02:10 PM (IST) Mar 05

ಕರ್ನಾಟಕ ಬಜೆಟ್ 2020: ಯಾವುದು ಏರಿಕೆ? ಯಾವುದು ಇಳಿಕೆ?

 1 ಗಂಟೆ 40 ನಿಮಿಷದಲ್ಲಿ ರಾಜ್ಯದ ಆಯವ್ಯಯ ಮಂಡಿಸುವ ಮೂಲಕ ಯಡಿಯೂರಪ್ಪ ಅವರು ಇತಿಹಾಸದಲ್ಲಿ ಅತಿ ಕಡಿಮೆ ಅವಧಿಗೆ ಬಜೆಟ್ ಓದಿದ ಸಿಎಂ ಎನ್ನುವ ದಾಖಲೆ ಬರೆದರು. ಒಟ್ಟು 2,37,893 ಕೋಟಿ ರೂ. ಗಾತ್ರದ ರಾಜ್ಯ ಬಜೆಟ್‌ನಿಂದ ಯಾವುದು ಏರಿಕೆ? ಯಾವುದು ಇಳಿಕೆಯಾಗಿದೆ? 

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

02:09 PM (IST) Mar 05

ಕರ್ನಾಟಕ ಬಜೆಟ್ 2020 : ಅಡಕೆ ಬೆಳೆಗಾರರಿಗೆ ಬಂಪರ್

ಕರ್ನಾಟಕ ಬಜೆಟ್ 2020 ರಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಡಕೆ ಬೆಳೆಗಾರರಿಗೆ ಬಂಪರ್ ಕೊಡುಗೆ ನೀಡಿದ್ದಾರೆ. ರೈತರು ಸಾಲದ ಮೇಲಿನ ಬಡ್ಡಿ ಮನ್ನಾ ಪ್ರಯೋಜನ ಪಡೆದುಕೊಳ್ಳಲಿದ್ದಾರೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

02:07 PM (IST) Mar 05

ಇದು ಸ್ಪಷ್ಟತೆ ಇಲ್ಲದ ಬಜೆಟ್: ಖಾದರ್

ಬಜೆಟ್ ಮಂಡನೆ ಬಳಿಕ ಪ್ರತಿಕ್ರಿಯಿಸಿದ ಕಾಂಗ್ರೆಸ್ ಶಾಸಕ ಯು. ಟಿ. ಖಾದರ್ 'ಇದು ಸ್ಪಷ್ಟತೆ ಇಲ್ಲದ ಬಜೆಟ್. ಜನರನ್ನ ಕತ್ತಲಲ್ಲಿ ಇಡುವ ಬಜೆಟ್ ಆಗಿದೆ. ಅನ್ನ ಭಾಗ್ಯದ ಯೋಜನೆ ಕೈಬಿಟ್ಟಿದ್ದಾರೆ. 10 ಕೆಜಿ ಅಥವಾ 7 ಕೆಜಿ ಅನ್ನೋದು ಸ್ಪಷ್ಟ ಪಡಿಸಿಲ್ಲ. ಇದು ಕಾಟಾಚಾರದ ಹಾಗು ಜನವಿರೋಧಿ ಬಜೆಟ್ ಆಗಿದೆ' ಎಂದಿದ್ದಾರೆ


02:05 PM (IST) Mar 05

ಹಳೇ ಮೈಸೂರು ಭಾಗಕ್ಕಿಲ್ಲ ಮನ್ನಣೆ..!

-ಮೈಸೂರು, ಮಂಡ್ಯ ಸೇರಿ ಐದಾರು ಜಿಲ್ಲೆಗೆ ಹಾಕಲಿಲ್ಲ ಮಣೆ

- ಬಜೆಟ್ನಲ್ಲಿ ಯಾವುದೇ ನಿಗದಿತ ದೊಡ್ಡ ಸ್ಕೀಮ್ ಪ್ರಸ್ತಾಪ ಇಲ್ಲ

- ಚಾಮರಾಜನಗರ, ಕೊಡಗು, ತುಮಕೂರು, ಚಿತ್ರದುರ್ಗ

- ಹಾಸನ ಸೇರಿ ಹಲವು ಜಿಲ್ಲೆಗಳಿಗೆ ಬಿಗ್ ಸ್ಕೀಮ್ ಘೋಷಣೆ ಇಲ್ಲ

- ಮೈಸೂರು ಭಾಗದ ಜಿಲ್ಲೆಗಳಿಗೇ ಹೊಸ ಯೋಜನೆ ಇಲ್ಲ

- ಯಡಿಯೂರಪ್ಪ ಬಜೆಟ್ ನಲ್ಲಿ ಪ್ರಾಶಸ್ತ್ಯವನ್ನೇ ನೀಡಿಲ್ವಾ?

