಾರೆ. ತಿಂಗಳಿಗೆ 10 ಸಾವಿರ  ರೂಪಾಯಿ  ಸಂಪಾದಿಸುತ್ತಿರೋರನ್ನು ಆಸ್ಟ್ರೋಟಾಕ್ ಆರ್ಥಿಕವಾಗಿ ಸುಧಾರಿಸಿದೆ.

https://www.astrotalk.com/ ವೆಬ್‌ಸೈಟ್‌ನಲ್ಲಿ  201 ರಿಂದ 500 ಜನರು ಕೆಲಸ ಮಾಡಿಕೊಂಡಿದ್ದಾರೆ. 217ರಲ್ಲಿ ಆರಂಭವಾದ  ಅಸ್ಟ್ರೋಟಾಕ್, ಜಾತಕ, ಉದ್ಯೋಗ, ವೃತ್ತಿ, ಮದುವೆ, ಜ್ಯೋತಿಷ್ಯ, ಭವಿಷ್ಯ, ಸಮಾಲೋಚನೆ, ಮಾನಸಿಕ ಆರೋಗ್ಯ, ಟ್ಯಾರೋ, ಅತೀಂದ್ರಿಯ, ರಾಶಿಚಕ್ರ ಮತ್ತು ಜ್ಯೋತಿಷಿಯನ್ನು ಹೇಳಲಾಗುತ್ತದೆ. ಇಂದು, ಆಸ್ಟ್ರೋಟಾಕ್ ವೇಗವಾಗಿ ಬೆಳೆಯುತ್ತಿರುವ ಬೂಟ್‌ಸ್ಟ್ರಾಪ್ಡ್ ಸ್ಟಾರ್ಟ್‌ಅಪ್‌ಗಳಲ್ಲಿ ಒಂದಾಗಿದೆ ಮತ್ತು ಜ್ಯೋತಿಷ್ಯ ಕ್ಷೇತ್ರದಲ್ಲಿ ಅತಿದೊಡ್ಡ ಕಂಪನಿಯಾಗಿದೆ. ಇದುವರೆಗೂ 3 ಕೋಟಿಗೂ ಹೆಚ್ಚು ಗ್ರಾಹಕರಿಗೆ ಸೇವೆ ಸಲ್ಲಿಸಿದೆ  ಎಂದು ಆಸ್ಟ್ರೋಟಾಕ್ ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದೆ.ಈ ಪೋಸ್ಟ್ ಹಂಚಿಕೊಂಡಿರುವ ಪುನೀತ್ ಅವರೇ ಅಸ್ಟ್ರೋಟಾಕ್ ನ ಸಿಇಓ ಆಗಿದ್ದಾರೆ.

ಇದನ್ನೂ ಓದಿ:ಯಾವುದೇ ಡಿಗ್ರಿ ಬೇಡ, ಮನೆಯಂಗಳದಲ್ಲಿಯೇ ವ್ಯವಹಾರ ಆರಂಭಿಸಿ, ವಾರಕ್ಕೆ ₹9 ಸಾವಿರ ಲಾಭ ಸಂಪಾದಿಸಿ

Latest Videos
Follow Us:
Download App:
  • android
  • ios