ಜನಸಾಮಾನ್ಯರಿಗೆ ಬಿಗ್ ಶಾಕ್: ಗ್ಯಾಸ್ ಸಿಲಿಂಡರ್ ದರ 350 ರೂ. ಏರಿಕೆ; ಹೋಟೆಲ್ ದರವೂ ಹೆಚ್ಚಾಗುತ್ತಾ..?
ಸ್ಥಳೀಯ ತೆರಿಗೆಗಳಿಂದಾಗಿ ದೇಶೀಯ ಅಡುಗೆ ಅನಿಲದ ಬೆಲೆಗಳು ಒಂದು ರಾಜ್ಯದಿಂದ ಇನ್ನೊಂದಕ್ಕೆ ಬದಲಾಗುತ್ತವೆ. ಇಂಧನ ಚಿಲ್ಲರೆ ವ್ಯಾಪಾರಿಗಳು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ತಿಂಗಳ ಆರಂಭದಲ್ಲಿ ಪರಿಷ್ಕರಣೆ ಮಾಡುತ್ತಾರೆ.
ಹೊಸದೆಹಲಿ (ಮಾರ್ಚ್ 1, 2023): ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಮತ್ತೊಂದು ದೊಡ್ಡ ಶಾಕ್ ಕಾದಿದೆ. ಏಕೆಂದರೆ, ಇಂದಿನಿಂದಲೇ ಜಾರಿಗೆ ಬರುವಂತೆ ಗ್ಯಾಸ್ ಸಿಲಿಂಡರ್ ದರದಲ್ಲಿ ಭಾರಿ ಏರಿಕೆಯಾಗಿದೆ. ಹಲವು ತಿಂಗಳುಗಳ ಕಾಲ ಗೃಹಬಳಕೆಯ ಸಿಲಿಂಡರ್ ದರ ಪರಿಷ್ಕರಣೆಯಾಗಿಲ್ಲ. ಆದರೆ, ಇಂದಿನಿಂದ ಅಡುಗೆ ಅನಿಲ ಸಿಲಿಂಡರ್ ದರ ಹೆಚ್ಚಾಗಿದೆ. ಇದರಿಂದ ಜನಸಾಮಾನ್ಯರ ಹೊರೆ ಮತ್ತಷ್ಟು ಹೆಚ್ಚಾಗಲಿದೆ. ಇದರ ಜತೆಗೆ ಹೋಟೆಲ್‌ನಲ್ಲಿ ತಿನ್ನುವವರಿಗೂ ಶಾಕ್ ಆಗಲಿದೆ. ಏಕೆಂದರೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 350.50 ರೂ. ಬೆಲೆ ಏರಿಕೆಯಾಗಿದೆ.
ಹೌದು, ಇಂದಿನಿಂದ ಜಾರಿಗೆ ಬರುವಂತೆ 14.2 ಕೆಜಿ ಗೃಹಬಳಕೆಯ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (Liquified Petroleum Gas) (ಎಲ್‌ಪಿಜಿ) (LPG) ಸಿಲಿಂಡರ್‌ನ (Cylinder)ಬೆಲೆ ₹ 50 ಏರಿಕೆಯಾಗಿದೆ. ಇತ್ತೀಚಿನ ಪರಿಷ್ಕರಣೆಯೊಂದಿಗೆ, ದೆಹಲಿಯಲ್ಲಿ (Delhi) ಇಂದಿನಿಂದ ಗೃಹಬಳಕೆಯ (Domestic) ಸಿಲಿಂಡರ್ ಪ್ರತಿ ಸಿಲಿಂಡರ್‌ಗೆ ₹1103 ವೆಚ್ಚವಾಗಲಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.
ಇದನ್ನು ಓದಿ: ಮಾರ್ಚ್ 1ರಿಂದ ಈ ನಿಯಮಗಳಲ್ಲಿ ಬದಲಾವಣೆ; ಜನಸಾಮಾನ್ಯರ ಜೇಬಿನ ಮೇಲೆ ಹೆಚ್ಚಲಿದೆ ಹೊರೆ
ಅಲ್ಲದೆ, 19 ಕೆಜಿ ವಾಣಿಜ್ಯ (Commercial) ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಸಹ ₹350.50 ಏರಿಕೆಯಾಗಿದೆ. ಈ ಹೆಚ್ಚಳದೊಂದಿಗೆ 19 ಕೆಜಿ ವಾಣಿಜ್ಯ ಸಿಲಿಂಡರ್‌ನ ಬೆಲೆ ದೆಹಲಿಯಲ್ಲಿ ₹2119.50 ಆಗಲಿದೆ. ಹೊಸ ದರಗಳು ಇಂದಿನಿಂದ ಜಾರಿಗೆ ಬರಲಿವೆ. ಕಳೆದ 6 ತಿಂಗಳಿಂದ ಹೃಹ ಬಳಕೆ ಸಿಲಿಂಡರ್ ದರದಲ್ಲಿ ಯಾವುದೇ ವ್ಯತ್ಯಾಸವಾಗಿರಲಿಲ್ಲ. ಆದರೀಗ, ವಾಣಿಜ್ಯ ಬಳಕೆಯ ಸಿಲಿಂಡರ್ ಮಾತ್ರವಲ್ಲ, ಗೃಹ ಬಳಕೆಯ ಸಿಲಿಂಡರ್ ದರವೂ ಹೆಚ್ಚಾಗಿದೆ.