- ಮೈಸೂರು ಭಾಗಕ್ಕೆ ಹೇಳಿಕೊಳ್ಳುವ ಯೋಜನೆಗಳೇ ಇಲ್ಲ

01:43 PM (IST) Mar 05

ಆರ್ಥಿಕ ಅಭಿವೃದ್ಧಿಗೆ ಬಜೆಟ್‌ನಲ್ಲೇನು ಕೊಡುಗೆ?

ಆರ್ಥಿಕ ಅಭಿವೃದ್ಧಿಗೆ ಬಜೆಟ್‌ನಲ್ಲೇನು ಕೊಡುಗೆ?

Scroll to load tweet…
Scroll to load tweet…
Scroll to load tweet…
01:40 PM (IST) Mar 05

ಕರ್ನಾಟಕ ಬಜೆಟ್ 2020: ಮಹಿಳೆ-ಮಕ್ಕಳಿಗೂ ಖುಷಿ..!

ರಾಜ್ಯದಲ್ಲಿ ಮೈತ್ರಿ ಸರಕಾರದ ಪತನದ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಗುರುವಾರ (ಮಾ.5) ಮೊದಲ ಬಜೆಟ್‌ನ್ನು ಯಡಿಯೂರಪ್ಪ ಮಂಡಿಸಿದರು. 2020-21ರ ಸಾಲಿನ ರಾಜ್ಯ ಬಜೆಟ್‌ನಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಹಲವು ಯೋಜನೆಗಳನ್ನ ನೀಡಿದ್ದಾರೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

01:38 PM (IST) Mar 05

ಮೀನುಗಾರ ಮಹಿಳೆಯರಿಗೆ ಬೈಕ್ : ಬಜೆಟ್ ನಲ್ಲಿ ಮತ್ತೇನು ಸಿಕ್ತು..?

ಕರ್ನಾಟಕ ಬಜೆಟ್ 2020 ರಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮೀನುಗಾರರ ಸಮುದಾಯಕ್ಕೆ ಈ ಬಾರಿ ಹೆಚ್ಚಿನ ಕೊಡುಗೆಯನ್ನೇ ನೀಡಿದ್ದಾರೆ. ಹಾಗಾದ್ರೆ ಬಜೆಟ್ ನಲ್ಲಿ ಸಿಕ್ಕಿದ್ದೇನು..?

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

01:32 PM (IST) Mar 05

ಕರ್ನಾಟಕ ಬಜೆಟ್ 2020: ವಿಹಂಗಮ ನೋಟ

ಕರ್ನಾಟಕ ಬಜೆಟ್ 2020: ವಿಹಂಗಮ ನೋಟ

01:15 PM (IST) Mar 05

ಅಡಿಕೆ ಬೆಳಗಾರರಿಗೆ ಬಡ್ಡಿ ಬಂಪರ್!

- ಅಡಿಕೆ ಬೆಳಗಾರರಿಗೆ ಬಡ್ಡಿ ಬಂಪರ್

- ಅಡಿಕೆ ಬೆಳೆಗಾರರ ಸಾಲಕ್ಕೆ ಬಡ್ಡಿ ವಿನಾಯಿತಿ

- 2 ಲಕ್ಷದವರೆಗೆ ಸಾಲಕ್ಕೆ ಶೇ.5ರಷ್ಟು ಬಡ್ಡಿ ವಿನಾಯಿತಿ

01:14 PM (IST) Mar 05

ಬಜೆಟ್ ಮಂಡನೆ: ಬಿಎಸ್‌ವೈ ಹೊಸ ದಾಖಲೆ!

