ತುಂಬಾ ಓದಿದ್ದೇನೆ ಅಂತ ಹಮ್ಮು ಗಿಮ್ಮು ಬೇಡ; ನಿಮ್ಮೂರಿನಲ್ಲಿಯೇ ಈ 3 ಬ್ಯುಸಿನೆಸ್ ಆರಂಭಿಸಿ, ಕೈ ತುಂಬಾ ಹಣ ಎಣಿಸಿ

ಸರ್ಕಾರಿ ಕೆಲಸ ಸಿಗದೆ, ಸಣ್ಣ ವ್ಯವಹಾರ ಆರಂಭಿಸಲು ಹಿಂಜರಿಯುತ್ತಿದ್ದೀರಾ? ನಿಮ್ಮೂರಿನಲ್ಲಿಯೇ ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದಾದ 3 ಲಾಭದಾಯಕ ಬ್ಯುಸಿನೆಸ್ ಐಡಿಯಾಗಳನ್ನು ತಿಳಿಯಿರಿ.

Low investment with good return top 3 village business idea mrq

ಕೆಲವೊಮ್ಮೆ ಎಷ್ಟೇ ಓದಿದರೂ ಸರ್ಕಾರಿ ಕೆಲಸ ಸಿಗದೇ ಯುವಕರು ಖಾಲಿ ಕುಳಿತಿರುತ್ತಾರೆ. ಸಣ್ಣಪುಟ್ಟ ವ್ಯವಹಾರ ಆರಂಭಿಸಲು ನಾನು ತುಂಬಾ ಓದಿದ್ದೇನೆ ಎಂಬ ಗರ್ವ ಎದುರಾಗುತ್ತದೆ. ಹಾಗಂತ ಇಡೀ ಜೀವನ ಖಾಲಿ ಕುಳಿತುಕೊಳ್ಳಲು ಆಗಲ್ಲ. ಇಂದು ನಾವು ನಿಮಗೆ ನಿಮ್ಮ ಊರಿನಲ್ಲಿಯೇ ಕಡಿಮೆ ಬಂಡವಾಳ ಹೂಡಿಕೆ ಮಾಡಿ ಕೈ ತುಂಬಾ ಆದಾಯ ನೀಡುವ ಬ್ಯುಸಿನೆಸ್ ಐಡಿಯಾ ಬಗ್ಗೆ ಹೇಳುತ್ತಿದ್ದೇವೆ. ಈ ವ್ಯವಹಾರಗಳನ್ನು ಚಿಕ್ಕದಾಗಿ ಆರಂಭಿಸಿ ಭವಿಷ್ಯದಲ್ಲಿ ಹಂತ ಹಂತವಾಗಿ ವಿಸ್ತರಿಸಿಕೊಳ್ಳಬಹುದು. ಈ ವ್ಯವಹಾರ ಆರಂಭಿಸಿದ ಮೊದಲ ದಿನವೇ ಭರಪೂರ ಹಣ ಸಿಗುತ್ತೆ ಅಂತಲ್ಲ. 

ಈ ಮೂರು ವ್ಯವಹಾರಗಳನ್ನು 12 ರಿಂದ 15 ಸಾವಿರ ರೂ ಬಂಡವಾಳದಿಂದ ಸುಲಭವಾಗಿ ಆರಂಭಿಸಬಹುದು. ಬೇರೆಯವರ ಅಡಿಯಲ್ಲಿ, ಊರು ಬಿಟ್ಟು ಹೋಗಲು ಇಷ್ಟಪಡದ ಜನರು ತಾವು ವಾಸಿಸುವ ಪ್ರದೇಶದಲ್ಲಿಯೇ ಈ ಮೂರು ವ್ಯವಹಾರ ಆರಂಭಿಸಬಹುದಾಗಿದೆ. ಈ ಮೂರು ಬ್ಯುಸಿನೆಸ್ ಐಡಿಯಾಗಳು ಯಾವವು ಅಂತ ನೋಡೋಣ ಬನ್ನಿ. 

1.ಫಾಸ್ಟ್‌ಫುಡ್‌ ಬ್ಯುಸಿನೆಸ್: ನಿಮಗೆ ಅಡುಗೆ ಅಥವಾ ಹೋಟೆಲ್ ಉದ್ಯಮದ ಬಗ್ಗೆ ಆಸಕ್ತಿ ಹೊಂದಿದ್ದರೆ ಫಾಸ್ಟ್‌ಫುಡ್ ಬ್ಯುಸಿನೆಸ್ ಆರಂಭಿಸಬಹುದು. ಈ ವ್ಯವಹಾರವನ್ನು ರಸ್ತೆ ಬದಿಯಲ್ಲಿ ನಾಲ್ಕು ಚೇರ್, ಒಂದು ಒಲೆ ಹಾಕಿಕೊಂಡು ತುಂಬಾ ಸರಳವಾಗಿ ಆರಂಭಿಸಬಹುದು. ನಿಮ್ಮ ಅಡುಗೆ ರುಚಿಯೇ ಗ್ರಾಹಕರನ್ನು ಸೆಳೆಯುತ್ತದೆ. ನಂತರ ಹಂತ ಹಂತವಾಗಿ ಒಂದೊಂದೆ ಅಡುಗೆ ಐಟಂ ಸೇರಿಸುತ್ತಾ ವ್ಯಾಪಾರವನ್ನು ವಿಸ್ತರಿಸಿಕೊಳ್ಳಬೇಕು. 

