ಬಹುಶಃ ವಾಟಾಳ್ ನಾಗರಾಜ್ ಐಡಿಯಾ ಕೊಟ್ಟಿರ್ಬೇಕು, ಪೆಟ್ರೋಲ್ ಬೆಲೆ ಹೆಚ್ಚಾಯ್ತು ಅಂತ ಎಮ್ಮೆ ಏರಿದ ಯುವಕ!
ಜನ ಫೇಮಸ್ ಆಗಲು ಏನೆಲ್ಲ ಮಾಡ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಲೈಕ್ಸ್, ಫಾಲೋವರ್ಸ್ ಹೊಂದಲು ಈತ ಮಾಡಿದ ಕೆಲಸ ಅಚ್ಚರಿ ಹುಟ್ಟಿಸುತ್ತದೆ. ಕುದುರೆ, ಒಂಟೆ ಸವಾರಿ ಬದಲು ಈತ ಎಮ್ಮೆ ಆಯ್ದುಕೊಂಡಿದ್ದಾನೆ.
ಜನರಿಗೆ ಅತ್ಯಂತ ಹೆಚ್ಚು ಮನರಂಜನೆ ನೀಡುತ್ತಿರುವ ಜಾಗವೆಂದ್ರೆ ಅದು ಸಾಮಾಜಿಕ ಜಾಲತಾಣ. ಇಲ್ಲಿ ಪ್ರಸಿದ್ಧಿ ಪಡೆಯಲು ಜನರು ನಾನಾ ವಿಧಾನಗಳನ್ನು ಅಳವಡಿಸಿಕೊಳ್ತಿದ್ದಾರೆ. ಕೆಲವರು ತಮಾಷೆ ವಿಡಿಯೋ ಹಾಕಿದ್ರೆ ಮತ್ತೆ ಕೆಲವರು ಗಂಭೀರ ವಿಷ್ಯವನ್ನು ಹಂಚಿಕೊಳ್ತಾರೆ. ಮತ್ತೆ ಕೆಲವರು ಸಾಮಾಜಿಕ ಜಾಲತಾಣದ ಮೂಲಕ ಬ್ಯುಸಿನೆಸ್ ಸ್ಟೋರಿಗಳನ್ನು ಹಾಕಿ ಹಣಗಳಿಸ್ತಿದ್ದಾರೆ. ಹಣ ಸಂಪಾದನೆಗೆ, ಒಂದೇ ದಿನ ಪ್ರಸಿದ್ಧಿಪಡೆಯಲು ಅತ್ಯಂತ ಉತ್ತಮ ಸ್ಥಳವೆಂದ್ರೆ ಅದು ಸಾಮಾಜಿಕ ಜಾಲತಾಣ.
ಪ್ರತಿ ದಿನ ನೂರಾರು ಹೊಸ ಹೊಸ ವಿಡಿಯೋ (Video) ಗಳು ಬರ್ತಿರುತ್ತವೆ. ಅದ್ರಲ್ಲಿ ಕೆಲವೊಂದು ಹೀಗೂ ಇದ್ಯಾ ಎಂಬ ಪ್ರಶ್ನೆ ಮೂಡಿಸುತ್ತದೆ. ಇನ್ನು ಕೆಲವು ಹೊಟ್ಟೆ ಹುಣ್ಣಾಗಿಸುತ್ತವೆ. ನಮ್ಮ ದೇಶದಲ್ಲಿ ಸದ್ಯ ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿದೆ. ಹಣದುಬ್ಬರದಿಂದಾಗಿ ಜನರು ನಾನಾ ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನು ಕೂಡ ಜನರು ತಮಾಷೆಯಾಗಿ ತೆಗೆದುಕೊಂಡು ಕೆಲ ವಿಡಿಯೋಗಳನ್ನು ಪೋಸ್ಟ್ ಮಾಡ್ತಿದ್ದಾರೆ. ಪೆಟ್ರೋಲ್ (Petrol) ಹಾಗೂ ಡಿಸೇಲ್ ಬೆಲೆ ಏರಿಕೆ ಜನರ ಟ್ರೆಂಡಿಂಗ್ ವಿಷ್ಯ ಅಂದ್ರೆ ತಪ್ಪಾಗೋದಿಲ್ಲ.
ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿತ್ತಿರುವ ಕಾರಣ ಸ್ವಂತ ವಾಹನ ಚಲಾಯಿಸೋದು ಕಷ್ಟವಾಗಿದೆ. ಜೇಬಿನಲ್ಲಿ ಹಣವಿದ್ರೆ ಮಾತ್ರ ಕಾರ್, ಬೈಕ್ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ರಸ್ತೆ ಮೇಲೆ ಭಿನ್ನವಾಗಿ ಕಾಣಿಸಿಕೊಂಡಿದ್ದಾನೆ.
ಜಿಯೋ ಮಾಲ್‌ನಲ್ಲಿ ಅಂತಾರಾಷ್ಟ್ರೀಯ ಫ್ಯಾಷನ್ ಬ್ರ್ಯಾಂಡ್; ಬರೀ ಬಾಡಿಗೆಯಿಂದ್ಲೇ ಅಂಬಾನಿ ಗಳಿಸ್ತಿರೋದು ಇಷ್ಟೊಂದಾ?
