LIC Share Price:ಇಂದು ಸರ್ವಕಾಲಿಕ ಕುಸಿತ ದಾಖಲಿಸಿದ ಎಲ್ಐಸಿ ಷೇರು; ಹೂಡಿಕೆದಾರರಿಗೆ ನಷ್ಟದ ಮೇಲೆ ನಷ್ಟ

*ಸೆನ್ಸೆಕ್ಸ್ ಹಾಗೂ ನಿಫ್ಟಿ ಎರಡೂ ಕಡೆ ಎಲ್ಐಸಿ ಷೇರು ಬೆಲೆ ಶೇ.2ರಷ್ಟು ಇಳಿಕೆ
*ಬಿಎಸ್ಇಯಲ್ಲಿ ಎಲ್ಐಸಿ ಷೇರಿನ ಬೆಲೆ 759.05ರೂ.
*ಎನ್ ಎಸ್ ಇಯಲ್ಲಿ ಎಲ್ಐಸಿ ಷೇರಿನ ಬೆಲೆ 759.70ರೂ.
*ಕಂಪೆನಿಯ ಮಾರ್ಕೆಟ್ ಕ್ಯಾಪ್ 4.8 ಲಕ್ಷ ಕೋಟಿ ರೂ.ಗೆ ತಗ್ಗಿದೆ
 

LIC Share Price Drops Further to New All Time Low What LIC Investors Must Know

ಮುಂಬೈ (ಜೂ.7): ಭಾರತೀಯ ಜೀವ ವಿಮಾ ನಿಗಮದ (LIC) ಷೇರು (Share) ಮಂಗಳವಾರ (ಜೂ.7) ಮತ್ತೆ ಇಳಿಕೆ ಕಂಡಿದ್ದು, ಹೂಡಿಕೆದಾರರ (Investors) ಆತಂಕವನ್ನು ಹೆಚ್ಚಿಸಿದೆ. ಎಲ್ಐಸಿ ಷೇರು ಈ ರೀತಿ ಇಳಿಕೆ ದಾಖಲಿಸುತ್ತಿರೋದು ಇದು ಸತತ ಏಳನೇ ಬಾರಿಯಾಗಿದೆ. ಸೆನ್ಸೆಕ್ಸ್ (Sensex) ಹಾಗೂ ನಿಫ್ಟಿ (Nifty) ಎರಡೂ ಕಡೆ ಎಲ್ಐಸಿ ಷೇರು ಬೆಲೆ ಶೇ.2ರಷ್ಟು ಇಳಿಕೆಯಾಗಿದೆ. 

ಬಿಎಸ್ ಇಯಲ್ಲಿ (BSE) ಎಲ್ಐಸಿ ಷೇರಿನ ಬೆಲೆ ಶೇ.2.36ರಷ್ಟು ಅಥವಾ 18.35 ಪಾಯಿಂಟ್ಸ್ ಇಳಿಕೆ ಕಂಡಿದ್ದು, 759.05ರೂ. ತಲುಪಿದೆ. ಇನ್ನು ಎನ್ ಎಸ್ ಇಯಲ್ಲಿ ಶೇ.2.27ರಷ್ಟು ಅಥವಾ 17.65 ಪಾಯಿಂಟ್ಸ್ ಇಳಿಕೆ ಕಂಡು 759.70ರೂ.ನಲ್ಲಿ ಟ್ರೇಡ್ ಆಗುತ್ತಿದೆ. ಈ ಇಳಿಕೆಯಿಂದ ಕಂಪೆನಿಯ ಮಾರ್ಕೆಟ್ ಕ್ಯಾಪ್ 4.8 ಲಕ್ಷ ಕೋಟಿ ರೂ.ಗೆ ತಗ್ಗಿದೆ. ಆದರೂ ಎಲ್ಐಸಿ ದೇಶದ 7ನೇ ಅತ್ಯಂತ ಮೌಲ್ಯವುಳ್ಳ ಕಂಪೆನಿ ಎಂಬ ಸ್ಥಾನವನ್ನು ಉಳಿಸಿಕೊಂಡಿದೆ. 

