Asianet Suvarna News Asianet Suvarna News

ದೊಡ್ಡ ಕನಸಿನ ಜೊತೆ ಉದ್ಯಮ ಅಂಗಳಕ್ಕೆ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಸಕ್ಸಸ್ ಆದ ನಾಲ್ವರ ಕಥೆ

ತಮ್ಮ ಜೊತೆಯಲ್ಲಿ ಹಲವರಿಗೆ ಕೆಲಸ ನೀಡುವ ಮೂಲಕ ಉದ್ಯೋಗದಾತರಾಗಿ ಆಗಿದ್ದಾರೆ. ವಿಶೇಷ ಪರಿಕಲ್ಪನೆಯೊಂದಿಗೆ ಭಾರತದ ಮೂಲ ಕಸುಬುಗಳಿಗೆ ಉತ್ತೇಜನ ತುಂಬಿಸುವ ಕೆಲಸವೂ ನಡೆಯುತ್ತಿದೆ.

four small business innovators success story mrq
Author
First Published Jun 29, 2024, 3:55 PM IST

ನವದೆಹಲಿ: ಕಳೆದ ನಾಲ್ಕೈದು ವರ್ಷಗಳಿಂದ ಹೊಸ ಉದ್ದಿಮೆ ಆರಂಭ ದತ್ತ ಯುವ ಪೀಳಿಗೆ ಮುಂದಾಗುತ್ತಿದೆ. ತೀವ್ರ ಸ್ಪರ್ಧೆಯ ಮಾರುಕಟ್ಟೆಯಲ್ಲಿ ವಿಶೇಷ ಮತ್ತು ಹೊಸ ಪರಿಕಲ್ಪನೆಗಳ ಜೊತೆಯಲ್ಲಿ ಯುವ ಸಮುದಾಯ ಮಾರುಕಟ್ಟೆಗೆ ಪ್ರವೇಶಿಸುತ್ತಿದೆ. ಸೀಮಿತ ಅವಕಾಶಗಳನ್ನು ಬಳಸಿಕೊಂಡು ದಿಗ್ಗಜ ಕಂಪನಿಗಳಿಗೆ ಟಕ್ಕರ್ ಕೊಟ್ಟ ತಮ್ಮದೇ ಉದ್ದಿಮೆಯನ್ನು ಸ್ಥಾಪಿಸುವಲ್ಲಿ ಹಲವರು ಯಶಸ್ವಿಯಾಗಿದ್ದಾರೆ. ತಮ್ಮ ಜೊತೆಯಲ್ಲಿ ಹಲವರಿಗೆ ಕೆಲಸ ನೀಡುವ ಮೂಲಕ ಉದ್ಯೋಗದಾತರಾಗಿ ಆಗಿದ್ದಾರೆ. ವಿಶೇಷ ಪರಿಕಲ್ಪನೆಯೊಂದಿಗೆ ಭಾರತದ ಮೂಲ ಕಸುಬುಗಳಿಗೆ ಉತ್ತೇಜನ ತುಂಬಿಸುವ ಕೆಲಸವೂ ನಡೆಯುತ್ತಿದೆ. ಇಂದು ನಾವು ನಿಮಗೆ ಇದೇ ರೀತಿಯ ಹೊಸ ಸಾಹಸಕ್ಕೆ ಕೈ ಹಾಕಿ ಯಶಸ್ವಿಯಾಗಿರುವ ನಾಲ್ವರು ಉದ್ದಿಮೆಗಳ ಕಥೆ ನಿಮ್ಮ ಮುಂದೆ ತಂದಿದ್ದೇವೆ.

ಮೋಹನ್‌ಜೋದೆರೊ (MohanJodero) 
ದೇಶದ ರಾಜಧಾನಿ ದೆಹಲಿಯಲ್ಲಿ ಗತಕಾಲದ ವೈಭವದ ಮಳಿಗೆಯೊಂದಿದೆ. ಇದರ ಹೆಸರು ಮೋಹನ್‌ಜೋದೆರೋ ಆಗಿದ್ದು, 2005ರಲ್ಲಿ ಯಶೋವರ್ಧನ್ ಶರ್ಮಾ ಎಂಬವರು ತಮ್ಮ ಪುಟ್ಟ ಕನಸುಗಳೊಂದಿಗೆ ಇದನ್ನು ಆರಂಭಿಸಿದ್ದರು. ಭಾರತದ ಪುರಾತನ ಕಲೆಯ ಕುಶಲಕರ್ಮಿಗಳನ್ನು ಹುಡುಕಿ, ಅವರ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಸಿ ಉತ್ತಮ ಬೆಲೆಗೆ ಮಾರಾಟ ಮಾಡೋದು ಯಶೋವರ್ಧನ್ ಅವರ ಕನಸು ಆಗಿತ್ತು. ಯಶೋವರ್ಧನ್ ಶರ್ಮಾ ಹಲವು  ಸವಾಲು ಎದುರಿಸಿದ್ದಾರೆ. ನಂತರ ವಾಲ್‌ಮಾರ್ಟ್‌ ವಿಧಿ ಸಹಾಯವೂ ಶರ್ಮಾವರಿಗೆ ದೊರಕಿದೆ. 

