ಎಲ್‌ಪಿಜಿ ದರ ಏರಿಕೆ!: ಎಷ್ಟು? ಇಲ್ಲಿದೆ ಮಾಹಿತಿ
ಸಬ್ಸಿಡಿ ರಹಿತ ಹಾಗೂ ಸಬ್ಸಿಡಿ ಸಹಿತ ಎಲ್‌ಪಿಜಿ ದರ ಮುರನೇ ಬಾರಿ ಏರಿಕೆಯಾಗಿದೆ. ಹಾಗಾದ್ರೆ ಎಷ್ಟು ದರ ಏರಿಕೆಯಾಗಿದೆ? ಇಲ್ಲಿದೆ ವಿವರ
ನವದೆಹಲಿ[ಮೇ.02]: ಕಚ್ಚಾ ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ, ತೈಲ ಕಂಪನಿಗಳು ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು 28 ಪೈಸೆಯಷ್ಟು ಹೆಚ್ಚಿಸಿವೆ.
ಇದೇ ವೇಳೆ ಸಬ್ಸಿಡಿ ರಹಿತ 14.2 ಕೆಜಿ ತೂಕದ ಸಿಲಿಂಸರ್ ಬೆಲೆಯನ್ನು 6 ರು.ನಷ್ಟುಏರಿಸಲಾಗಿದೆ. ಇದರೊಂದಿಗೆ ಕಳೆದ ಐದು ವರ್ಷಗಳಲ್ಲಿ ಸಿಲಿಂಡರ್ ದರ 50ನೇ ಬಾರಿಗೆ ಹೆಚ್ಚಳಗೊಂಡಂತಾಗಲಿದೆ.
2014ರಲ್ಲಿ ಸಬ್ಸಿಡಿ ಸಹಿತಸಿಲಿಂಡರ್ ದರ 414 ರು. ಇತ್ತು. ನಂತರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಇದರ ಬೆಲೆ ಬರೋಬ್ಬರಿ 82 ರು.ನಷ್ಟುಹೆಚ್ಚಳಗೊಂಡಂತಾಗಿದೆ.