ತಿಂಗಳ ಪ್ರಾರಂಭದಲ್ಲೇ ಜನಸಾಮಾನ್ಯರ ಜೇಬಿಗೆ ಬರೆ; ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಮತ್ತೆ 21ರೂ. ಏರಿಕೆ
ವಾಣಿಜ್ಯ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 21ರೂ. ಹೆಚ್ಚಳ ಮಾಡುವ ಮೂಲಕ ಸರ್ಕಾರ ಈ ತಿಂಗಳು ಕೂಡ ಗ್ರಾಹಕರಿಗೆ ಶಾಕ್ ನೀಡಿದೆ.
ನವದೆಹಲಿ (ಡಿ.1): ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಗ್ರಾಹಕರಿಗೆ ಶಾಕ್ ನೀಡಿದೆ.ದೇಶಾದ್ಯಂತ ವಿವಿಧ ಸ್ಥಳಗಳಲ್ಲಿ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿಎಸ್) ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಗಳ ಬೆಲೆಯಲ್ಲಿ 21ರೂ. ಹೆಚ್ಚಳ ಮಾಡಿವೆ. ಈ ಹೆಚ್ಚಳ ಇಂದಿನಿಂದಲೇ (ಡಿ.1) ಜಾರಿಗೆ ಬರಲಿದೆ. ಈ ಮೂಲಕ ಸತತ ಮೂರು ತಿಂಗಳಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳವಾಗಿದೆ. ಈಗಾಗಲೇ ಹೋಟೆಲ್‌ಗಳು ಗ್ರಾಹಕರಿಗೆ ತಿಂಡಿ - ಕಾಫಿಯ ಬೆಲೆ ಹೆಚ್ಚಿಸಿದ್ದು, ವಾಣಿಜ್ಯ ಸಿಲಿಂಡರ್ ಬೆಲೆಯೇರಿಕೆಯಿಂದ ಜನಸಾಮಾನ್ಯರ ಜೇಬಿನ ಮೇಲಿನ ಹೊರೆ ಇನ್ನಷ್ಟು ಹೆಚ್ಚಲಿದೆ. ಆದರೆ, ಅಡುಗೆ ಅನಿಲದ ಬೆಲೆಯಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ. 14.2 ಕೆಜಿ ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ಬೆಲೆ ಈ ಹಿಂದಿನಂತೆ 903ರೂ. ಇದೆ.
ಇನ್ನು ಈ ಬೆಲೆ ಏರಿಕೆಯ ನಂತರ, ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 1796.50 ರೂ. ಆಗಿದೆ. ಇತರ ಪ್ರಮುಖ ನಗರಗಳಲ್ಲಿ, ಅದೇ ಸಿಲಿಂಡರ್‌ಗೆ ಕ್ರಮವಾಗಿ ಕೋಲ್ಕತ್ತಾದಲ್ಲಿ ₹1908, ಮುಂಬೈನಲ್ಲಿ ₹1749, ಬೆಂಗಳೂರಿನಲ್ಲಿ ₹1,904 ಮತ್ತು ಚೆನ್ನೈನಲ್ಲಿ ₹₹1968.50 ಆಗಿದೆ ಎಂದು ವರದಿಯಾಗಿದೆ.
15 ದಿನಗಳ ಹಿಂದಷ್ಟೇ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಪರಿಷ್ಕರಣೆ ಮಾಡಲಾಗಿತ್ತು. ನವೆಂಬರ್ 16 ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 57 ರೂ. ಕಡಿತ ಮಾಡಲಾಗಿತ್ತು.
ಈ ರಾಜ್ಯದಲ್ಲಿ 450 ರೂ. ಗೆ ಸಿಗುತ್ತೆ ಗ್ಯಾಸ್ ಸಿಲಿಂಡರ್: ಬಿಜೆಪಿ ಘೋಷಣೆ
ಜೆಟ್ ಇಂಧನ ಬೆಲೆ ಇಳಿಕೆ
ಇದರ ಹೊರತಾಗಿ ಜೆಟ್ ಇಂಧನ ಅಥವಾ ಎಟಿಎಫ್ ಬೆಲೆಯಲ್ಲಿ ಶೇ.4.6ರಷ್ಟು ಇಳಿಕೆ ಮಾಡಲಾಗಿದೆ. ಇದು ಈ ತಿಂಗಳಲ್ಲಿ ಎರಡನೇ ಕಡಿತವಾಗಿದೆ. ಇನ್ನು ಎಟಿಎಫ್ ಇಂಧನ ಬೆಲೆಯಲ್ಲಿ ಕೂಡ ಇಳಿಕೆ ಮಾಡಲಾಗಿದ್ದು, ಪ್ರತಿ ಕಿಲೋಮೀಟರ್ ಗೆ ₹1,06,155.67ಕ್ಕೆ ಕಡಿತ ಮಾಡಲಾಗಿದೆ.