LIC Profit:ನಾಲ್ಕನೇ ತ್ರೈಮಾಸಿಕದಲ್ಲಿಎಲ್ಐಸಿ ಲಾಭ ಗಳಿಕೆ 2,409 ಕೋಟಿ ರೂ. ; ಪ್ರತಿ ಷೇರಿಗೆ 1.50ರೂ. ಡಿವಿಡೆಂಡ್

ಎಲ್ಐಸಿ ಐಪಿಒ ಮೂಲಕ ಕೇಂದ್ರ ಸರ್ಕಾರ ತನ್ನ ಪಾಲಿನ ಶೇ.3.5ರಷ್ಟು ಷೇರುಗಳನ್ನು ಮಾರಾಟ ಮಾಡಿತ್ತು. 21,000 ಕೋಟಿ ರೂ. ಗಾತ್ರದ ಭಾರತದ ಅತೀದೊಡ್ಡ ಐಪಿಒ ಎಂಬ ಹೆಗ್ಗಳಿಕೆ ಗಳಿಸಿದ ಎಲ್ಐಸಿ ಐಪಿಒ ಮೇ 4 ರಿಂದ ಮೇ 9 ರ ತನಕ ಒಟ್ಟು 6 ದಿನಗಳ ಕಾಲ ನಡೆದಿತ್ತು. ಮೇ 17ರಂದು ಎಲ್ಐಸಿ ಷೇರುಗಳ ಲಿಸ್ಟಿಂಗ್ ನಡೆದಿತ್ತು. ಆ ದಿನ 949ರೂ. ಐಪಿಒ ಬೆಲೆಯ ಎಲ್ಐಸಿ ಷೇರುಗಳು 875.45 ರೂ.ಗೆ ದಿನದ ವಹಿವಾಟು ಮುಗಿಸಿದ್ದವು. ಅಂದ್ರೆ ಲಿಸ್ಟಿಂಗ್ ದಿನವೇ ಹೂಡಿಕೆದಾರರಿಗೆ 73.55ರೂ. ನಷ್ಟವಾಗಿತ್ತು. ಅದಾದ ಬಳಿಕ ಷೇರು ಮಾರುಕಟ್ಟೆಯಲ್ಲಿ 4 ಸೀಸನ್ ಗಳಲ್ಲಿ ಮಾತ್ರ ಎಲ್ಐಸಿ ಷೇರು ಗಳಿಕೆ ದಾಖಲಿಸಿತ್ತು. ಉಳಿದೆಲ್ಲ ಅವಧಿಯಲ್ಲೂ ಬರೀ ಕುಸಿತ ದಾಖಲಿಸಿತ್ತು. ಇಂದು (ಜೂ.7) ಎಲ್ಐಸಿ ಷೇರಿನ ಬೆಲೆ ಮತ್ತೆ ಕುಸಿತ ಕಂಡಿದೆ. ಇದ್ರಿಂದ ಪ್ರತಿ ಷೇರಿನ ಮೇಲೆ ಹೂಡಿಕೆದಾರರಿಗೆ 190ರೂ. ನಷ್ಟವಾಗಿದೆ ಎಂದು ಬಿಎಸ್ ಇ ಅಂಕಿಅಂಶಗಳು ತಿಳಿಸಿವೆ.

