Asianet Suvarna News Asianet Suvarna News

ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ಮಲಬಾರ್ ಗೋಲ್ಡ್ & ಡೈಮಂಡ್ಸ್‌ನ ನೂತನ ಸ್ಟೋರ್ ಆರಂಭ

ಚಿನ್ನಾಭರಣ ರೀಟೇಲರ್‌ಗಳಲ್ಲಿ ಭಾರಿ ಜನಪ್ರಿಯತೆ ಹಾಗೂ ಬೇಡಿಕೆ ಪಡೆದುಕೊಂಡಿರುವ ಮಲಬಾರ್ ಗೋಲ್ಡ್ ಇದೀಗ ಬೆಂಗಳೂರಿನಲ್ಲಿ ಮತ್ತೊಂದು ಮಳಿಗೆ ಆರಂಭಿಸಿದೆ. ಸರ್ಜಾಪುರದಲ್ಲಿ ನೂತನ ಮಳಿಗೆ ಆರಂಭಗೊಂಡಿದೆ.

Malabar gold and diamonds opens new store on Sarjapur road Bengaluru ckm
Author
First Published Oct 8, 2024, 2:17 PM IST | Last Updated Oct 8, 2024, 2:17 PM IST

ಬೆಂಗಳೂರು(ಅ.08): ಜಾಗತಿಕ ಆಭರಣ ರೀಟೇಲರ್ ಆಗಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ ತನ್ನ ನೂತನ ಶೋರೂಂ ಅನ್ನು ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ಉದ್ಘಾಟನೆ ಮಾಡಿದೆ. ಇದು ಬೆಂಗಳೂರಿನಲ್ಲಿ ಮಲಬಾರ್ ಗೋಲ್ಡ್‌ನ 18ನೇ ಮತ್ತು ಕರ್ನಾಟಕದ 36 ನೇ ಶೋರೂಂ ಆಗಿದೆ. ಅಕ್ಟೋಬರ್ 6 ರಂದು ಭಾನುವಾರ ಈ ಶೋರೂಂ ಅನ್ನು ಖ್ಯಾತ ಚಿತ್ರನಟಿ ಶ್ರೀನಿಧಿ ಶೆಟ್ಟಿ ಅವರು ಅದ್ಧೂರಿಯಾಗಿ ಉದ್ಘಾಟಿಸಿದರು. ಈ ಶುಭ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ & ಡೈಮಂಡ್ಸ್‌ನ ಕರ್ನಾಟಕದ ಪ್ರಾದೇಶಿಕ ಮುಖ್ಯಸ್ಥರಾದ ಫಿಲ್ಟರ್ ಬಾಬು ಮತ್ತು ಸಂಸ್ಥೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಈ ಹೊಸ ಶೋರೂಂ ಉದ್ಘಾಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಲಬಾರ್ ಗ್ರೂಪ್ ಅಧ್ಯಕ್ಷ ಎಂ.ಪಿ.ಅಹ್ಮದ್ ಅವರು, "ಸರ್ಜಾಪುರ ರಸ್ತೆಯಲ್ಲಿ ನೂತನ ಶೋರೂಂ ಆರಂಭಿಸಿರುವುದಕ್ಕೆ ನಮಗೆ ಅತೀವ ಸಂತಸವುಂಟಾಗಿದೆ. ಬೆಂಗಳೂರಿನಲ್ಲಿರುವ ನಮ್ಮ ಗ್ರಾಹಕರಿಗೆ ಅತ್ಯುತ್ಕೃಷ್ಟವಾದ ಚಿನ್ನಾಭರಣಗಳನ್ನು ನೀಡುವ ನಮ್ಮ ಬದ್ಧತೆಯ ಪ್ರತಿಬಿಂಬ ಈ ಹೊಸ ಶೋರೂಂ ಆಗಿದೆ. ಇದೊಂದು ನಮಗೆ ಹೊಸ ಮೈಲಿಗಲ್ಲಾಗಿದ್ದು, ಗ್ರಾಹಕ ಸಮುದಾಯವು ನಮ್ಮ ಮೇಲಿಟ್ಟಿರುವ ವಿಶ್ವಾಸ ಮತ್ತು ಬೆಂಬಲಕ್ಕೆ ತಕ್ಕಂತಹ ಮೌಲ್ಯವನ್ನು ನಾವು ನೀಡಲಿದ್ದೇವೆ. ಇದರ ಜೊತೆಗೆ ಗ್ರಾಹಕರಿಗೆ ಸರಿಸಾಟಿಯಿಲ್ಲದ ಶಾಪಿಂಗ್ ಅನುಭವವನ್ನು ನೀಡುತ್ತೇವೆ' ಎಂದು ಹೇಳಿದರು.