ಗೃಹಬಳಕೆ ಸಿಲಿಂಡರ್ ಬೆಲೆ ಸ್ಥಿರ
ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳು ಏರಿಕೆ ಕಂಡರೂ, ಪ್ರಾಥಮಿಕವಾಗಿ ಮನೆಗಳಲ್ಲಿ ಅಡುಗೆ ಮಾಡಲು ಬಳಸುವ ಗೃಹಬಳಕೆಯ ಎಲ್‌ಪಿಜಿಯ ಬೆಲೆ ಯಾವುದೇ ವ್ಯತ್ಯಾಸವಾಗಿಲ್ಲ. ಕೋಲ್ಕತ್ತಾದಲ್ಲಿ ಗೃಹ ಬಳಕೆಯ ಸಿಲಿಂಡರ್ 929ಕ್ಕೆ ಲಭ್ಯವಿದೆ. ಮುಂಬೈನಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ₹902.5 ಮತ್ತು ಚೆನ್ನೈನಲ್ಲಿ ₹918.5ಕ್ಕೆ ಮಾರಾಟವಾಗುತ್ತಿದೆ. ಹಾಗೂ, ದೆಹಲಿಯಲ್ಲಿ, 14.2 ಕೆಜಿ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 903 ರೂ. ಆಗಿದೆ.
ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೋರೇಷನ್ (IOC), ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (BPCL) ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಎಚ್ ಪಿಸಿಎಲ್) ಪ್ರತಿ ತಿಂಗಳ ಮೊದಲ ದಿನದಂದು ಅಡುಗೆ ಅನಿಲ ಹಾಗೂ ಎಟಿಎಫ್ ಬೆಲೆಗಳಲ್ಲಿ ಪರಿಷ್ಕರಣೆ ಮಾಡುತ್ತದೆ. ಈ ಹಿಂದಿನ ತಿಂಗಳ ಅಂತಾರಾಷ್ಟ್ರೀಯ ಬೆಲೆಯ ಸರಾಸರಿ ಆಧಾರಿಸಿ ಈ ಬೆಲೆ ಪರಿಷ್ಕರಣೆ ಮಾಡಲಾಗುತ್ತದೆ.
ಅಕ್ಟೋಬರ್ 4 ರಂದು, ಕೇಂದ್ರ ಕ್ಯಾಬಿನೆಟ್ ಅಡುಗೆ ಅನಿಲ ಸಬ್ಸಿಡಿ ಹೆಚ್ಚಿಸಿತ್ತು. ಸರಿಸುಮಾರು 96 ಮಿಲಿಯನ್ ಕಡಿಮೆ ಆದಾಯದ ಕುಟುಂಬಗಳಿಗೆ ಪ್ರತಿ ಸಿಲಿಂಡರ್‌ಗೆ ₹200 ರಿಂದ ₹300 ಕ್ಕೆ ಸಬ್ಸಿಡಿ ಹೆಚ್ಚಿಸಿತು. ಐದು ರಾಜ್ಯಗಳಲ್ಲಿ ಸಮೀಪಿಸುತ್ತಿರುವ ಅಸೆಂಬ್ಲಿ ಚುನಾವಣೆಗಳು ಮತ್ತು ಮುಂದಿನ ವರ್ಷ ಲೋಕಸಭೆ ಚುನಾವಣೆಗೆ ಮುನ್ನ ಈ ನಿರ್ಧಾರ ಜಾರಿಗೆ ಬಂದಿದೆ.
LPG Price:ಉಜ್ವಲ ಯೋಜನೆ ಎಲ್ಪಿಜಿ ಸಬ್ಸಿಡಿ 300ರೂ.ಗೆ ಹೆಚ್ಚಳ; 603ರೂ.ಗೆ ಸಿಗಲಿದೆ ಅಡುಗೆ ಅನಿಲ ಸಿಲಿಂಡರ್
ಹೆಚ್ಚುವರಿ ಸಬ್ಸಿಡಿಗಳನ್ನು ಒದಗಿಸುವ ಸರ್ಕಾರದ ಕ್ರಮವು ಗ್ರಾಮೀಣ ಮಹಿಳೆಯರನ್ನು ಗುರಿಯಾಗಿಸಿಕೊಂಡಿದೆ. ಹೆಚ್ಚುವರಿ 7.5 ಮಿಲಿಯನ್ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ಪ್ರಧಾನ ಮಂತ್ರಿ ಉಜ್ವಲ ಯೋಜನೆ ಯೋಜನೆಯನ್ನು ವಿಸ್ತರಿಸಲು ಯೋಚಿಸಲಾಗಿದೆ. ಈ ವಿಸ್ತರಣೆಯು ಮುಂದಿನ ಮೂರು ವರ್ಷಗಳಲ್ಲಿ ಒಟ್ಟು ಫಲಾನುಭವಿಗಳ ಸಂಖ್ಯೆಯನ್ನು 103.5 ಮಿಲಿಯನ್‌ಗೆ (10 ಕೋಟಿ 35 ಲಕ್ಷ) ಹೆಚ್ಚಿಸಲಿದೆ.