ಜಾಗತಿಕ ಬ್ರೋಕರೇಜ್ ಹೌಸ್ ಎಮ್ಕೈ ಗ್ಲೋಬಲ್ ಎಲ್ಐಸಿ ಷೇರನ್ನು'ಕುಣಿಯಲಾಗದ ಆನೆ' ಎಂದು ಕರೆದಿದೆ. ಗಾತ್ರ, ವಿಮಾ ವಲಯದಲ್ಲಿ ಅದರ ಅಧಿಪತ್ಯ ಹಾಗೂ ಪರಂಪರೆಯೇ ಎಲ್ಐಸಿ ಸಂಸ್ಥೆಯ ಬೆಳವಣಿಗೆಗೆ ದೊಡ್ಡ ತೊಡಕಾಗಿವೆ ಎಂದು ಎಮ್ಕೈ ಗ್ಲೋಬಲ್ ಅಭಿಪ್ರಾಯ ಪಟ್ಟಿದೆ. 'ಎಲ್ಐಸಿ ಷೇರಿನ ಬೆಲೆ ಮಾರಾಟದ ಒತ್ತಡಕ್ಕೆ ಸಿಲುಕಿದೆ. ಮಾರಾಟ ಮುಂದುವರಿಯಲಿದ್ದು,ಮುಂದಿನ ಟ್ರೇಡಿಂಗ್ ಅವಧಿಯಲ್ಲಿ ಷೇರಿನ ಬೆಲೆ 700 ಮಟ್ಟಕ್ಕೆ ಮುಟ್ಟುವ ಸಾಧ್ಯತೆಯಿದೆ' ಎಂದು ಷೇರ್ ಇಂಡಿಯಾ ಸಂಸ್ಥೆಯ ಉಪಾಧ್ಯಕ್ಷ ಹಾಗೂ ಸಂಶೋಧನಾ ಮುಖ್ಯಸ್ಥ ರವಿ ಸಿಂಗ್ ತಿಳಿಸಿದ್ದಾರೆ.

ಎಲ್ಐಸಿ ಮಾರ್ಕೆಟ್ ಕ್ಯಾಪ್
ಮುಂಬೈ ಷೇರು ವಿನಿಮಯ ಕೇಂದ್ರ (BSE) ನೀಡಿರುವ ಅಂಕಿಅಂಶಗಳ ಪ್ರಕಾರ ಎಲ್ಐಸಿ ಮಾರ್ಕೆಟ್ ಕ್ಯಾಪ್ 4,80,098.95 ಕೋಟಿ ರೂ. ಇದೆ. 

Success Women: ಜಗತ್ತು ಸುತ್ತುವ ಈ ಯುವತಿ ಆಸೆಗೆ ಆಸರೆಯಾಗಿದ್ದು ಷೇರು ಮಾರುಕಟ್ಟೆ

ಎಲ್ಐಸಿ ಡಿವಿಡೆಂಡ್
ಎಲ್ಐಸಿ ನಿರ್ದೇಶಕರ ಮಂಡಳಿ 2022ರ ಮಾರ್ಚ್ 31ಕ್ಕೆ ಕೊನೆಗೊಂಡ ಸಾಲಿಗೆ 10ರೂ. ಮುಖಬೆಲೆಯ ಪ್ರತಿ ಈಕ್ವಿಟಿ ಷೇರಿಗೆ  1.50 ರೂ. ಡಿವಿಡೆಂಡ್ (Dividend) ನೀಡಲು ಶಿಫಾರಸ್ಸು ಮಾಡಿದೆ.

ಲಾಭದಲ್ಲಿ ಇಳಿಕೆ
ಭಾರತೀಯ ಜೀವ ವಿಮಾ ನಿಗಮ (LIC) 2022ರ ಮಾರ್ಚ್ ಗೆ ಅಂತ್ಯಗೊಂಡ ನಾಲ್ಕನೇ ತ್ರೈಮಾಸಿಕದ ಫಲಿತಾಂಶದಲ್ಲಿ  2,409 ಕೋಟಿ ರೂ. ನಿವ್ವಳ ಲಾಭ (Net Profit) ಘೋಷಿಸಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 2,917 ಕೋಟಿ ರೂ. ಲಾಭ ಗಳಿಸಿದ್ದು, ಈ ವರ್ಷ ಶೇ.17ರಷ್ಟು ಇಳಿಕೆಯಾಗಿದೆ. 

Latest Videos
Follow Us:
Download App:
  • android
  • ios