ವಾಲ್‌ಮಾರ್ಟ್‌ ವಿಧಿ 2019ರಲ್ಲಿ ಪೂರೈಕೆದಾರರ ಬೆಳವಣಿಗೆಯ ಯೋಜನೆಯನ್ನು ಸ್ವಸ್ತಿ ಜೊತೆ ಪಾಲುದಾರಿಕೆಯಲ್ಲಿ ಆರಂಭಿಸಿತು. MSME ಉಚಿತ ತರಬೇತಿ, ನಿರ್ವಹಣೆ ಮತ್ತು ಡಿಜಿಟಲ್ ತಂತ್ರಜ್ಞಾನದ ಬಳಕೆ ಬಗ್ಗೆ ಟ್ರೈನಿಂಗ್ ನೀಡಲಾಗುತ್ತದೆ. ಈ ಆನ್‌ಲೈನ್ ಪ್ರೋಗ್ರಾಂ ಸಣ್ಣ ಉದ್ದಿಮೆ ಬೆಳವಣಿಗೆ ವಿಷಯಗಳ ಕುರಿತು ತರಬೇತಿ ನೀಡಲಾಗುತ್ತದೆ. ಇದರ ಜೊತೆಯಲ್ಲಿ ದೊಡ್ಡ ಆನ್‌ಲೈನ್ ಮಾರುಕುಟ್ಟೆ ಫ್ಲಿಪ್‌ಕಾರ್ಟ್ ಇದೆ. ಇದುವರೆಗೂ ಭಾರತದಲ್ಲಿ 58 ಸಾವಿರ ಎಂಎಸ್‌ಎಂಇಗಳಿಗೆ ಈ ಯೋಜನೆಯಿಂದ ಸಹಾಯ ಪಡೆದುಕೊಂಡಿದೆ.

ವಾಲ್‌ಮಾರ್ಟ್ ವೃದ್ಧಿ ಕಾರ್ಯಕ್ರಮದ ಬೆಂಬಲದೊಂದಿಗೆ ಮೋಹನ್ ಜೋಡೆರೊ ಇಂದು ವ್ಯಾಪಾರದಲ್ಲಿ 30% ಬೆಳವಣಿಗೆಯನ್ನು ಸಾಧಿಸಿದೆ. ಇಂದು ಶರ್ಮಾ ತಮ್ಮ ಮಳಿಗೆ ಮೂಲಕ ಭಾರತದ ಪರಂಪರೆ ಕಲೆಯನ್ನು ಉಳಿಸಿಕೊಂಡು ಬರುವ ಕೆಲಸ ಮಾಡುತ್ತಿದ್ದಾರೆ.

