ಇಂದಿನಿಂದ ಜಾರಿಗೆ ಬರುವಂತೆ 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ದರವನ್ನು 171.50 ರೂ ಕಡಿತಗೊಳಿಸಲಾಗಿದೆ. ಆದರೆ, ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಹೊಸದೆಹಲಿ (ಮೇ 1, 2023): ಪ್ರತಿ ತಿಂಗಳು ಒಂದನೇ ತಾರೀಕು ಸಿಲಿಂಡರ್‌ ಬೆಲೆಯಲ್ಲಿ ಏರಿಕೆ - ಇಳಿಕೆಯಾಗುತ್ತದೆ. ಅದೇ ರೀತಿ, ಮೇ 1, 2023 ರ ಸೋಮವಾರ ಸಹ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ವ್ಯತ್ಯಾಸವಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಮತ್ತೆ ಕಡಿತಗೊಳಿಸಿದೆ. ಆದರೆ, ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ವರದಿಗಳ ಪ್ರಕಾರ, ಇಂದಿನಿಂದ ಜಾರಿಗೆ ಬರುವಂತೆ 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ದರವನ್ನು 171.50 ರೂ ಕಡಿತಗೊಳಿಸಲಾಗಿದೆ. ಇದರೊಂದಿಗೆ, ದೆಹಲಿಯಲ್ಲಿ, 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಇಂದಿನಿಂದ 1856.50 ರೂ.ಗೆ ಮಾರಾಟವಾಗಲಿದೆ ಎಂದು ತಿಳಿದುಬಂದಿದೆ. ಇನ್ನು, ಈ ಬೆಲೆ ಇಳಿಕೆಯಿಂದ ಮುಂಬೈನಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್‌ನ ಬೆಲೆ 1,808.50 ರೂ ಆಗಿದ್ದರೆ, ಕೋಲ್ಕತ್ತಾದಲ್ಲಿ 1,960.50 ರೂ. ಚೆನ್ನೈನಲ್ಲಿ 19 ಕೆಜಿ ಎಲ್‌ಪಿಜಿ ಸಿಲಿಂಡರ್ 2,021.50 ರೂ.ಗೆ ಮಾರಾಟವಾಗಲಿದೆ. ಈ ನೂತನ ದರಗಳು ಇಂದಿನಿಂದಲೇ ಜಾರಿಗೆ ಬರಲಿದೆ.

ಇದನ್ನು ಓದಿ: Petrol Diesel Price Today: ಮೇ ಮೊದಲ ದಿನ ಪೆಟ್ರೋಲ್‌, ಡೀಸೆಲ್‌ ಬೆಲೆ ಹೇಗಿದೆ ನೋಡಿ..

Scroll to load tweet…

ಈ ಪರಿಷ್ಕರಣೆಯ ಮೊದಲು, ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಪ್ರಕಾರ ದೆಹಲಿಯಲ್ಲಿ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಕ್ರಮವಾಗಿ 2,028 ರೂ., ಕೋಲ್ಕತ್ತಾದಲ್ಲಿ 2,132 ರೂ., ಮುಂಬೈನಲ್ಲಿ 1,980 ರೂ. ಮತ್ತು ಚೆನ್ನೈನಲ್ಲಿ . 2,192.50 ರೂ. ಗೆ ಮಾರಾಟವಾಗುತ್ತಿತ್ತು. ಪೆಟ್ರೋಲಿಯಂ ಮತ್ತು ತೈಲ ಮಾರುಕಟ್ಟೆ ಕಂಪನಿಗಳು ಏಪ್ರಿಲ್ 1 ರಂದು ಸಹ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ಯೂನಿಟ್‌ಗೆ 91.50 ರೂ. ಕಡಿತಗೊಳಿಸಿತ್ತು. ಈಗ ಮತ್ತೆ 171.50 ರೂ. ಇಳಿಕೆ ಮಾಡಲಾಗಿದೆ. 

ಇನ್ನೊಂದೆಡೆ, ಪೆಟ್ರೋಲಿಯಂ ಮತ್ತು ತೈಲ ಮಾರುಕಟ್ಟೆ ಕಂಪನಿಗಳು ಈ ವರ್ಷ ಮಾರ್ಚ್ 1 ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ಯೂನಿಟ್‌ಗೆ 350.50 ರೂ ಮತ್ತು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ಯೂನಿಟ್‌ಗೆ 50 ರೂ. ಏರಿಕೆ ಮಾಡಿತ್ತು. ಅಲ್ಲದೆ, ಜನವರಿ 1 ರಂದು ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಪ್ರತಿ ಯೂನಿಟ್‌ಗೆ 25 ರೂ. ಏರಿಕೆ ಮಾಡಲಾಗಿತ್ತು.

ಇದನ್ನೂ ಓದಿ: ಎಲ್‌ಪಿಜಿ ಗ್ರಾಹಕರಿಗೆ ಗುಡ್‌ ನ್ಯೂಸ್‌: 92 ರೂ. ಇಳಿಕೆಯಾದ ಸಿಲಿಂಡರ್‌ ಬೆಲೆ

ಇದಕ್ಕೂ ಮುನ್ನ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಕಳೆದ ವರ್ಷ ಸೆಪ್ಟೆಂಬರ್ 1 ರಂದು 91.50 ರೂಪಾಯಿಗಳಷ್ಟು ಕಡಿಮೆ ಮಾಡಲಾಗಿತ್ತು. ಹಾಗೆ, ಆಗಸ್ಟ್ 1, 2022 ರಂದು, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 36 ರೂ.ಗಳಷ್ಟು ಕಡಿಮೆ ಮಾಡಲಾಗಿದೆ. ಅದಕ್ಕೂ ಮೊದಲು, ಜುಲೈ 6 ರಂದು, 19 ಕಿಲೋಗ್ರಾಂಗಳ ವಾಣಿಜ್ಯ ಸಿಲಿಂಡರ್‌ನ ದರವನ್ನು ಪ್ರತಿ ಯೂನಿಟ್‌ಗೆ 8.5 ರೂ. ಇಳಿಕೆ ಮಾಡಲಾಗಿತ್ತು. 

ಇದನ್ನೂ ಓದಿ: ಜನಸಾಮಾನ್ಯರಿಗೆ ಬಿಗ್‌ ಶಾಕ್‌: ಗ್ಯಾಸ್‌ ಸಿಲಿಂಡರ್‌ ದರ 350 ರೂ. ಏರಿಕೆ; ಹೋಟೆಲ್‌ ದರವೂ ಹೆಚ್ಚಾಗುತ್ತಾ..?