ನಿಮ್ಮ ಕಂಪನಿ ಷೇರು ಖರೀದಿಸ್ಬೇಕು, 1 ಲಕ್ಷ ಕೊಡಿ ಎಂದು ಆನಂದ್ ಮಹೀಂದ್ರಾಗೆ ಕೇಳಿದ ಭೂಪ!
ಇತ್ತೀಚೆಗೆ ಒಬ್ಬ ವ್ಯಕ್ತಿ ಆನಂದ್ ಮಹೀಂದ್ರಾ ಅವರ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದು, ಸರ್, ನನಗೆ ಮಹೀಂದ್ರಾ ಷೇರುಗಳನ್ನು ಖರೀದಿಸಲು ಒಂದು ಲಕ್ಷ ರೂಪಾಯಿ ಬೇಕು. ಇದಕ್ಕೆ ಪ್ರತಿಕ್ರಿಯೆಯಾಗಿ ಮಹೀಂದ್ರಾ ಹೇಳಿದ ಮಾತುಗಳು ವೈರಲ್ ಆಗಿದೆ.
ನವದೆಹಲಿ (ಡಿ.27): ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯವಾಗಿರುವ ಖ್ಯಾತ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರ ಟ್ವಿಟರ್ ಪೋಸ್ಟ್ ಮತ್ತೆ ವೈರಲ್ ಆಗಿದೆ. ವಿಚಾರವೇನೆಂದರೆ, ಇತ್ತೀಚೆಗೆ ಆನಂದ್ ಮಹೀಂದ್ರಾ, ಉದ್ಯಮಿ ರೋಹಿತ್ ಖಟ್ಟರ್ ಅವರ ಗೋವಾದ ಹೊಸ ರೆಸ್ಟೋರೆಂಟ್ ಅನ್ನು ಹೊಗಳಿ ಪೋಸ್ಟ್ ಮಾಡಿದ್ದರು. ಈ ಬಗ್ಗೆ ಹಲವಾರು ಮಂದಿ ಪ್ರತಿಕ್ರಿಯೆಯನ್ನೂ ನೀಡಿದ್ದರು. ಇದರಲ್ಲಿ ಒಂದು ಕಾಮೆಂಟ್ ಆನಂದ್ ಮಹಿಂದ್ರಾ ಅವರ ಗಮನ ಸೆಳೆದಿದ್ದು ಮಾತ್ರವಲ್ಲದೆ, ಆ ಪೊಸ್ಟ್‌ಗೆ ತಮಾಷೆಯ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.
ಆನಂದ್ ಮಹೀಂದ್ರಾ ಅವರ ಪೋಸ್ಟ್‌ನಲ್ಲಿ, @R41534672 ಟ್ವಿಟರ್ ಐಡಿ ಹೆಸರಿನ ವ್ಯಕ್ತಿಯೊಬ್ಬರು ಬರೆದಿದ್ದಯ, 'ಸರ್, ನನಗೆ ಮಹೀಂದ್ರಾ ಷೇರುಗಳನ್ನು ಖರೀದಿಸಲು ಒಂದು ಲಕ್ಷ ರೂಪಾಯಿ ಕೊಡ್ತೀರಾ?' ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆನಂದ್ ಮಹೀಂದ್ರಾ, 'ಸರ್‌ಜೀ ನಿಮ್ಮದು ಎಂಥಾ ಐಡಿಯಾ.. ನಿಜಕ್ಕೂ ನಿಮ್ಮ ಧೈರ್ಯಕ್ಕೆ ಚಪ್ಪಾಳೆ ತಟ್ಟಲೇಬೇಕು. ಕೇಳೋದ್ರಲ್ಲಿ ತಪ್ಪೇನಿದೆ ಅಲ್ವಾ?' ಎಂದು ಆ ಪೋಸ್ಟ್‌ಗೆ ರಿಪ್ಲೈ ಮಾಡಿದ್ದಾರೆ. ಇದು ತಕ್ಷಣವೇ ವೈರಲ್ ಆಗಿದ್ದು ಜನರೂ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಆ ವ್ಯಕ್ತಿ ನಿಜವಾಗಿಯೂ ಸರಿಯಾದ ಪ್ರಯತ್ನ ಮಾಡಿದ್ದಾರೆ. ಎದುರಾಳಿ ವ್ಯಕ್ತಿಯ ಹೃದಯ ಯಾವಾಗ ಕರಗುತ್ತದೆ ಎನ್ನುವುದು ಅವರಿಗೆ ಗೊತ್ತಿದೆ. ಆ ಕ್ಷಣದಲ್ಲಿ ಅವರು ಹಣ ನೀಡುತ್ತಾರೆ ಎನ್ನುವುದು ಗೊತ್ತಿದೆ ಎಂದು ಹೇಳಿದ್ದಾರೆ. 'ಧೈರ್ಯವನ್ನು ಮೆಚ್ಚಲೇಬೇಕು. ಮಹೀಂದ್ರಾ ಷೇರುಗಳಿಗೆ ಮಹೀಂದ್ರಾದಿಂದ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ' ಎಂದು ಬರೆದ್ದಾರೆ. ನಿಮ್ಮಿಂದಲೇ ಹಣ ಪಡೆದುಕೊಂಡು ನಿಮಗೇ ನೀಡಲು ಈ ವ್ಯಕ್ತಿ ಪ್ರಯತ್ನ ಮಾಡ್ತಿದ್ದಾನೆ ಎಂದು ಇನ್ನೊಬ್ಬರು ಬರೆದಿದ್ದಾರೆ.