ಈ ಹೊಸ ಶೋರೂಂ ಸರ್ಜಾಪುರ ರಸ್ತೆಯ ಕೈಕೊಂಡ್ರಹಳ್ಳಿಯ ಪೈ ಇಂಟರ್‌ನ್ಯಾಷನಲ್ ಸಮೀಪದ ಪಿಎಲ್‌ಆರ್ ಸೈರ್‌ನಲ್ಲಿ ಆರಂಭವಾಗಿದೆ. ಇಲ್ಲಿ ಮೈನ್ ಡೈಮಂಡ್ ಜ್ಯುವೆಲ್ಲರಿ, ಎರಾ ಅನ್‌ಕಟ್ ಡೈಮಂಡ್ ಜ್ಯುವೆಲ್ಲರಿ, ಡಿವೈನ್ ಹೆರಿಟೇಜ್ ಜ್ಯುವೆಲ್ಲರಿ, ಎಥಿಕ್ ಹ್ಯಾಂಡ್ ಕ್ರಾಪ್ಟಡ್ ಜ್ಯುವೆಲ್ಲರಿ, ಪ್ರೆಸಿಯಾ ಪ್ರೆಸಿಯಸ್ ಜೆಮ್‌ ಸ್ಟೋನ್ ಜ್ಯುವೆಲ್ಲರಿ ಮತ್ತು ವಿರಾಝ್ ರಾಯಲ್ ಪಾಲ್ಕಿ ಜ್ಯುವೆಲ್ಲರಿ ಸೇರಿದಂತೆ ಮಲಬಾರ್‌ನ ಅತ್ಯುತ್ಕೃಷ್ಟವಾದ ಬ್ರಾಂಡ್‌ಗಳ ಸಂಗ್ರಹಗಳಿವೆ. ಗ್ರಾಹಕರು ಬ್ರೆಡಲ್, ಸಾಂಪ್ರದಾಯಿಕ ಮತ್ತು ಸಮಕಾಲೀನ ವಿನ್ಯಾಸಗಳ ಆಕರ್ಷಕ ಆಭರಣಗಳನ್ನು ಇಲ್ಲಿ ಅನ್ವೇಷಣೆ ಮಾಡಬಹುದು ಮತ್ತು ತಮಗಿಷ್ಟವಾದ ಆಭರಣವನ್ನು ಖರೀದಿಸಬಹುದಾಗಿದೆ. ಈ ಎಲ್ಲಾ ಆಭರಣಗಳಿಗೆ ಸಂಸ್ಥೆಯು ಗುಣಮಟ್ಟದ ಭರವಸೆಯನ್ನು ಮತ್ತು ಅತ್ಯುತ್ತಮವಾದ ಮಾರಾಟ-ನಂತರದ ಸೇವೆಗಳ ಖಾತರಿಯನ್ನು ನೀಡುತ್ತದೆ.