ದೊಡ್ಡ ಕನಸಿನ ಜೊತೆ ಉದ್ಯಮ ಅಂಗಳಕ್ಕೆ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಸಕ್ಸಸ್ ಆದ ನಾಲ್ವರ ಕಥೆ

2.ರೆಡಿಮೇಡ್ ಬಟ್ಟೆ ವ್ಯಾಪಾರ: ಈ ವ್ಯಾಪಾರವನ್ನು ರಸ್ತೆ ಬದಿ ಟೇಬಲ್ ಹಾಕಿಕೊಂಡು ಆರಂಭಿಸಬಹುದು. ನೇರವಾಗಿ ಉತ್ಪಾದಕರಿಂದ ಬಟ್ಟೆ ಖರೀದಿಸಿ ಮಾರಾಟ ಮಾಡೋದರಿಂದ ಲಾಭದ ಪ್ರಮಾಣ ಹೆಚ್ಚಾಗುತ್ತದೆ. ರಸ್ತೆಬದಿ ಮಾರಾಟಗಾರರ ಲಾಭದ ಪ್ರಮಾಣ ಅಧಿಕವಾಗಿರುತ್ತದೆ. ಈ ಬ್ಯುಸಿನೆಸ್‌ನಲ್ಲಿ ಭದ್ರವಾಗಿ ನೆಲೆಯೂರಿದ್ದರೂ ಕೆಲ ವ್ಯಾಪಾರಿಗಳು ಕಟ್ಟಡಗಳಲ್ಲಿ ವ್ಯವಹಾರ ಮಾಡಲು ಮುಂದಾಗಲ್ಲ. ಅಂತಹ ವ್ಯಾಪಾರಿಗಳ ಪ್ರಕಾರ, ಅಂಗಡಿಗಳಿಗಿಂತ ರಸ್ತೆಬದಿ ವ್ಯಾಪಾರವೇ ಹೆಚ್ಚು ಲಾಭದಾಯಕ ಎಂದು ಹೇಳುತ್ತಾರೆ. ಹಾಗಾಗಿ ಯುವಕರು ಈ ವ್ಯವಹಾರವನ್ನು ಸುಲಭವಾಗಿ ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದು. 

3.ಟೀ ವ್ಯಾಪಾರ: ದೇಶದ ಬಹುತೇಕ ಜನರು ಟೀ ಕುಡಿಯುವ ಮೂಲಕ ತಮ್ಮ ದಿನವನ್ನು ಆರಂಭಿಸುತ್ತಾರೆ. ಹಾಗಾಗಿ ಊರಿನಲ್ಲಿ ಸುಂದರವಾದ ಟೀ ಶಾಪ್ ಆರಂಭ ಮಾಡುವ ಮೂಲಕ ವ್ಯವಹಾರ ಆರಂಭಿಸಬಹುದು. ಟೀ ಶಾಪ್ ಆರಂಭ ಮಾಡಲು ಯಾವುದೇ ಅಂಗಡಿ ಅವಶ್ಯಕತೆ ಇಲ್ಲ. ರಸ್ತೆಬದಿ ತಳ್ಳೋ ಗಾಡಿ ತೆಗೆದುಕೊಂಡು ಜನನಿಬಿಡ ಪ್ರದೇಶಗಳಾದ ಮಾರುಕಟ್ಟೆ, ಬಸ್ ನಿಲ್ದಾಣ, ಸರ್ಕಾರಿ ಕಚೇರಿ, ಕಾಲೇಜು ಅಂತಹ ಪ್ರದೇಶದಲ್ಲಿ ಟೀ ಶಾಪ್ ಆರಂಭಿಸಿ ಕೈ ತುಂಬಾ ಹಣ ಸಂಪಾದಿಸಬಹುದು.

ಮನೆಯಲ್ಲಿಯೇ ಕುಳಿತು ಆಗಿ ಲಕ್ಷಾಧಿಪತಿ, ಕೋಟ್ಯಧಿಪತಿ; ಕೆಲವರಿಗೆ ಮಾತ್ರ ಗೊತ್ತಿರೋ ವ್ಯವಹಾರದ್ದು 99% ರಷ್ಟಿದೆ ಸಕ್ಸಸ್ ರೇಟ್

Latest Videos
Follow Us:
Download App:
  • android
  • ios