ನಾಸಿಕ್‌(ಸೆ.01); ನಾಸಿಕ್‌ನಲ್ಲಿರುವ ನೋಟು ಮುದ್ರಣ ಘಟಕ (ಸಿಎನ್‌ಪಿ) ಮತ್ತು ಭಾರತೀಯ ಸೆಕ್ಯುರಿಟಿ ಪ್ರೆಸ್‌(ಐಎಸ್‌ಪಿ)ಘಟಕದಲ್ಲಿ ಕಳೆದ ಎರಡು ವಾರಗಳಿಂದ 40 ಉದ್ಯೋಗಿಗಳಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಎರಡೂ ಘಟಕಗಳ ಕಾರ‍್ಯವನ್ನು ಸೋಮವಾರದಿಂದ ನಾಲ್ಕು ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ.

ಈ ನಾಲ್ಕು ದಿನದ ಸ್ಥಗಿತದಿಂದಾಗಿ ಸುಮಾರು 6.8 ಕೋಟಿ ಕರೆನ್ಸಿ ನೋಟುಗಳ ಉತ್ಪಾದನಾ ನಷ್ಟ ಉಂಟಾಗಲಿದೆ. ಭಾನುವಾರದಂದೂ ಕಾರ್ಯನಿರ್ವಹಿಸುವ ಮೂಲಕ ಈ 4 ದಿನಗಳ ಕೆಲಸವನ್ನು ಸರಿದೂಗಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಸಿಕ್‌ ನೋಟು ಮುದ್ರಣ ಘಟಕದಲ್ಲಿ 2300

ಮೂಲಗಳ ಪ್ರಕಾರ ಕಳೆದ 3 ತಿಂಗಳಿಂದ ಸಿಎನ್‌ಪಿ-ಐಎಸ್‌ಪಿಯಲ್ಲಿ ಸುಮಾರು 125 ಉದ್ಯೋಗಿಗಳಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಘಟಕಗಳು ಮತ್ತೆ ಕಾರಾರ‍ಯರಂಭಿಸಿದ ಬಳಿಕ ನಾಸಿಕ್‌ ಮುನ್ಸಿಪಲ್‌ ಕಾರ್ಪೋರೇಶನ್‌ ಎಲ್ಲ ಉದ್ಯೋಗಿಗಳಿಗೂ ಆ್ಯಂಟಿಜನ್‌ ಟೆಸ್ಟ್‌ ಕೈಗೊಳ್ಳಲಿದೆ.

ನೋಟು ಮುದ್ರಣ ಘಟಕ ಹಲವು ವಿಧದ ನೋಟುಗಳೂ ಸೇರಿ 17 ಲಕ್ಷ ಕರೆನ್ಸಿ ನೋಟುಗಳನ್ನು ಮುದ್ರಿಸಿದ್ದರೆ, ಸೆಕ್ಯುರಿಟಿ ಪ್ರೆಸ್‌ ರೆವಿನ್ಯು ಸ್ಟ್ಯಾಂಪ್‌ಗಳು, ಸ್ಟ್ಯಾಂಪ್‌ ಪೇಪರ್‌, ಪಾಸ್‌ಪೋರ್ಟ್‌ ಮತ್ತು ವೀಸಾಗಳನ್ನು ಮುದ್ರಿಸುತ್ತದೆ. ನೋಟು ಮುದ್ರಣ ಘಟಕದಲ್ಲಿ 2300 ಖಾಯಂ ಉದ್ಯೋಗಿಗಳು, ಸೆಕ್ಯುರಿಟಿ ಪ್ರೆಸ್‌ನಲ್ಲಿ 1700 ಖಾಯಂ ಉದ್ಯೋಗಿಗಳಿದ್ದಾರೆ.