ಬಹುಶಃ ಈತ ಬ್ಯುಸ್‌ನೆಸ್ ಕೌಶಲ ತೀರಾ ಹೈಟ್‌ನಲ್ಲಿದೆ ಎಂದು ಬರೆದಿದ್ದರೆ, ಭಾರತದಲ್ಲಿ ಬೇಕಾದಷ್ಟು ಟ್ಯಾಲೆಂಟ್ ಇದೆ ಎನ್ನುವುದು ಇದರಲ್ಲೇ ಗೊತ್ತಾಗುತ್ತಿದೆ ಎಂದು ಹೇಳಿದ್ದಾರೆ. ಸರ್ ನೀವು ನನಗೆ 15 ಲಕ್ಷ ಕೊಡಿ, ನಾನು ಮಹೀಂದ್ರಾ ಥಾರ್‌ಅನ್ನು ಖರೀದಿಸಬೇಕು ಎಂದು ಇನ್ನೊಬ್ಬರು ಬರೆದಿದ್ದಾರೆ.
ಕೆಲ ದಿನಗಳ ಹಿಂದೆ ಆನಂದ್ ಮಹೀಂದ್ರಾ ಚಿಕ್ಕ ಹುಡುಗನೊಬ್ಬನ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದರು. ಇದರಲ್ಲಿ ಹುಡುಗನೊಬ್ಬ ಬರೀ 700 ರೂಪಾಯಿಗೆ ಥಾರ್ ಖರೀದಿಸಬಹುದು ಎಂದು ಹೇಳಿದ್ದು ದಾಖಲಾಗಿತ್ತು. 1.29 ನಿಮಿಷದ ವಿಡಿಯೋ ಇದಾಗಿದ್ದು, ನೋಯ್ಡಾ ಮೂಲದ ಚೀಕು ಯಾದವ್ ಇದರಲ್ಲಿ ತನ್ನ ತಂದೆಯೊಂದಿಗೆ ಮಾತನಾಡತ್ತಿದದ್ದ. ಮಹೀಂದ್ರಾ ಥಾರ್ ಖರೀದಿ ಮಾಡುವ ಆಸೆ ವ್ಯಕ್ತಪಡಿಸಿದ್ದ ಆತ, ತನ್ನಲ್ಲಿರುವ 700 ರೂಪಾಯಿಗಳಿಂದ ಮಹೀಂದ್ರಾ ಥಾರ್ ಹಾಗೂ ಎಕ್ಸ್‌ಯುವಿ 700 ಎರಡನ್ನೂ ಖರೀದಿಸ್ತೇನೆ ಎಂದು ಹೇಳಿದ್ದ.
ಗಾಂಧಿ ಪ್ರತಿಮೆಗೆ ಕೂಲಿಂಗ್ ಗ್ಲಾಸ್ ಹಾಕಿ ಅವಮಾನಿಸಿದ ಎಸ್‌ಎಫ್‌ಐ ನಾಯಕ!
ಈ ವಿಡಿಯೋ ಶೇರ್ ಮಾಡಿ ಬರೆದುಕೊಂಡಿದ್ದ ಆನಂದ್ ಮಹೀಂದ್ರಾ ಹಾಗೇನಾದರೂ ನಾನು 700 ರೂಪಾಯಿಗೆ ಥಾರ್ ಮಾರಾಟ ಮಾಡಿದಲ್ಲಿ ನಾನು ದಿವಾಳಿಯಾಗುತ್ತೇನೆ ಎಂದು ತಮಾಷೆಯಾಗಿ ಬರೆದಿದ್ದರು.
ಶೀಘ್ರದಲ್ಲೇ ಕೆಜಿಗೆ 25ರೂ.ದರದಲ್ಲಿ ಅಕ್ಕಿಲಭ್ಯ;ಭಾರತ್ ರೈಸ್ ಪರಿಚಯಿಸಲು ಕೇಂದ್ರ ಸರ್ಕಾರದ ಸಿದ್ಧತೆ