ಈ ಟ್ರಿಕ್‌ ಬಳಸಿದ್ರೆ ಮಹಿಳೆಯರು ಶ್ರೀಮಂತರಾಗಬಹುದು

ವೈ ನಾಟ್ ಫುಡ್ ಪ್ರೊಡಕ್ಟ್ Y Not Product 

ಕನಕ ದೇಕಾ ಎಂಬವರು 2019ರಲ್ಲಿ ವೈ ನಾಟ್ ಪ್ರೊಡಕ್ಟ್ ಹೆಸರಿನಲ್ಲಿ ಉದ್ದಿಮೆ ವಲಯಕ್ಕೆ ಎಂಟ್ರಿ ಕೊಟ್ಟರು. ಕನಕ ದೇಕಾ ಅವರ ಪ್ರಕಾರ ಇದು ವ್ಯವಹಾರ ಅಲ್ಲ. ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಮಹತ್ವಕಾಂಕ್ಷೆಯ ಯೋಜನೆ. ಊಟದಲ್ಲಿ ಪ್ರಮುಖವಾಗಿ ಉಪ್ಪಿನಕಾಯಿ ಬೇಕೇ ಬೇಕು. ಇದನ್ನೇ ಉದ್ದಿಮೆಯನ್ನಾಗಿ ಮಾಡಿಕೊಂಡ ಕನಕ ದೇಕಾ ಅಸ್ಸಾಂ ಉಪ್ಪಿನಕಾಯಿ ಪರಿಮಳವನ್ನು ದೇಶದ ತುಂಬೆಲ್ಲಾ ಹರಡುವಂತೆ ಮಾಡಿದೆ. ರೈತರಿಂದ ನೇರವಾಗಿ ಉತ್ಪನ್ನಗಳನ್ನು ಖರೀದಿಸಿ, ಸ್ಥಳೀಯ ಮಹಿಳೆಯರಿಂದಲೇ ಉಪ್ಪಿನಕಾಯಿ ಸಿದ್ಧಪಡಿಸಿ ಮಾರಾಟ ಮಾಡುತ್ತಾರೆ. ಇದು ಕೇವಲ ವ್ಯಾಪಾರವಲ್ಲ. ಬದಲಾಗಿ ಇದು ಮಹಿಳಾ  ಸಬಲೀಕರಣ, ಸುಸ್ಥಿರತೆ ಮತ್ತು ಸಮುದಾಯ ಅಭಿವೃದ್ಧಿಯನ್ನು ಸಾಧಿಸುವ ಯೋಜನೆ ಎಂದು ಕನಕ ದೇಕಾ ನಂಬುತ್ತಾರೆ. 

ಬಿಜು ಥರತಿಲ್ ಫಾರ್ಮ್‌ ಜೇನು Biju Thadathil Farm Honey
ಬಿಜು ಥರತಿಲ್ ಫಾರ್ಮ್‌ ಜೇನು ಸಂಸ್ಥಾಪಕರಾದ ಬಿಜು ಕೊರೈಕೊಸೆ ಕೇರಳದ ಕೊಚ್ಚಿ ಮೂಲದರು. ಅರಣ್ಯ ಪ್ರದೇಶದಿಂದ ಬಂದ ಬಿಜು, ಸಾಂಪ್ರದಾಯಿಕ ಜೇನು ಸಾಕಾಣಿಕೆಗೆ ಆಧುನಿಕತೆಯ ಸ್ಪರ್ಶ ನೀಡಿ 1989ರಲ್ಲಿ ಮಾರುಕಟ್ಟೆಗೆ ಪರಿಚಯಿಸಿದವರು. ಇಂದು ಬಿಜು ಜೇನುತುಪ್ಪ ಆಹಾರ ಮಾರುಕಟ್ಟೆಯಲ್ಲಿ ಒಳ್ಳೆಯ ಗುಡ್‌ವಿಲ್ ಹೊಂದಿದೆ. 

ಕಷ್ಟವಿಲ್ಲದ ಕೆಲಸ ಮಾಡಿ 6 ತಿಂಗಳಲ್ಲಿ 58 ಲಕ್ಷ ಗಳಿಸಿದ ಹುಡುಗಿ! ಯಾರು ಬೇಕಾದ್ರೂ ಮಾಡಬಹುದು

ಫನ್‌ಫ್ರೈ Fun fry

ಈ ಕಂಪನಿಯ ಸ್ಥಾಪಕರು ರೀನಾ ಚೌಹಾಣ್. ತಾಯಿಯಾದ ನಂತರ ಈ ಉದ್ದಿಮೆಗೆ ಕಾಲಿಟ್ಟ ರೀನಾ ಇಂದು ಯಶಸ್ಸು ಕಂಡಿದ್ದಾರೆ. ಸೌರ ಚಾಲಿತ ಆಟಿಕೆಗಳ ತಯಾರಿಸುವ ಕಂಪನಿ ಇದಾಗಿದೆ. ಸೌರ ಚಾಲಿತ ಹೊಂದಿರುವ ಕಾರಣ ಈ ಆಟಿಕೆಗಳ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಹೊಂದಿವೆ. ಔರಾಂಗಬಾದ್‌ನಲ್ಲಿ ಸಿದ್ಧವಾಗುವ ಆಟಿಕೆಗಳು ದೇಶದ ಮೂಲೆ ಮೂಲೆಗೂ ತಲುಪುತ್ತಿವೆ.

Latest Videos
Follow Us:
Download App:
  • android
  • ios