ಎಮ್ಮೆ (Buffalo) ಮೇಲೆ ಬಂದ ವ್ಯಕ್ತಿ : ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ನೋಡಿದ್ರೆ ನೀವು ಅಚ್ಚರಿಗೊಳ್ತಿರ. ವ್ಯಕ್ತಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಆಗಿರುವ ಕಾರಣ ವಾಹನ ಬಿಟ್ಟು ಎಮ್ಮೆಯನ್ನು ಆಯ್ಕೆ ಮಾಡಿಕೊಂಡಿದ್ದಾನೆ. ಎಮ್ಮೆ ಮೇಲೆ ಕುಳಿತು ಆತ ಬರ್ತಿರುವ ವಿಡಿಯೋ ಸದ್ಯ ಸದ್ದು ಮಾಡ್ತಿದೆ.
bull_rider_077 ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಪೆಟ್ರೋಲ್ ಬೆಲೆ ತೋರಿಸಲಾಗಿದೆ ಎಂದು ಶೀರ್ಷಿಕೆ ಹಾಕಲಾಗಿದೆ. ವೈರಲ್ ವಿಡಿಯೋದಲ್ಲಿ ಜನನಿಬಿಡ ಪ್ರದೇಶದಲ್ಲಿ ಎಮ್ಮೆಯೊಂದನ್ನು ನೀವು ನೋಡ್ಬಹುದು. ಎಮ್ಮೆ ಮೇಲೆ ವ್ಯಕ್ತಿಯೊಬ್ಬ ಕುಳಿತಿದ್ದಾನೆ. ಆತ ಮೊಲದ ಮುಖವುಳ್ಳ ಹೆಲ್ಮೆಟ್ ಧರಿಸಿದ್ದಾನೆ. ಆತ ರಸ್ತೆ ಮೇಲೆ ಹೋಗ್ತಿದ್ದರೆ ಜನರೆಲ್ಲ ಆತನನ್ನೇ ನೋಡ್ತಿದ್ದಾರೆ. ಅನೇಕರು ವಿಡಿಯೋ ಮಾಡಿಕೊಳ್ತಿದ್ದಾರೆ. ಈ ವ್ಯಕ್ತಿಯ ಇನ್ಸ್ಟಾ ಖಾತೆಯಲ್ಲಿ ನೀವು ಅನೇಕ ವಿಡಿಯೋಗಳನ್ನು ನೋಡಬಹುದು. ಈತ ಹರ್ಯಾಣದ ವ್ಯಕ್ತಿ ಎನ್ನಲಾಗಿದೆ. ಪ್ರತಿ ದಿನ ಎಮ್ಮೆ ಮೇಲೆ ಓಡಾಡುವ ವ್ಯಕ್ತಿ ಜನರ ಗಮನ ಸೆಳೆದಿದ್ದಾನೆ. ಕೆಲ ದಿನಗಳ ಹಿಂದಷ್ಟೆ ಯುಟ್ಯೂಬ್ ನಲ್ಲಿ ಸಾವಿರ ಫಾಲೋವರ್ಸ್ ಪಡೆದು ಅದನ್ನು ಕೂಡ ಎಮ್ಮೆ ಮೇಲೆ ಕುಳಿತೇ ಸಂಭ್ರಮಿಸಿದ್ದಾನೆ.
ಈ ರಾಜಕುಮಾರ ವಿಶ್ವದ ಅತ್ಯಂತ ಸೆಕ್ಸಿಯಸ್ಟ್ ಬೋಳು ತಲೆ ಮನುಷ್ಯ; ಟಾಪ್ 10 ರಲ್ಲಿ ಯಾರ್ಯಾರಿದ್ದಾರೆ?
ಸಾಮಾಜಿಕ ಜಾಲತಾಣದಲ್ಲಿ (Social Media) ಈತನ ವಿಡಿಯೋಗಳು ವೇಗವಾಗಿ ವೈರಲ್ ಆಗ್ತಿವೆ. ಅನೇಕರು ಇದಕ್ಕೆ ಕಮೆಂಟ್ ಮಾಡ್ತಿದ್ದಾರೆ. ಪೆಟ್ರೋಲ್ – ಡಿಸೇಲ್ ಹಾಕೋದಕ್ಕಿಂತ ಎಮ್ಮೆ ಸವಾರಿ ಬಹಳ ದುಬಾರಿ ಎಂದು ಒಬ್ಬರು ಬರೆದಿದ್ದಾರೆ. ದಾರಿ ಮಧ್ಯೆ ಕೋಣ ಸಿಕ್ಕಿದ್ರೆ ಈತ ಅದು ಎಲ್ಲಿಗೆ ಹೋಗುತ್ತೆ ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು ದಯವಿಟ್ಟು ಅದಕ್ಕೆ ಡೈಪರ್ ಅಥವಾ ಅಂಡರ್ವೇರ್ ಹಾಕಿ ಎಂದು ಬರೆದಿದ್ದಾರೆ.
ಒಟ್ಟಿನಲ್ಲಿ ಎಮ್ಮೆ ಮೇಲೆ ಸವಾರಿ ಮಾಡ್ತಿರುವ ಈ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡ್ತಿದ್ದಾನೆ. ದಾರಿಯಲ್ಲಿ ಹೋಗುವವರಿಗೂ ಸಖತ್ ಮನರಂಜನೆ ನೀಡ್ತಿದ್ದಾನೆ. ಪ್ರಾಣಿ ಪ್ರೇಮಿ ಎಂದು ಈತ ಹ್ಯಾಶ್ಟ್ಯಾಗ್ ಕೂಡ ಕೊಟಿದ್ದಾನೆ. ಎಮ್ಮೆ, ಈತನನ್ನು ಮೈಮೇಲೆ ಕುಳಿಸಿಕೊಂಡು ಜನನಿಬಿಡ ಪ್ರದೇಶದಲ್ಲಿ ಸಾವಧಾನವಾಗಿ ಹೋಗ್ತಿರೋದು ಮಾತ್ರ ಗಮನ ಸೆಳೆಯುತ್ತದೆ.