ಕರ್ನಾಟಕ ಬಜೆಟ್ 2020: ನಿರೀಕ್ಷೆಯಂತೆ ಅನ್ನದಾತನ ಕೃಷಿ ಕ್ಷೇತ್ರಕ್ಕೆ ಬಂಪರ್ ಕೊಡುಗೆ
ರಾಜ್ಯದಲ್ಲಿ ಮೈತ್ರಿ ಸರಕಾರದ ಪತನದ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಗುರುವಾರ (ಮಾ.5) ಮೊದಲ ಬಜೆಟ್‌ನ್ನು ಯಡಿಯೂರಪ್ಪ ಮಂಡಿಸಿದರು. 2020-21ರ ಸಾಲಿನ ರಾಜ್ಯ ಬಜೆಟ್‌ನಲ್ಲಿ ಕೃಷಿಗೆ ಸಿಕ್ಕಿದ್ದೇನು..?
ಬೆಂಗಳೂರು, (ಮಾ.05): ಸಿಎಂ ಯಡಿಯೂ ಅವರು 2020-21ರ ಸಾಲಿನ ಕರ್ನಾಟಕ ಬಜೆಟ್‌ನಲ್ಲಿ ನಿರೀಕ್ಷೆಯಂತೆ ಕೃಷಿಗೆ ಹೆಚ್ಚಿನ ಕೊಡುಗೆಗಳು ಘೋಷಿಸಿದ್ದಾರೆ.
ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದ ಸಿಎಂ ಯಡಿಯೂರಪ್ಪ, ಹಸಿರು ಶಾಲು ಹೊದ್ದು ಕೃಷಿ ಅಭಿವೃದ್ಧಿ ಬಗ್ಗೆ ಪ್ರಸ್ತಾಪಿಸುತ್ತಲೇ ರಾಜ್ಯ ಬಜೆಟ್ ಮಂಡನೆ ಆರಂಭಿಸಿದ್ದು, ನಿರೀಕ್ಷೆಯಂತೆ ಈ ಬಾರಿಯ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ ಸಾಕಷ್ಟು ಅನುದಾನವನ್ನು ನೀಡಿದ್ದಾರೆ.
"
ಕರ್ನಾಟಕ ಬಜೆಟ್ 2020: ಬೆಂಗಳೂರಿಗೆ ಬಂಪರ್ ಕೊಡುಗೆ ಕೊಟ್ಟ ಬಿಎಸ್‌ವೈ
ಕೃಷಿ ಸುಸ್ತಿ ಸಾಲದ ಬಡ್ಡಿ ಮನ್ನ
ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (DCC), ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (PCARD) ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (PACS) ಗಳಿಂದ ನೀಡಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸುಸ್ತಿ ಸಾಲಗಳ ಮೇಲಿನ ಬಡ್ಡಿ ಮನ್ನಾ.
ಇದಕ್ಕಾಗಿ 466 ಕೋಟಿ ರೂ. ಮೀಸಲಿಡಲಾಗಿದೆ. ಇದರಿಂದ 92 ಸಾವಿರ ರೈತರಿಗೆ ಪ್ರಯೋಜನ ಪಡೆಯಲಿದ್ದಾರೆ.ಆದ್ರೆ, ಸುಸ್ತಿ ಸಾಲವನ್ನ ಕಟ್ಟಿದ್ರೆ ಮಾತ್ರ ಇದು ಅನ್ವಯವಾಗಲಿದೆ.
Karnataka Budget 2020 Live | 2 ಶನಿವಾರ ಮಕ್ಕಳು ಶಾಲೆಗೆ ಬ್ಯಾಗ್ ತರುವಂತಿಲ್ಲ!
ಕೃಷಿ ಕ್ಷೇತ್ರಕ್ಕೆ ಸಿಕ್ಕಿದ್ದು..
* ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರದ 6000 ಜೊತೆ ರಾಜ್ಯ ಸರ್ಕಾರದಿಂದ 4000
* ಸಣ್ಣ ಹಾಗೂ ಅತಿಸಣ್ಣ ರೈತರಿಗೆ ವಾರ್ಷಿಕ 10000 ಜೊತೆಗೆ ರೈತರಿಗೆ ಹಾಗೂ ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್
* ಪ್ರಕೃತಿ ವಿಕೋಪ ಮತ್ತು ಹವಾಮಾನ ವೈಪರೀತ್ಯದಿಂದ ರೈತರಿಗಾಗುವ ನಷ್ಟ ಪರಿಹಾರಕ್ಕೆ 900 ಕೋಟಿ ವಿಮೆ
* ಬರ ನಿರೋಧಕ ಬೆಳೆ ಬೆಳೆಯಲು ರೈತ ಸಿರಿ ಯೋಜನೆಯಡಿ ಪ್ರತಿ ಹೆಕ್ಟೇರ್ಗೆ 10000 ದಿಂದ 20000 ರೂ ಪ್ರೋತ್ಸಾಹಧನ
* ಸಾವಯವ ಕೃಷಿ ಪ್ರೋತ್ಸಾಹಕ್ಕೆ 200ಕೋಟಿ ಅನುಧಾನ
* ಖಾಸಗಿ ಸಹಭಾಗಿತ್ವದಲ್ಲಿ 10 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ 10 ಕೋಲ್ಡ್ ಸ್ಟೋರೇಜ್ನಿರ್ಮಾಣಕ್ಕೆ 75 ಕೋಟಿ
* ಕೊಳೆತು ಹೋಗಬಹುದಾದ ಕೃಷಿ ಉತ್ಪನ್ನಗಳನ್ನ ದೆಹಲಿ, ಮುಂಬೈ, ತಿರುವನಂತಪುರಂಗೆ ಸಾಗಿಸಲು ಕೃಷಿ ರೈಲು ಯೋಜನೆ
* ಎತ್ತಿನಹೊಳೆ ಯೋಜನೆಗೆ ಪ್ತಸಕ್ತ ಸಾಲಿನಲ್ಲಿ ಮೊದಲನೇ ಹಂತದ ಕಾಮಗಾರಿಗಾಗಿ 1500 ಕೋಟಿ ಅನುದಾನ
* ರಾಜ್ಯದ ವಿವಿಧ ಭಾಗಗಳಲ್ಲಿ ಏತ ನೀರಾವರಿ ಯೋಜನೆ ಪ್ರಾರಂಭಿಸಲು 5000 ಕೋಟಿ ಮೀಸಲು
* ಹಂದಿ ಸಾಕಾಣಿಕೆ ಉತ್ತೇಜನಕ್ಕಾಗಿ ‘ಸಮಗ್ರ ವಹಾರ ಅಭಿವೃದ್ಧಿ’ ಯೋಜನೆಗೆ 5 ಕೋಟಿ ಮೀಸಲು
* ಸಾರ್ವಜನಿಕ ಸಹಭಾಗಿತ್ವದಲ್ಲಿ ಕುಕ್ಕುಟ ತ್ಯಾಜ್ಯ ಸಂಸ್ಕರಣೆ ಮತ್ತು ಮೌಲ್ಯ ವರ್ಧನ ಕೇಂದ್ರ ಸ್ಥಾಪನೆ
* ರಾಜ್ಯದಲ್ಲಿ ಹೈನುರಾಸುಗಳಲ್ಲಿ ಶೇ.90ರಷ್ಟು ಹೆಣ್ಣುಕರುಗಳನ್ನ ಪಡೆಯಲು ಕೃತಕ ಗರ್ಭಧಾರಣೆಗೆ 2 ಕೋಟಿ ಮೀಸಲು
* ‘ಮಹಿಳಾ ಮೀನುಗಾರರ ಸಬಲೀಕರಣ’ ಅಡಿಯಲ್ಲಿ 1000 ಮಹಿಳಾ ಮೀನುಗಾರರಿಗೆ ದ್ವಿಚಕ್ರ ವಾಹನ ನೀಡಲು 5 ಕೋಟಿ ಮೀಸಲು
* ಉಡುಪಿ ಜಿಲ್ಲೆ ಹೆಜಮಾಡಿ ಕೋಡಿ ಮೀನುಗಾರಿಕೆ ಬಂದರು ಸ್ಥಾಪನೆಗೆ 181 ಕೋಟಿ ಮೀಸಲು
* ಉಡುಪಿ ಜಿಲ್ಲೆ ಹಂಗಾರು ಕಟ್ಟೆಯಲ್ಲಿ 130 ಕೋಟಿ ವೆಚ್ಚದಲ್ಲಿ ಬಂದರು ಅಭಿವೃದ್ಧಿ
* ಹನಿ ಮತ್ತು ತುಂತುರು ನೀರಾವರಿಗೆ 627 ಕೋಟಿ ರೂ ಮೀಸಲು
* ಕೃಷಿ ಅಭಿವೃದ್ಧಿಗಾಗಿ ಕೃಷಿ ಆಯೋಗ ರಚನೆ
* ಕಿಸಾನ್ ಸಮ್ಮಾನ್ ಯೋಜನೆಗೆ 2600 ಕೋಟಿ ರೂ ಮೀಸಲು
* ರೈತರಿಗೆ, ಮೀನುಗಾರರಿಗೆ ಕ್ರೆಡಿಟ್ ಕಾರ್ಡ್ ವಿತರಣೆ
* ರಾಜ್ಯಾದ್ಯಂತ ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್ ಗಳ ಸ್ಪಾಪನೆ
* ರೈತರ ಮನೆ ಬಾಗಲಿಗೆ ಕೀಟನಾಶಕ
* ಮಹದಾಯಿ ಯೋಜನೆಗೆ 500 ಕೋಟಿ ರೂ ಘೋಷಣೆ
* ಕೃಷಿ ಉತ್ಪನ್ನ ಸಂಸ್ಕರಣಗೆ 10 ಶೀತಲ ಗೃಹ ನಿರ್ಮಾಣಕ್ಕೆ 75 ಕೋಟಿ ಮೀಸಲು
* ಹನಿ ಮತ್ತು ತುಂತುರು ನೀರಾವರಿಗೆ 627 ಕೋಟಿ ರೂ ಮೀಸಲು
* ರಾಜ್ಯದ ಪ್ರತಿ ಗ್ರಾಮಗಳಲ್ಲೂ ಜಲಗ್ರಾಮ್ ಕ್ಯಾಲೆಂಡರ್ ಸ್ಪಾಪನೆ
#Newsin100Seconds I ಈ ಕ್ಷಣದ ಪ್ರಮುಖ ಸುದ್ದಿಗಳು
"