ಕರ್ನಾಟಕ ಬಜೆಟ್ 2020 : ಅಡಕೆ ಬೆಳೆಗಾರರಿಗೆ ಬಂಪರ್
ಕರ್ನಾಟಕ ಬಜೆಟ್ 2020 ರಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಡಕೆ ಬೆಳೆಗಾರರಿಗೆ ಬಂಪರ್ ಕೊಡುಗೆ ನೀಡಿದ್ದಾರೆ. ರೈತರು ಸಾಲದ ಮೇಲಿನ ಬಡ್ಡಿ ಮನ್ನಾ ಪ್ರಯೋಜನ ಪಡೆದುಕೊಳ್ಳಲಿದ್ದಾರೆ.
ಬೆಂಗಳೂರು [ಮಾ.05]: ಕರ್ನಾಟಕ ಬಜೆಟ್ 2020ಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಡಕೆ ಬೆಳೆಗಾರರಿಗೂ ಕೊಡುಗೆ ನೀಡಿದ್ದಾರೆ.
ಅಡಕೆ ಬೆಳೆ ವಿವಿಧ ರೀತಿಯ ರೋಗಗಳಿಗೆ ತುತ್ತಾಗುತ್ತಿದ್ದು, ಈ ನಿಟ್ಟಿನಲ್ಲಿ ಸಿಎಂ ಈ ಬಾರಿಯ ತಮ್ಮ ಬಜೆಟ್ ನಲ್ಲಿ ಅಡಕೆ ಬೆಳೆಗಾರರತ್ತಲೂ ಗಮನ ಹರಿಸಿದ್ದಾರೆ.
ಅಡಕೆ ಬೆಳೆಗಾರರರು ಪಡೆದ ಸಾಲಕ್ಕೆ ಬಡ್ಡಿ ವಿನಾಯಿತಿ ನೀಡಲಾಗುತ್ತಿದೆ. 2 ಲಕ್ಷದವರೆಗೆ ಪಡೆದ ಸಾಲಕ್ಕೆ ಶೇ.5ರಷ್ಟು ಬಡ್ಡಿ ವಿನಾಯಿತಿ ನೀಡಲಾಗುತ್ತಿದೆ.
ಬಜೆಟ್ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮಧ್ಯಮಾವಧಿ ಹಾಗೂ ದೀರ್ಘಾವಧಿ ಹಾಗೂ ಕೃಷಿ ಸುಸ್ತಿ ಸಾಲಗಳ ಮೇಲಿನ ಬಡ್ಡಿ ಮನ್ನಾ ಮಾಡುವುದಾಗಿ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ಇದರ ಪ್ರಯೋಜನವನ್ನು 92 ಆವಿರಕ್ಕೂ ಅಧಿಕ ರೈತರು ಪಡೆದುಕೊಳ್ಳಲಿದ್ದಾರೆ.
ರೈತರಿಗೆ ಕಿಸಾನ್ ಕ್ರೆಡಿಟ ಕಾರ್ಡ್, ನಷ್ಟ ಬರಿಸಿಕೊಳ್ಳು ವಿವಿಧ ರೀತಿಯ ವಿಮಾನ ಯೋಜನೆಗಳನ್ನು ಘೋಷಿಸಲಾಗಿದೆ.
"