ನೂಲಿನ ದರ ಏರಿಕೆ| ರೆಯಾನ್ ಬಟ್ಟೆಗಳನ್ನು ತಯಾರಿಸುವ 30 ಸಾವಿರ ಕೈಮಗ್ಗಗಳು ಸ್ಥಗಿತ| ಈರೋಡ್ ಜವಳಿ ಉತ್ಪನ್ನಗಳಿಗೆ ಭಾರತದಲ್ಲೇ ಅತ್ಯಂತ ಪ್ರಸಿದ್ಧಿ
ಇರೋಡ್(ಡಿ.22): ನೂಲಿನ ದರ ಏರಿಕೆ ಆದ ಹಿನ್ನೆಲೆಯಲ್ಲಿ ರೆಯಾನ್ ಬಟ್ಟೆಗಳನ್ನು ತಯಾರಿಸುವ ಇಲ್ಲಿನ 30 ಸಾವಿರ ಕೈಮಗ್ಗಗಳು ಸೋಮವಾರದಿಂದ ಒಂದು ವಾರಗಳ ಕಾಲ ಸ್ಥಗಿತಗೊಳ್ಳಲಿವೆ.
ಈರೋಡ್ ಜವಳಿ ಉತ್ಪನ್ನಗಳಿಗೆ ಭಾರತದಲ್ಲೇ ಅತ್ಯಂತ ಪ್ರಸಿದ್ಧಿcಪಡೆದಿದ್ದು, ಜಿಲ್ಲೆಯಲ್ಲಿ 50 ಸಾವಿರಕ್ಕೂ ಅಧಿಕ ಕೈಮಗ್ಗಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ಪೈಕಿ ಕಾಳಿಂಗರಾಯನಪಾಳ್ಯಂ, ವೀರಪ್ಪನ್‌ಛತ್ರಂ, ಅಶೋಕ್‌ಪುರಂ ಹಾಗೂ ಇತರ ಸ್ಥಳಗಳಲ್ಲಿ 30 ಸಾವಿರಕ್ಕೂ ಅಧಿಕ ಕೈಮಗ್ಗಗಳು ಇದ್ದು, ದಿನವೊಂದಕ್ಕೆ 24 ಸಾವಿರ ಮೀಟರ್‌ನಷ್ಟುರೆಯಾನ್ ಬಟ್ಟೆಯನ್ನು ಉತ್ಪಾದಿಸುತ್ತಿವೆ.
ಬಟ್ಟೆ ತಯಾರಿಕೆಗೆ ಬಳಸುವ ನೂಲಿನ ಉಂಡೆಗಳ ದರ 26 ರು.ನಷ್ಟು ಹೆಚ್ಚಳವಾಗಿದೆ. ಹೀಗಾಗಿ ಕೈಮಗ್ಗವನ್ನು ಸ್ಥಗಿತಗೊಳಿಸಲಾಗಿದೆ ಎಂದು ಇರೋಡ್ ಜವಳಿ ಸಂಘಟನೆಯ ಅಧ್ಯಕ್ಷ ಸುರೇಶ್ ತಿಳಿಸಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 22, 2020, 1:37 PM IST