ಇಂಧೋರ್(ಜ.30): ಮಹತ್ವದ ಬೆಳವಣಿಗೆಯೊಂದರಲ್ಲಿ ನಿರುದ್ಯೋಗಿಗಳಿಗೆ ಮಾಸಿಕ ಐದು ಸಾವಿರ ರೂ. ವೇತನ ಘೋಷಣೆ ಮಾಡಿ ಮಧ್ಯಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ.

ಯುವ ಸ್ವಾಭಿಮಾನ್ ಯೋಜನೆಯಡಿಯಲ್ಲಿ ನಿರುದ್ಯೋಗಿಗಳಿಗೆ ಮಾಸಿಕ ತಲಾ ಐದು ಸಾವಿರ ರೂ. ವೇತನ ನೀಡುವುದಾಗಿ ಮುಖ್ಯಮಂತ್ರಿ ಕಮಲನಾಥ್ ಘೋಷಿಸಿದ್ದಾರೆ.

ನಿರುದ್ಯೋಗಿಗಳ ಪರ ಕಾಂಗ್ರೆಸ್‌ ಮಿಸ್ಡ್‌ ಕಾಲ್‌ ಅಭಿಯಾನ!

ಅಲ್ಲದೇ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಈ ಹಿಂದೆ ಇದ್ದ 100 ದಿನಗಳ ಕೆಲಸದ ಅವಧಿಯನ್ನು 365(ಒಂದು ವರ್ಷ)ದಿನಗಳಿಗೆ ಏರಿಕೆ ಮಾಡಲಾಗಿದೆ.

ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನಿರುದ್ಯೋಗಿಗಳಿಗೆ ಮಾಸಿಕ ನಾಲ್ಕು ಸಾವಿರ ರೂ. ಹಾಗೂ 100 ದಿನಗಳ ಉದ್ಯೋಗ ಖಾತ್ರಿಯ ಭರವಸೆ ನೀಡಲಾಗಿತ್ತು.

ಇದೀಗ ಈ ಯೋಜನೆಯನನು ವಿಸ್ತರಿಸುವ ಮಧ್ಯಪ್ರದೇಶ ಸರ್ಕಾರ, ಮಾಸಿಕ ಐದು ಸಾವಿರ ರೂ. ಹಾಗೂ 365 ದಿನಗಳ ಉದ್ಯೋಗ ಖಾತ್ರಿಯ ಘೋಷಣೆಯನ್ನು ಪ್ರಕಟಿಸಿದೆ.

ಅರ್ಧದಷ್ಟು ಭಾರತೀಯರಿಗೆ ನಿರುದ್ಯೋಗದ್ದೇ ಚಿಂತೆ: ಸಮೀಕ್ಷೆ

ಹೊಸ ಆದೇಶ ಫೆ.01ರಿಂದ ಜಾರಿಗೆ ಬರಲಿದೆ ಎಂದು ಸಿಎಂ ಕಮಲನಾಥ್ ಸ್ಪಷ್ಟಪಡಿಸಿದ್ದಾರೆ.