ಹಬ್ಬದ ಸೀಸನ್‌ನ ಭಾಗವಾಗಿ ಮಲಬಾರ್ ಗೋಲ್ಡ್ & ಡೈಮಂಡ್ಸ್ 50,000 ರೂಪಾಯಿ ಮೌಲ್ಯದ ಆಭರಣವನ್ನು ಖರೀದಿಸುವ ಗ್ರಾಹಕರಿಗೆ ಆಕರ್ಷಕ ಉಡುಗೊರೆಗಳನ್ನು ನೀಡುತ್ತಿದೆ. ಈ ಮೊತ್ತದ ಅನ್‌ಕಟ್, ಪೋಲ್ಕಿ ಮತ್ತು ಪ್ರೆಶಿಯಸ್ ಜ್ಯುವೆಲ್ಲರಿ ಖರೀದಿಸುವ ಗ್ರಾಹಕರಿಗೆ 200mg ಯಷ್ಟು 300mg ಯಷ್ಟು ಚಿನ್ನದ ನಾಣ್ಯವನ್ನು ಉಚಿತವಾಗಿ ನೀಡಲಿದೆ ಹಾಗೂ ವಜ್ರಾಭರಣಗಳನ್ನು ಖರೀದಿಸುವ ಗ್ರಾಹಕರು 400mg ತೂಕದ ಚಿನ್ನದ ನಾಣ್ಯವನ್ನು ಪಡೆಯಲಿದ್ದಾರೆ. ಇದಲ್ಲದೇ, ಗ್ರಾಹಕರಿಗೆ ಮುಂಗಡ ಬುಕಿಂಗ್ ವ್ಯವಸ್ಥೆಯೂ ಇರಲಿದೆ. ಈಗ ಆಭರಣದ ಮೌಲ್ಯದ ಶೇ.10 ರಷ್ಟನ್ನು ಪಾವತಿಸಿ ತಮ್ಮ ದೀಪಾವಳಿ ಆಭರಣವನ್ನು ಮುಂಗಡವಾಗಿ ಬುಕ್ ಮಾಡಿಕೊಳ್ಳಬಹುದಾಗಿದೆ. ಖರೀದಿ ಸಂದರ್ಭದಲ್ಲಿ ಜಾರಿಯಲ್ಲಿರುವ ಬೆಲೆ ಅಥವಾ ಬುಕ್ ಮಾಡಿದ ದಿನದಲ್ಲಿದ್ದ ದರದಲ್ಲಿ ಯಾವುದು ಕಡಿಮೆ ಇರುತ್ತದೋ ಆ ದರದಲ್ಲಿ ಆಭರಣವನ್ನು ಖರೀದಿಸಲು ಅವಕಾಶವಿರುತ್ತದೆ.

ಗ್ರಾಹಕರಿಗೆ ತನ್ನ ಅನನ್ಯವಾದ ಕೊಡುಗೆಗಳು ಮತ್ತು ಬದ್ಧತೆಯ ಸೇವೆಯನ್ನು ಒದಗಿಸುವ ಮೂಲಕ ಸರ್ಜಾಪುರ ರಸ್ತೆಯ ಸ್ಟೋರ್ ಬೆಂಗಳೂರು ಮತ್ತು ನಗರದ ಹೊರಗಿನ ಆಭರಣ ಪ್ರಿಯರ ನೆಚ್ಚಿನ ತಾಣವಾಗುವತ್ತ ಸಜ್ಜಾಗಿದೆ. ಈ ಸ್ಟೋರ್ ಆರಂಭದ ಮೂಲಕ ಮಲಬಾರ್ ಗೋಲ್ಡ್ & ಡೈಮಂಡ್ಸ್ ಕರ್ನಾಟಕದಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಗಟ್ಟಿಪಡಿಸಿಕೊಂಡಂತಾಗಿದೆ. ಈ ಮೂಲಕ ಈ ಪ್ರದೇಶದಲ್ಲಿ ಅತ್ಯಂತ ವಿಶ್ವಾಸಾರ್ಹ ರೀಟೇಲರ್ ಸ್ಥಾನವನ್ನು ಪುನರುಚ್ಚರಿಸಿದೆ.

