Asianet Suvarna News Asianet Suvarna News

Business News : ಮುಂಬೈನಲ್ಲಿ ದುಬಾರಿ ಮನೆಗಳ ಮಾರಾಟದಲ್ಲಿ ಬಂಪರ್ ಜಂಪ್

ವಾಣಿಜ್ಯ ನಗರಿ ಮುಂಬೈ, ಮನೆ ಖರೀದಿ ವಿಷ್ಯದಲ್ಲಿ ಲಂಡನ್, ದುಬೈಗೆ ಪೈಪೋಟಿ ನೀಡಲು ಸಿದ್ಧವಾಗ್ತಿದೆ. ಮುಂಬೈನಲ್ಲಿ ದುಬಾರಿ ಮನೆಗಳ ಮಾರಾಟ ವೇಗವಾಗಿ ಹೆಚ್ಚಾಗಿದೆ. ಒಂದೇ ವರ್ಷದಲ್ಲಿ ಮನೆಗಳ ಮಾರಾಟ ದ್ವಿಗುಣಗೊಂಡಿದೆ.
 

Luxury Housing Sales In Mumbai Gets Double In 2021
Author
Bangalore, First Published Apr 30, 2022, 5:24 PM IST

ಬೆಂಗಳೂರು (ಏ.30): ಇತ್ತೀಚಿನ ದಿನಗಳಲ್ಲಿ ಸ್ವಂತ ಮನೆ (Home) ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ (Bangalore) ಸ್ವಂತ ಮನೆಗಳಿಗೆ ಬೇಡಿಕೆ (Demand) ಹೆಚ್ಚಾಗಿದೆ. ಇದಕ್ಕೆ ದೇಶ (Country) ದ ಆರ್ಥಿಕ (Economic) ರಾಜಧಾನಿ ಮುಂಬೈ (Mumbai) ಹೊರತಾಗಿಲ್ಲ. ಮುಂಬೈನಲ್ಲಿ ದುಬಾರಿ ಮನೆಗಳನ್ನು ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ ಎಂಬ ವರದಿ (Report) ಹೊರ ಬಿದ್ದಿದೆ. 2021 ರಲ್ಲಿ 10 ಕೋಟಿ (Crores ) ರೂಪಾಯಿಗಿಂತ ಹೆಚ್ಚು ಮೌಲ್ಯದ ದುಬಾರಿ ಮನೆಗಳ ಮಾರಾಟವು 20,255 ಕೋಟಿ ರೂಪಾಯಿಗೆ ದ್ವಿಗುಣಗೊಂಡಿದೆ.

ಗೃಹ ಸಾಲ (Home Loan) ಗಳ ಮೇಲಿನ ಬಡ್ಡಿ ದರಗಳ ಇಳಿಕೆ ಮತ್ತು ದೊಡ್ಡ ಫ್ಲಾಟ್‌ಗಳಿಗೆ ಬೇಡಿಕೆ ಹೆಚ್ಚಾದ ಕಾರಣ ಈ ಬೆಳವಣಿಗೆಯಾಗಿದೆ. ಪಿಟಿಐನ ಸುದ್ದಿ ಪ್ರಕಾರ, ಇಂಡಿಯಾ ಸೋಥೆಬೈಸ್ ಇಂಟರ್ನ್ಯಾಷನಲ್ ರಿಯಾಲ್ಟಿ ಮತ್ತು ಸಿಆರ್ಇ ಮ್ಯಾಟ್ರಿಕ್ಸ್ ನ ಜಂಟಿ ವರದಿಯಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ. ಇದರ ಪ್ರಕಾರ, ಒಂದು ವರ್ಷದ ಹಿಂದೆ 2020 ರಲ್ಲಿ ಮುಂಬೈನಲ್ಲಿ ಹೊಸ ಮನೆಗಳು ಮತ್ತು ಹಳೆಯ ಮನೆಗಳು ಸೇರಿದಂತೆ ಒಟ್ಟು 9,492 ಕೋಟಿ ರೂಪಾಯಿ ದುಬಾರಿ ವಸತಿ ಆಸ್ತಿಗಳನ್ನು ಮಾರಾಟ ಮಾಡಲಾಗಿದೆ.

ಒಟ್ಟು 1,214 ದುಬಾರಿ ವಸತಿಗಳ ಮಾರಾಟ :  ಸುದ್ದಿಯ ಪ್ರಕಾರ, 2021 ರ ಕ್ಯಾಲೆಂಡರ್ ವರ್ಷದಲ್ಲಿ, ಮುಂಬೈನಲ್ಲಿ ಒಟ್ಟು 1,214 ದುಬಾರಿ ವಸತಿ ಘಟಕಗಳು ಮಾರಾಟವಾಗಿವೆ. 2020 ರಲ್ಲಿ ಈ ಸಂಖ್ಯೆ ಕೇವಲ 548 ಆಗಿತ್ತು. ಮುಂಬೈನ ವರ್ಲಿ, ಲೋವರ್ ಪರೇಲ್, ಬಾಂದ್ರಾ, ತಾರ್ಡಿಯೊ, ಪ್ರಭಾದೇವಿ ಮತ್ತು ಅಂಧೇರಿಯಂತಹ ಪ್ರದೇಶಗಳಲ್ಲಿ ದುಬಾರಿ ವಸತಿ ಪ್ರಾಪರ್ಟಿಗಳ ಮಾರಾಟ ಹೆಚ್ಚಾಗಿತ್ತು. ಮುಂಬೈನ ಒಟ್ಟು ಐಷಾರಾಮಿ ವಸತಿ ವಿಭಾಗದಲ್ಲಿ ವರ್ಲಿಯಲ್ಲೇ ಶೇಕಡಾ 20 ರಷ್ಟು ಆಸ್ತಿ ಮಾರಾಟವಾಗಿದೆ. 