2020-21 ನೇ ಸಾಲಿನ ಬಜೆಟ್ ಓದುವ ಮೂಲಕ‌ ಹೊಸ ದಾಖಲೆ ಬರೆದ ಸಿಎಂ ಯಡಿಯೂರಪ್ಪ

* ಅತಿ ಕಡಿಮೆ ಅವಧಿಯಲ್ಲಿ ಬಜೆಟ್ ಓದಿ ಮುಗಿಸಿದ ಸಿಎಂ

* ರಾಜ್ಯದ ಆಯವ್ಯಯ ಇತಿಹಾಸದಲ್ಲಿ ಅತಿ ಕಡಿಮೆ ಅವಧಿಗೆ ಬಜೆಟ್ ಓದುವ ಮೂಲಕ ಯಡಿಯೂರಪ್ಪ ದಾಖಲೆ

* 1 ಗಂಟೆ 40 ನಿಮಿಷ ಬಜೆಟ್ ಓದಿದ ಸಿಎಂ‌...

* 112 ಪುಟಗಳ ಬಜೆಟ್ ಪುಸ್ತಕ

01:11 PM (IST) Mar 05

‘ಚರ್ಮ ಶಿಲ್ಪ' ಎಂಬ ಯಂತ್ರಾಧಾರಿತ ಉತ್ಪಾದನಾ ಘಟಕಗಳ ಸ್ಥಾಪನೆ

* ‘ಚರ್ಮ ಶಿಲ್ಪ' ಎಂಬ ಯಂತ್ರಾಧಾರಿತ ಉತ್ಪಾದನಾ ಘಟಕಗಳ ಸ್ಥಾಪನೆ

* 250 ಚರ್ಮ ಕುಶಲಕರ್ಮಿಗಳಿಗೆ 10 ಲಕ್ಷ ರೂ. ಸಹಾಯಧನ

* ಇದರಲ್ಲಿ 5 ಲಕ್ಷ ರೂ. ಸಬ್ಸಿಡಿ, ಒಟ್ಟು 12.50 ಕೋಟಿ ರೂ. ಮೀಸಲು

01:09 PM (IST) Mar 05

ಕರ್ನಾಟಕ ಅಭಿವೃದ್ಧಿಗೆ ಬಜೆಟ್‌ನಲ್ಲಿ ಮೀಸಲಿಟ್ಟಿದ್ದೇನು?

ಕರ್ನಾಟಕ ಅಭಿವೃದ್ಧಿಗೆ ಬಜೆಟ್‌ನಲ್ಲಿ ಮೀಸಲಿಟ್ಟಿದ್ದೇನು?

Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
01:08 PM (IST) Mar 05

ಕೃಷಿ ಸಾಲದ ಕತೆ ಏನು?

ಕೃಷಿ ಸಾಲದ ಕತೆ ಏನು?

Scroll to load tweet…
01:07 PM (IST) Mar 05

ಮೀನುಗಾರಿಕೆಗೆ ಬಿಎಸ್‌ವೈ ಕೊಡುಗೆ

ಮೀನುಗಾರಿಕೆಗೆ ಬಿಎಸ್‌ವೈ ಕೊಡುಗೆ

Scroll to load tweet…
01:06 PM (IST) Mar 05

ಕರ್ನಾಟಕ ಬಜೆಟ್ 2020: ನಿರೀಕ್ಷೆಯಂತೆ ಅನ್ನದಾತನ ಕೃಷಿ ಕ್ಷೇತ್ರಕ್ಕೆ ಬಂಪರ್ ಕೊಡುಗೆ

ರಾಜ್ಯದಲ್ಲಿ ಮೈತ್ರಿ ಸರಕಾರದ ಪತನದ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಗುರುವಾರ (ಮಾ.5) ಮೊದಲ ಬಜೆಟ್‌ನ್ನು ಯಡಿಯೂರಪ್ಪ ಮಂಡಿಸಿದರು. 2020-21ರ ಸಾಲಿನ ರಾಜ್ಯ ಬಜೆಟ್‌ನಲ್ಲಿ ಕೃಷಿಗೆ ಸಿಕ್ಕಿದ್ದೇನು..?