ತನ್ನ "ಮಲಬಾರ್ ಭರವಸೆಗಳ" ಮೂಲಕ ಮಲಬಾರ್ ಗೋಲ್ಡ್ & ಡೈಮಂಡ್ಸ್ ಗ್ರಾಹಕರ ತೃಪ್ತಿಗೆ ತನ್ನ ಬದ್ಧತೆಯನ್ನು ವ್ಯಕ್ತಪಡಿಸುತ್ತಿದೆ. ಈ ಭರವಸೆಗಳಲ್ಲಿ ಪ್ರಮುಖವಾಗಿ ಆಭರಣದ ಬೆಲೆಯ ವಿವರದ ಪಟ್ಟಿಯನ್ನು ಪ್ರದರ್ಶಿಸುವ ಮೂಲಕ ಪಾರದರ್ಶಕ ಬೆಲೆ ಪಟ್ಟಿ, ಎಲ್ಲಾ ಜಾಗತಿಕ ಶೋರೂಂಗಳಲ್ಲಿ ಜೀವನಪರ್ಯಂತ ಉಚಿತ ನಿರ್ವಹಣಾ ಸೇವಗಳು, ಹಳೆಯ ಚಿನ್ನ ಮತ್ತು ವಜ್ರಗಳಿಗೆ ಶೇ.100 ರಷ್ಟು ವಿನಿಮಯ ಮೌಲ್ಯವನ್ನು ನೀಡುತ್ತದೆ. ಎಲ್ಲಾ ಆಭರಣಗಳು ಶೇ.100 ರಷ್ಟು ಎಚ್‌ಯುಐಡಿ ಅನುಸರಣೆಗಳನ್ನು ಪಾಲಿಸುವುದನ್ನು ಖಾತರಿಪಡಿಸುತ್ತದೆ. ಇದಕ್ಕೆ ಸಂಪೂರ್ಣ ಪಾರದರ್ಶಕತೆ ಮತ್ತು ಖಚಿತತೆಯನ್ನು ನೀಡುತ್ತದೆ. ಪ್ರಮಾಣೀಕೃತ ವಜ್ರಗಳನ್ನು 28 ಹಂತದ ಗುಣಮಟ್ಟ ಪರೀಕ್ಷೆಗೆ ಒಳಪಡಿಸಲಾಗಿರುತ್ತದೆ ಮತ್ತು ಗ್ರಾಹಕರು ಖರೀದಿಸುವ ಪ್ರತಿಯೊಂದು ಆಭರಣಕ್ಕೂ ಒಂದು ವರ್ಷದವರೆಗೆ ಉಚಿತ ವಿಮೆ ಸೌಲಭ್ಯವನ್ನು ನೀಡಲಾಗುತ್ತದೆ. ಈ ಸೌಲಭ್ಯವನ್ನು ವಿಸ್ತರಣೆ ಮಾಡಿಕೊಳ್ಳಲು ಮತ್ತು ವಾರಂಟಿ ಪಡೆದುಕೊಳ್ಳಲು ಅನುಕೂಲವಾಗುವ ರೀತಿಯಲ್ಲಿ ರೂಪಿಸಲಾಗಿದೆ. ಬ್ರಾಂಡ್ ತನ್ನ ಚಿನ್ನವನ್ನು ಜವಾಬ್ದಾರಿಯುತವಾಗಿ ಅಧಿಕೃತ
ಮೂಲಗಳಿಂದ ಪಡೆಯಲಾಗಿದೆ ಎಂಬುದನ್ನು ಖಾತರಿಪಡಿಸುತ್ತದೆ. ಅದರ ಪೂರೈಕೆ ಜಾಲದುದ್ದಕ್ಕೂ ನೈತಿಕತೆಯನ್ನು ಕಾಪಾಡುವುದನ್ನು ಖಾತರಿಪಡಿಸುತ್ತದೆ.

ಸಾಮಾಜಿಕ ಜವಾಬ್ದಾರಿಗೆ ತನ್ನ ಬದ್ಧತೆಯನ್ನು ಪ್ರದರ್ಶಿಸುತ್ತಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ ತನ್ನ ಒಟ್ಟು ಲಾಭಾಂಶದ ಶೇ.5 ರಷ್ಟು ಹಣವನ್ನು ಪರಿಸರ ರಕ್ಷಣೆ, ಸಾಮಾಜಿಕ ಮತ್ತು ಆಡಳಿತ ಉಪಕ್ರಮಗಳಿಗೆ ಮೀಸಲಿಡುತ್ತಿದೆ. ಆರೋಗ್ಯ, ವಸತಿ, ಶಿಕ್ಷಣ, ಪರಿಸರ ಸುಸ್ಥಿರತೆ ಮತ್ತು ಹಸಿವು ಮುಕ್ತ ಸಮಾಜ ನಿರ್ಮಾಣ, ಮಹಿಳಾ ಸಬಲೀಕರಣದಂತಹ ಕಾರ್ಯಕ್ರಮಗಳಿಗೆ ಈ ಹಣವನ್ನು ವಿನಿಯೋಗಿಸುತ್ತಿದೆ. ಈ ಮೂಲಕ ಜಾವಾಬ್ದಾರಿಯುತ ಮತ್ತು ಸುಸ್ಥಿರ ಜಗತ್ತಿಗೆ ಕೊಡುಗೆ ನೀಡುತ್ತಿದೆ.

Latest Videos
Follow Us:
Download App:
  • android
  • ios