ಅಂಕಿಅಂಶಗಳ ಪ್ರಕಾರ, 2021 ರಲ್ಲಿ ಮುಂಬೈನಲ್ಲಿ ಹೊಸ ಮನೆ ಮಾರಾಟದಲ್ಲಿ 848 ಯುನಿಟ್‌ಗಳನ್ನು 13,549 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ. ಒಂದು ವರ್ಷದ ಹಿಂದೆ 349 ಯುನಿಟ್‌ಗಳನ್ನು 6,275 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿತ್ತು. ನಗರದ ಮರು ಮಾರಾಟದ ಮನೆಗಳಲ್ಲಿ 366 ಯೂನಿಟ್‌ಗಳು 6,706 ಕೋಟಿ ರೂಪಾಯಿಗೆ ಮಾರಾಟವಾಗಿದ್ದರೆ, 2020ರಲ್ಲಿ 199 ಯೂನಿಟ್‌ಗಳು 3,217 ಕೋಟಿ ರೂಪಾಯಿಗೆ ಮಾರಾಟವಾಗಿವೆ.

ಮೇ 3ಕ್ಕೆ ಅಕ್ಷಯ ತೃತೀಯ; ನೀವು ಪೇಟಿಎಂ, ಗೂಗಲ್ ಪೇಯಲ್ಲಿ DIGITAL GOLD ಖರೀದಿಸಬಹುದಲ್ವಾ? ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ

ಹೆಚ್ಚಾಗ್ತಿರುವ ಮನೆಗಳ ಮಾರಾಟಕ್ಕೆ ಇದು ಕಾರಣ : ಮುಂಬೈನ ಐಷಾರಾಮಿ ವಸತಿ ಮಾರುಕಟ್ಟೆ ಕಳೆದ ವರ್ಷ ಉತ್ತಮ ಪ್ರದರ್ಶನ ನೀಡಿದೆ ಎಂದು ಇಂಡಿಯಾ ಸೋಥೆಬೈಸ್ ಇಂಟರ್‌ನ್ಯಾಶನಲ್ ರಿಯಾಲ್ಟಿ ಅಧ್ಯಕ್ಷ ಅಶ್ವಿನ್ ಚಡ್ಡಾ ಹೇಳಿದ್ದಾರೆ. ಲಂಡನ್, ನ್ಯೂಯಾರ್ಕ್ ಮತ್ತು ದುಬೈ ಸೇರಿದಂತೆ ವಿಶ್ವದಾದ್ಯಂತ ಐಷಾರಾಮಿ ಮನೆಗಳ ಮಾರಾಟವಾಗ್ತಿರುವ ಮಾದರಿಯಲ್ಲೇ ಮುಂಬೈನಲ್ಲಿ ದುಬಾರಿ ಮನೆಗಳ ಮಾರಾಟವಾಗ್ತಿದೆ. ರಿಯಲ್ ಎಸ್ಟೇಟ್‌ಗೆ ಇದು ಅತ್ಯಂತ ಸಕಾರಾತ್ಮಕ ಆರಂಭ ಎಂದು ಅವರು ಹೇಳಿದ್ದಾರೆ. ಮುಂಬೈನಲ್ಲಿ ದುಬಾರಿ ಬೆಲೆಯ ಮನೆಗಳ ಮಾರಾಟಕ್ಕೆ ಕಾರಣವೆಂದರೆ ಬಿಲ್ಡರ್‌ಗಳಿಂದ ವಿನಾಯಿತಿ ಒಂದು ಕಾರಣವಾದ್ರೆ  ಮಹಾರಾಷ್ಟ್ರ ಸರ್ಕಾರವು ಸ್ಟ್ಯಾಂಪ್ ಡ್ಯೂಟಿಯಲ್ಲಿ ರಿಯಾಯಿತಿ ನೀಡುವುದು ಇನ್ನೊಂದು ಕಾರಣ.

Petrol- Diesel Price Today: ಕರ್ನಾಟಕದ ಜಿಲ್ಲೆಗಳಲ್ಲಿ ಇಂಧನ ದರ ಏರಿಳಿತ: ಇಂದಿನ ಬೆಲೆ ಎಷ್ಟಿದೆ ನೋಡಿ

ಕಳೆದ ಐದಾರು ವರ್ಷಗಳಿಂದ ಬದಲಾಗದ ಬೆಲೆ : ಸಿಆರ್‌ಇ ಮ್ಯಾಟ್ರಿಕ್ಸ್ ನ ಸಿಇಒ ಮತ್ತು ಸಂಸ್ಥಾಪಕ ಅಭಿಷೇಕ್ ಕಿರಣ್ ಗುಪ್ತಾ ಪ್ರಕಾರ, ಕಳೆದ ಐದು-ಆರು ವರ್ಷಗಳಿಂದ ಮನೆಗಳ ಬೆಲೆಗಳಲ್ಲಿ ಅಂಥ ದೊಡ್ಡ ಮಟ್ಟದ ಬದಲಾವಣೆಯಾಗಿಲ್ಲ. ಬೆಲೆಗಳು ಬಹುತೇಕ ಒಂದೇ ರೀತಿಯಲ್ಲಿವೆ ಎಂದಿದ್ದಾರೆ. ಈ ವರ್ಷದ ಜನವರಿ ಮತ್ತು ಮಾರ್ಚ್ ನಡುವೆ ಮುಂಬೈನಲ್ಲಿ 306 ಐಷಾರಾಮಿ ಮನೆಗಳು 4,877 ಕೋಟಿ ರೂಪಾಯಿಗೆ ಮಾರಾಟವಾಗಿದೆ. 

Follow Us:
Download App:
  • android
  • ios