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

01:05 PM (IST) Mar 05

ಭಾವನೆಗಳಿಗೆ BSY ಸ್ಪಂದನೆ: 'ಯಡಿಯೂರಪ್ಪಗೆ ಮಹದಾಯಿ ಹೋರಾಟಗಾರರಿಂದ ಅಭಿನಂದನೆ'

ಮಹದಾಯಿ ಯೋಜನೆ ಅನುಷ್ಠಾನಕ್ಕೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಬಜೆಟ್‌ನಲ್ಲಿ ಐದು ನೂರು ಕೋಟಿ ಅನುದಾನ ಮೀಸಲಿಟ್ಟದಕ್ಕೆ ಹೋರಾಟಗಾರರಲ್ಲಿ ಸಂತಸ ತಂದಿದೆ ಎಂದು ರೈತ ಸೇನೆ ರಾಜ್ಯಾಧ್ಯಕ್ಷ ವಿರೇಶ್ ಸೊಬರದಮಠ ಹೇಳಿದ್ದಾರೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

01:05 PM (IST) Mar 05

ಕರ್ನಾಟಕ ಬಜೆಟ್ 2020 : ತವರಿಗೆ ಸಿಎಂ ಉಡುಗೊರೆ ಎಷ್ಟು..?

ಕರ್ನಾಟಕ ಬಜೆಟ್ 2020 ರಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಮ್ಮ ತವರು ಜಿಲ್ಲೆಗೆ ಬರಪೂರ ಕೊಡುಗೆ ನೀಡಿದ್ದಾರೆ. 

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

01:03 PM (IST) Mar 05

ಮಠಗಳಿಗೆ ಸಿಕ್ಕಿದ್ದೆಷ್ಟು?

* ವಿಶ್ವಕರ್ಮ ಅಭಿವೃದ್ಧಿ - 25 ಕೋಟಿ

* ಆರ್ಯ ವೈಶ್ಯ ಅಭಿವೃದ್ಧಿ - 15 ಕೋಟಿ

* ಕ್ರೈಸ್ತ ಸಮುದಾಯ - 200 ಕೋಟಿ

* ಗೊಲ್ಲ ಸಮುದಾಯ - 10 ಕೋಟಿ

* ಅಂಬಿಗರ ಚೌಡಯ್ಯ - 50 ಕೋಟಿ 

* ಆರ್ಯವೈಶ್ಯ - 10 ಕೋಟಿ ರೂ. 

* ಕುಂಬಾರ ಸಮುದಾಯ - 20 ಕೋಟಿ

* ಅನುಭವ ಮಂಟಪ - 500 ಕೋಟಿ

* ಲಂಬಾಣಿ ಅಕಾಡೆಮಿ - 50 ಲಕ್ಷ

* ಕೊಪ್ಪಳ ಅಂಜನಾದ್ರಿ ಬೆಟ್ಟ - 20 ಕೋಟಿ

12:53 PM (IST) Mar 05

ಶನಿವಾರ ಮಕ್ಕಳು ಶಾಲೆಗೆ ಬ್ಯಾಗ್‌ ತರುವಂತಿಲ್ಲ!

* ಮಕ್ಕಳ ಬ್ಯಾಗ್‌ ಹೊರೆ ತಪ್ಪಿಸಲು ಕ್ರಮ

* ಪ್ರತಿ ತಿಂಗಳ 2 ಶನಿವಾರ ಬ್ಯಾಗ್‌ ರಹಿತ ದಿನ

* ಶನಿವಾರ ಮಕ್ಕಳು ಶಾಲೆಗೆ ಬ್ಯಾಗ್‌ ತರುವಂತಿಲ್ಲ


12:48 PM (IST) Mar 05

ಸಬ್ಅರ್ಬನ್ ರೈಲು ಯೋಜನೆಗೆ 500 ಕೋಟಿ!

ರಾಜ್ಯ ರಾಜಧಾನಿಗೆ ಬಿಎಸ್‌ವೈ ಬಂಪರ್!

* ಸಬ್ಅರ್ಬನ್ ರೈಲು ಯೋಜನೆಗೆ 500 ಕೋಟಿ

* ಟ್ರಾಫಿಕ್ ಹೆಚ್ಚಿರುವ 12 ಏರಿಯಾ ಅಭಿವೃದ್ಧಿಗೆ 500 ಕೋಟಿ ಮೀಸಲು

* ಶುಭ್ರ ಬೆಂಗಳೂರು ಯೋಜನೆಯಡಿ 999 ಕೋಟಿ ಅನುದಾನ