ಹೊಸ ದರಗಳು ಇಂದಿನಿಂದಲೇ ಜಾರಿಗೆ ಬರಲಿದ್ದು, ದೆಹಲಿಯಲ್ಲಿ 14.2 ಕೆ.ಜಿ ಎಲ್‌ಪಿಜಿ ಸಿಲಿಂಡರ್‌ನ ನೂತನ ಪರಿಷ್ಕೃತ ಬೆಲೆ ಇಂದಿನಿಂದ ₹ 1053 ರ ಬದಲು ₹ 1103 ಆಗಿರುತ್ತದೆ. ಮುಂಬೈನಲ್ಲಿ ಈ ಸಿಲಿಂಡರ್ ₹ 1052.50 ರ ಬದಲಿಗೆ ₹ 1102.5 ಕ್ಕೆ ಮಾರಾಟವಾಗಲಿದೆ. ಕೋಲ್ಕತ್ತಾದಲ್ಲಿ ₹1079ರ ಬದಲು ₹1129 ಹಾಗೂ ಚೆನ್ನೈನಲ್ಲಿ ₹1068.50 ರ ಬದಲಿಗೆ ₹1118.5 ರಷ್ಟು ದುಬಾರಿಯಾಗಿದೆ.
ಇದನ್ನೂ ಓದಿ: Bank Holidays:ಮಾರ್ಚ್ ತಿಂಗಳಲ್ಲಿ 12 ದಿನ ಬ್ಯಾಂಕ್ ರಜೆ; ಇಲ್ಲಿದೆ ನೋಡಿ ಆರ್ ಬಿಐ ರಜಾಪಟ್ಟಿ
ಇನ್ನೊಂದೆಡೆ, ಇಂದಿನಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದೆಹಲಿಯಲ್ಲಿ ರೂ. 1769 ಬದಲಿಗೆ ರೂ. 2119.5ಕ್ಕೆ ಲಭ್ಯವಿರುತ್ತದೆ.ಕೋಲ್ಕತ್ತಾದಲ್ಲಿ ರೂ. 1870 ಇದ್ದದ್ದು ಈಗ ರೂ. 2221.5 ಆಗಿದೆ. ಮುಂಬೈನಲ್ಲಿ ಇದರ ಬೆಲೆ ಈಗ ರೂ. 1721 ರಿಂದ ರೂ. 2071.50ಕ್ಕೆ ಏರಿಕೆಯಾಗಿದೆ. ಚೆನ್ನೈನಲ್ಲಿ ರೂ. 1917ಕ್ಕೆ ಸಿಗುತ್ತಿದ್ದ ಸಿಲಿಂಡರ್ ಈಗ ರೂ. 2268ಕ್ಕೆ ಸಿಗಲಿದೆ.
ಸ್ಥಳೀಯ ತೆರಿಗೆಗಳಿಂದಾಗಿ (Taxes) ದೇಶೀಯ ಅಡುಗೆ ಅನಿಲದ ಬೆಲೆಗಳು ಒಂದು ರಾಜ್ಯದಿಂದ ಇನ್ನೊಂದಕ್ಕೆ ಬದಲಾಗುತ್ತವೆ. ಇಂಧನ ಚಿಲ್ಲರೆ ವ್ಯಾಪಾರಿಗಳು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ತಿಂಗಳ ಆರಂಭದಲ್ಲಿ ಪರಿಷ್ಕರಣೆ ಮಾಡುತ್ತಾರೆ.
ಇದನ್ನೂ ಓದಿ: ಆಭರಣ ಕಂಪನಿಗೆ ಬಿಗ್ ಶಾಕ್: ಜೋಯ್ ಅಲುಕ್ಕಾಸ್‌ನ 305 ಕೋಟಿ ರೂ. ಜಪ್ತಿ ಮಾಡಿದ ಇಡಿ
ಪ್ರತಿ ಕುಟುಂಬವು ಒಂದು ವರ್ಷದಲ್ಲಿ ಸಬ್ಸಿಡಿ ದರದಲ್ಲಿ ತಲಾ 14.2 ಕೆಜಿಯ 12 ಸಿಲಿಂಡರ್‌ಗಳಿಗೆ ಅರ್ಹವಾಗಿದೆ. ಅದಕ್ಕಿಂತ ಹೆಚ್ಚಾದರೆ, ಗ್ರಾಹಕರು ಎಲ್‌ಪಿಜಿ ಸಿಲಿಂಡರ್‌ಗಳ ಯಾವುದೇ ಹೆಚ್ಚುವರಿ ಖರೀದಿಗಳನ್ನು ಮಾರುಕಟ್ಟೆ ಬೆಲೆಗೆ ನೀಡಬೇಕಾಗುತ್ತದೆ. ಪಹಲ್ (ಎಲ್‌ಪಿಜಿ ನೇರ ಲಾಭ ವರ್ಗಾವಣೆ) ಯೋಜನೆಯಡಿ, ಗ್ರಾಹಕರು ಸಬ್ಸಿಡಿ ದರದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಪಡೆಯುತ್ತಾರೆ. ಸಬ್ಸಿಡಿಯು ವಿದೇಶಿ ವಿನಿಮಯ ದರಗಳು, ಕಚ್ಚಾ ತೈಲ ಬೆಲೆಗಳಂತಹ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ.